ಸುತ್ತ ಬೆಟ್ಟ ಹರಿವ ನದಿ, ನಮ್ಮನ್ನೆಲ್ಲಾ ಕರೆಯಲಿ …ಕವಿ ನಾಗರಾಜ ಬಿ. ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಹಾಡೋ ಹಕ್ಕಿಯ
ಬೆಳಗಿನ ಪುಟದಲಿ
ಬಣ್ಣದ ಹೂವೊಂದು
ನಗುತಾ ಅರಳಲಿ
ಬುವಿಯಲಿರುವ ನೆಲದಲ್ಲಿ
ಬಳ್ಳಿಯೊಲವು ಹುಟ್ಟಲಿ
ಚೆಂದಕಾಗಿ ಎಲೆ ಹರಡಿ
ಹೂ ಹಾಸಿ ಉಳಿಯಲಿ
ನಗುವ ನಾವೆಯಲ್ಲಿ
ಹೊತ್ತು ಮೂಡಿ ಕರಗಲಿ
ಪ್ರೀತಿ ಮಾತಿನಲ್ಲಿ
ಸಾಲುಗಳು ಹೊಳೆಯಲಿ
ಲೋಕಕೊಂದು ಹಳ್ಳಿ ಹಾಡು
ದಾರಿಯಂತೆ ಕಾಣಲಿ
ಹಳ್ಳಿ ಮಣ್ಣ ಸೊಗಡಿನಲ್ಲಿ
ಮಣ್ಣ ಹಾಡು ಕೇಳಲಿ
ಸುತ್ತ ಬೆಟ್ಟ ಹರಿವ ನದಿ
ನಮ್ಮನ್ನೆಲ್ಲಾ ಕರೆಯಲಿ
ಒಲವು ಹಂಚಿ ಮಳೆ ಸುರಿಸಿ
ಪ್ರೀತಿ ಧಾರೆ ಹರಿಯಲಿ
ಹಾರೋ ಮೋಡದಲ್ಲಿ
ಹಕ್ಕಿ ಹಾರಿ ತೇಲಲಿ
ಇರುವ ನೆಲದಲ್ಲಿ
ಹಸಿರು ಬೀಜ ಹೆಚ್ಚಲಿ
- ನಾಗರಾಜ ಬಿ. ನಾಯ್ಕ – ಹುಬ್ಬಣಗೇರಿ, ಕುಮಟಾ.
