“ಭೂಮಿಗೆ ಬಂದನು ಯಾತ್ರಿಕನಾಗಿ” ಕವನ

ಬೆಳ್ಳಕ್ಕಿ ಸಾಲಿಗೆ ಬಾನಾಗಿ, ಸುರಿವ ಮಳೆ ಹನಿಗೆ ಮೋಡವಾಗಿ …ಪ್ರೊ. ಅಶೋಕ ಕುಮಾರ ಎಸ್ ಅವರ ಕವನವನ್ನು ಪೂರ್ತಿಯಾಗಿ ಓದಿ…

ಕತ್ತಲೆ ಕಳೆದು ಬೆಳಕಾಗಿ
ಹಸಿರು ಬಳ್ಳಿಯ ಚಿಗುರಾಗಿ
ಮನದ ಭಾರ ಕಳೆದು ಹಗುರಾಗಿ.

ಬಾನಿಗೆ ಬೆಳದಿಂಗಳಾಗಿ
ರವಿ ಕಿರಣಕ್ಕೆ ಮೂಡಣವಾಗಿ
ಬಾಳ ಪಯಣಕ್ಕೆ ಹೊಂಗನಸಾಗಿ.

ಬೆಳ್ಳಕ್ಕಿ ಸಾಲಿಗೆ ಬಾನಾಗಿ
ಸುರಿವ ಮಳೆ ಹನಿಗೆ ಮೋಡವಾಗಿ
ಉಸಿರು ನೀಡುವ ಹಸಿರು ಬಳ್ಳಿಯಾಗಿ.

ಹುಣ್ಣಿಮೆಯ ಚಂದ್ರನಾಗಿ
ಕರಿ ಮೋಡದಲ್ಲಿ ಕೋಲ್ಮಿಂಚಾಗಿ
ಸೃಷ್ಟಿ ಸೊಬಗಿಗೆ ಧುಮ್ಮಿಕ್ಕುವ ಜಲಧಾರೆಯಾಗಿ.

ತಂಪನೆರೆವನು ಮರದ ನೆರಳಾಗಿ
ಮಯೂರ ನರ್ತನಕ್ಕೆ ಮರುಳಾಗಿ
ಕೂಗುವ ಕೋಗಿಲೆಯ ಕಂಠಕ್ಕೆ ಕೊರ ಕೊರಳಾಗಿ.

ಭೂಮಿಗೆ ಬಂದನು ಯಾತ್ರಿಕನಾಗಿ
ಬದುಕುವುದು ಕಲಿತನು ಮನುಜನಾಗಿ
ಸ್ನೇಹದ ಸೆಲೆಯಲ್ಲಿ ಬಾಳ್ವನು ಮಾನವನಾಗಿ.


  • ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading