‘ಹಂಬಲ’ ಕವನ – ಎ.ಎನ್.ರಮೇಶ್.ಗುಬ್ಬಿ

“ಹಾಗೆ ಒಂದು ಹನಿಗವಿತೆ. ಸ್ವೀಟ್ ಸ್ವೀಟ್ ಭಾವಗಳ ಕ್ಯೂಟ್ ಕ್ಯೂಟ್ ಅಕ್ಷರ ಪ್ರಣತೆ. ಈ ಹನಿ ಪ್ರತಿ ಜೀವ ಮಿಲನಗಳ ಹಂಬಲವೂ ಹೌದು. ಭಾವ ಬಂಧನಗಳ ಸಂಚಲನವೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಮುಖಾಮುಖಿ
ಆಗುವುದೆಂದರೆ..
ಮುಖವಾಡಗಳ
ಧರಿಸಿ ಅಲ್ಲ.!
ಮನದ ಮಾತುಗಳ
ತೆರೆದು ನಲ್ಲ.!!

ನಿನ್ನೊಳು ನಾನು
ನನ್ನೊಳು ನೀನು
ಐಕ್ಯವಾಗುವುದೆಂದರೆ..
ಬಾಹುಬಂಧನದಿ ಅಲ್ಲ.!
ಭಾವಬಂಧನದಿ ನಲ್ಲ!!


  • ಎ.ಎನ್.ರಮೇಶ್. ಗುಬ್ಬಿ- ಲೇಖಕರು, ಕವಿಗಳು, ಕೈಗಾ.

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading