‘ಹರಿದಾರಿ’ ಕವನ – ಅನಂತ ನಾಯಕ

‘ನಡುಬಾಗಿತು ನಿಡುಸುಯ್ಯುತ, ಎಡೆ ಸೊಡರಲಿ ಇಡುವ’….ಮುಂದೆ ಓದಿ ಕವಿ ಅನಂತ ನಾಯಕ ಲೇಖನಿಯಲ್ಲಿ ಅರಳಿದ ಸುಂದರ ಕವಿತೆ….

ಸರಿಸಮಯದಿ ಕರೆ ಬಂದಿದೆ
‘ಹರಿ’ದಾರಿಗೆ ಮನವೇ|
ಗುರಿಯಿಲ್ಲದ ತಿರುಗಾಟವು
ಕಡೆಯಾಗಲಿ ತನುವೇ||1||

ತಡೆ ತರುತಿಹ ಎಳಸಿಕೆಗಳ
ಕಡೆಗಾಣಿಸಲೆಂದು|
ನುಡಿ ನಡೆಯಲಿ ಅಪ್ಪಟತನ
ದಿಟವಾಗಲಿ ಇಂದು||2||

ಪರಿ ಪರಿಯಲಿ ಪರಿವಾರದ
ಪರದಾಟವ ಬಿಡುವ|
ಹರಿಕಾರಗೆ ಶರಣಾಗಲು
ಅಪಚಾರವ ಕಳೆವ||3||

ನಡುಬಾಗಿತು ನಿಡುಸುಯ್ಯುತ
ಎಡೆ ಸೊಡರಲಿ ಇಡುವ|
ತಡಬೇಡವು ಅಡಿಯಡಿಯಲಿ
ಜಡವಾಗದೆ ನಡೆವ||4||

ಭಿಡೆ ಏತಕೆ ಪಾಡುತಲಿರು
ಬೆಡಗ ಬಾಲ ನಲಿವ
ಬೆಗಡಿಲ್ಲದೆ ಹೆಡೆ ಏರುತ
ಬಿಡುವಿಲ್ಲದೆ ಕುಣಿವ||5||


  • ಅನಂತ ನಾಯಕ – ಕವಿಗಳು, ಹಿರಿಯ ಲೇಖಕರು, ಕತೆಗಾರರು, ಬೆಂಗಳೂರು

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading