ಕವಿ ನಾಗರಾಜ ಬಿ.ನಾಯ್ಕ ಅವರ ಕವಿತೆಯ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಮಣ್ಣ ಕಣ ಕಣದಿ
ಅಂಟಿರುವ ಅನುಬಂಧ
ಭಾವ ಬಂಧಗಳ
ಒಲವ ಒರತೆಗಳ
ಸುತ್ತ ನಿಲ್ಲುವ ಸಂಬಂಧ
ಬೆಳಕ ಮೌನದಿ
ಹರಿವ ನೀರ ಲಹರಿ
ಒಂದು ಕಥೆಗೆ
ಹಲವು ಸಂತಸ
ಒಂದು ಹಣತೆಗೆ
ನೂರು ಭರವಸೆ
ಸೋತಾಗಲೆಲ್ಲಾ ಕರೆವ
ಬೆಳಕ ಸೊಬಗು ನಿಂತು
ಕತ್ತಲೆ ಕಾಣದ ಚಿತ್ರ
ಗುರುತು ಹಾಕಿದಂತಿದೆ
ಯಾಚನೆ ಯೋಚನೆ
ದಾಟಿದ ನಂತರ
ಉಳಿವ ಕೌತುಕ ಹಲವು
ಎಲ್ಲವೂ ಬೆಳಕಿನ
ಹಣತೆಯ ರೂಪ
ಪ್ರತಿ ಹಣತೆಗೂ
ಒಂದೊಂದು ಪ್ರತಿರೂಪ
ಪರಿಭಾವಿಸಿದರೆ
ಒಂದರಲ್ಲಿ ಹಲವು
ಮುಖದ ಆಭರಣದಂತೆ…..
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
