“ಹೆಣ್ಣು ಅಬಲೆಯಲ್ಲ ಸಬಲೆ” ಎಂಬುದರಲ್ಲಿ ಎರಡು ಮಾತಿಲ್ಲ. ಹೆಣ್ಣು ಸಮಾಜದ ಕಣ್ಣು, ಭಾರತದ ಸಂಸ್ಕೃತಿಯಲ್ಲಿ ಒಂದು ದೇವರು ಮತ್ತು ಹೆಣ್ಣಿಗೆ ಉನ್ನತವಾದ ಸ್ಥಾನಮಾನವಿದೆ. ಅವರನ್ನು ದೇವರು ಮತ್ತು ಹೆಣ್ಣನ್ನು ಪೂಜ್ಯನೀಯ ಸ್ಥಾನದಲ್ಲಿ ನಾವೆಲ್ಲರೂ ಕಾಣುತ್ತೇವೆ. “ಹೆಣ್ಣು ಈ ಸಮಾಜದ ಕಣ್ಣು” ಅದ್ಭುತವಾದ ಶಕ್ತಿ ಮಾತೆಯಾಗಿ, ಮಡದಿಯಾಗಿ, ಸಂಗಾತಿಯಾಗಿ, ತನ್ನ ಕೊನೆ ಉಸಿರು ಇರುವವರೆಗೂ ನಮ್ಮನ್ನು ಸಾಕಿ ಸಲುಹುವವಳು ಹೆಣ್ಣು, ಲೇಖಕರಾದ ಓಂಕಾರ ಪಾಟೀಲ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
“ಹೆಣ್ಣು ಅಬಲೆಯಲ್ಲ ಸಬಲೆ” ಎಂಬುದು ಕೇವಲ ಘೋಷಣೆಯಲ್ಲ ಅದು ಇಂದಿನ ವಾಸ್ತವ ಸ್ಥಿತಿ, ಕಾರಣ ಇಂದಿನ ಮಹಿಳೆಯರು ಸುಶೀಕ್ಷಿತರಾಗಿ ಕುಟುಂಬದ ಜವಾಬ್ದಾರಿ ಜೊತೆ ಕಷ್ಟನೋವುಗಳನ್ನು ಸಹಿಸಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ತಮ್ಮ ಸಾಮರ್ಥ್ಯ ಶಕ್ತಿಯನ್ನು ಸಾಬೀತು ಪಡಿಸಿ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದಾಳೆ.
ಮಹಿಳೆಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಕ್ರೀಡೆ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾಗಿ ಉದ್ಯೋಗ ಮತ್ತು ಉದ್ಯಮಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಮಾಜಕವಾಗಿ ಸ್ವಾವಲಂಬಿಗಳಾಗುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕುಟುಂಬದ ನಿರ್ವಹಣೆಯಿಂದ ಹಿಡಿದು ದೇಶದ ಆಡಳಿತದ ಚುಕ್ಕಾಣಿ ಹಿಡಿಯುವವರೆಗೂ ಯಶಸ್ವಿಯನ್ನು ಸಾಧಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಗಂಡನಾದವನು ಕುಡಿತದ ಚಟಕ್ಕೆ ದಾಸನಾಗಿ ಕುಟುಂಬ ನಿರ್ವಹಣೆಯಲ್ಲಿ ವಿಫಲನಾದಗ ತನ್ನ ಮಕ್ಕಳು ಹಸುವಿನಿಂದ ಮರುಗುವದನ್ನು ಕಂಡು ಅಲ್ಲಿ ಇಲ್ಲಿ ಸಾಲಸುಲ ಮಾಡಿ ಹಣ್ಣಿನ ವ್ಯಾಪಾರ, ಮೀನಿನ ವ್ಯಾಪಾರ, ತರಕಾರಿ, ಬಳೆ ವ್ಯಾಪಾರ, ಹೀಗೆ ಹತ್ತು ಹಲವಾರು ರೀತಿಯಲ್ಲಿ ಸಣ್ಣಸಣ್ಣ ವ್ಯಾಪಾರ ಮಾಡುವ ಆಶಿಕ್ಷಿತ ಮಹಿಳೆಯಿಂದ ಹಿಡಿದು ಹಿಡಿದು ವಿದ್ಯಾರ್ಜನೆ ಮಾಡಿದ ಮಹಿಳೆಯರ ವರಗೆ ಸ್ವಂತ ಉದ್ಯೋಗ ಉದ್ಯಮ ಸೃಷ್ಟಿಸಿಕೊಂಡು ಸ್ವಾವಲಂಭಿ ಬದುಕನ್ನು ಸಾಗಿಸುತ್ತಿದ್ದಾರೆ.
ಹೀಗಾಗಿ “ಹೆಣ್ಣು ಅಬಲೆಯಲ್ಲ ಸಬಲೆ” ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿಜೀಯವ ಒಂದು ಮಾತು ನೆನಪಾಗುತ್ತದೆ. “ಮದ್ಯರಾತ್ರಿ ಒಂಟಿ ಮಹಿಳೆ ಸಂಚಿರಿಸುವ ಸಾಮರ್ಥ್ಯ ಬಂದಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿದಂತೆ” ಅನ್ನುವ ಮಾತು ಇತ್ತೀಚಿನ ಕೆಲವು ಘಟನೆಗಳು ನಡೆದಿರುವುದು ಹಾಗು ನಿರಂತರ ನಡೆಯುತ್ತಿರುವುದು ನೋಡಿದರೆ ಅಕ್ಷರಸಹ ಸತ್ಯ ಅನಿಸುತ್ತದೆ.
- ಗಂಡ ಕೆಲಸಕ್ಕೆ ಹೋಗುತ್ತಿಲ್ಲ ಎಂದು ತಾಯಿಯೊಬ್ಬಳು ನೊಂದು ತನ್ನ ಮಗುವಿಗೆ ಉಸಿರುಗಟ್ಟಿಸಿ ಸಾಯಿಸುತ್ತಾಳೆ.
- ಕೌಟುಂಬಿಕ ಕಲಹದ ಕಾರಣಕ್ಕೆ ಮನನೊಂದು ತಾಯಿ ತನ್ನ ಮಗುವನ್ನು ನೇಣಿಗೆ ಹಾಕಿ ತಾನು ಕೂಡ ನೇಣಿಗೆ ಕೊರಳುಡ್ದುತ್ತಾಳೆ.
- ಸುಶಿಕ್ಷಿತ ಅವಿವಾಹಿತ ಹೆಣ್ಣುಮಗಳು ಅತ್ಯಾಚಾರಕ್ಕೋಳಗಾಗಿ ಗರ್ಭಧರಿಸಿ ಸಮಾಜಕ್ಕೆ ಹೆದರಿ ಗರ್ಭಪಾತ ಮಾಡಿಸಿಕೊಂಡು ಸತ್ತಿರುವದು ಹೀಗೆ ಎಷ್ಟೋ ಹೆಣ್ಣುಮಕ್ಕಳು ಶೋಷಣೆ, ಅತ್ಯಾಚಾರ ದೌರ್ಜನ್ಯಕ್ಕೋಳಗಾಗಿ ಸಮಾಜ ಹಾಗು ತನ್ನ ಕುಟುಂಬದ ಪರಿಸರಕ್ಕೆ ಹೆದರಿ ತನ್ನ ನೋವನ್ನು ಸಹಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿರಂತರ ನಡೆಯುತ್ತಿರುವುದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ.
ಹೀಗಾಗಿ ಆತ್ಮೀಯರೇ ಸಮಾಜ ಮತ್ತು ಪಾಲಕರು ಈ ನಿಟ್ಟಿನಲ್ಲಿ ನಿರ್ಗತಿಕ, ಶೋಷಣೆಗೊಳಗಾದ ಹೆಣ್ಣುಮಕ್ಕಳಿಗೆ ದೇಶಕ್ಕಾಗಿ ಸಾಧನೆಗೈದ ವೀರ ರಾಣಿ ಕಿತ್ತೊರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಶ್ಮೀಬಾಯಿ, ದೀನ ದಲಿತರ ಮಾತೆಯಾದ ಮದರ ತೆರೆಸಾ, ದೇಶದ ಚುಕ್ಕಾಣಿ ಹಿಡಿದ ಮೊದಲ ಮಹಿಳೆ ಪ್ರಧಾನಿ ಶ್ರೀಮತಿ ಇಂದಿರಾಗಾoಧಿ, ಇಂದಿನ ರಾಷ್ಟ್ರಪತಿ ದ್ರೌಪತಿ ಮುರುಮ್, ಪೊಲೀಸ್ ಅಧಿಕಾರಿ ಕಿರಣ ಬೇಡಿ, ಗಗನಯಾನಿ ಕಲ್ಪನಾ ಚಾವಲಾ, ಕ್ರೀಡೆಯಲ್ಲಿ ಸಾಧನೆಗೈದ ಸಾನಿಯಾ ಮಿರ್ಜಾ, ಮೇರಿ ಕೋಂ, ಮಿಥಾಲಿ ರಾಜ, ಇನ್ಫೋಸಿಸ್ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ ಮುಂತಾದ ಸಾಧಕರ ಬದುಕಿನ ಆದರ್ಶಗಳನ್ನು ಬಾಲ್ಯದಿಂದಲೆ ಮಕ್ಕಳಿಗೆ ತಿಳಿಸುವ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ.
- ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.
