ಆರೋಗ್ಯಕರ ಅಡುಗೆ ದೇಹಕ್ಕೆ ಒಳ್ಳೆಯದು. ಅದನ್ನು ಮನೆಯಲ್ಲಿ ಮಾಡಿಕೊಂಡರೆ ಇನ್ನೂ ಒಳ್ಳೆಯದು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹೆಸರುಕಾಳು ಪನ್ನೀರ್ ಚಪಾತಿ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ಓದಿ ತಿಳಿದು ಮನೆಯಲ್ಲಿ ಮಾಡಿನೋಡಿ…

ಬೇಕಾಗುವ ಪದಾರ್ಥಗಳು :
- ಹೆಸರು ಕಾಳು – ಒಂದು ಪಾವು
- ಪನೀರ್ – 100 ಗ್ರಾಂ
- ರುಚಿಗೆ ತಕ್ಕಷ್ಟು ಉಪ್ಪು
- ಹಸಿಮೆಣಸಿನ ಕಾಯಿ -ಅವರ ಆಯ್ಕೆ
- ಜೀರಿಗೆ – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಗೋಧಿಹಿಟ್ಟು
ಮಾಡುವ ವಿಧಾನ :
ಹೆಸರು ಕಾಳು ಮೂರು ಸಲ ತೊಳೆದಿದ್ದರಿಂದ 5 ಗಂಟೆ ನೆನೆಸಿಡಿ. ಜಾಸ್ತಿ ಹೊತ್ತು ನೆನೆಸಿದರು ಪರ್ವಾಗಿಲ್ಲ. ಈಗ ನೆನೆಸಿದ ಹೆಸರು ಕಾಳನ್ನು ನೀರಿಲ್ಲದಂತೆ ಸೋಸಿಕೊಂಡು ಹಸಿ ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲಿಗೆ ಎಣ್ಣೆ ಹಾಕಿ ಜೀರಿಗೆ, ರುಬ್ಬಿದ ಮಸಾಲೆ ಹಾಕಿ ಗಟ್ಟಿ ಆಗುವ ತನಕ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಚಪಾತಿ ಲಟ್ಟಿಸಿ.ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು, ಹಾಗೂ ಪನ್ನೀರ್ ಸ್ಟಫ್ ಮಾಡಿ ಕಾದ ತವಾ ಮೇಲೆ ಹಾಕಿ 2 ಬದಿ ಕೆಂಪಗೆ ಕಾಯಿಸಿ. ತುಪ್ಪ, ಬೆಣ್ಣೆ, ಗಟ್ಟಿ ಮೊಸರಿನೊಂದಿಗೆ ಸವಿಯಿರಿ.
ನಿಮಗೆ ಬೇಕಾದಂತೆ ಹೂರಣ ಮಾಡಿಕೊಳ್ಳಿ. ಆದರೆ ನಾನು ಹೀಗೆ ಕೋನಾಕಾರದಲ್ಲಿ ಮಾಡಿದ್ದೇನೆ.
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು
