ಅಪ್ಪಯ್ಯ.ಯು ಕಾಸರಗೋಡು ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಅನ್ನಬ್ರಹ್ಮನ ಮರೆತು
ಇನ್ಯಾರ ನೆನೆಯುವರೊ
ಮಣ್ಣಲ್ಲಿ ಬೆಳೆದ ಅನ್ನವ
ಮಣ್ಣಿಗೇ ಒಗೆಯುವಿರೊ?
ಹೊಟ್ಟೆಹಸಿದವನಿಗೆ
ಅನ್ನವೆ ದೇವರುl
ನಿಮ್ಮ ತಟ್ಟೆಯಲಿರುವ ಅನ್ನವು
ಬಡ ರೈತಾಪಿ ಜನರ ಬೆವರು
ಒಂದೆಡೆ ಹಸಿವೆಯೇ ಇಲ್ಲದೆ
ಹೊರಳಾಡುವ
ಕೋಟ್ಯಾದಿಪತಿಗಳುl
ಇನ್ನೊಂದೆಡೆ ಒಂದು ಹೊತ್ತಿಗೂ
ಗತಿಇಲ್ಲದ ಬಿಕ್ಷಾಂದೇಹಿಗಳು
ಮದುವೆ ಮುಂಜಿಗಳಲ್ಲಿ
ತರತರದ ಅಡುಗೆಗಳುl
ಬೇಕುಬೇಕೆಂಬ ಮೋಹದಲಿ
ಬಡಿಸಿ ಕೊಂಬರುl
ಹೊಟ್ಟೆತುಂಬಿದಾಗ ತಟ್ಟೆಯಲೇ
ಉಳಿಸಿ ಕೈತೊಳೆಯುವರುl
ಉಳಿದ ಮೃಷ್ಟಾನ್ನಭೋಜನವೆಲ್ಲವನು
ಸುತ್ತಿಕಟ್ಟಿ ಮಣ್ಣಲ್ಲಿ ಒಗೆವರು
ಹುಟ್ಟಿಸಿದಾತ ಹುಲ್ಲು ಮೇಯಿಸಿಯಾನೆ?
ಬಡವನಿಗೂಆತ ಕೊಟ್ಟು ಕಳಿಸಿದ್ದಾನಲ್ಲ ಗೇಣು ಹೊಟ್ಟೆl
ಆದರೊ ಒಂದುಹೊತ್ತಿಗೂ ತುತ್ತು ಸಿಗದೆ
ಖಾಲಿ ಇದೆ ಹಲವರ ಹೊಟ್ಟೆ
- ಅಪ್ಪಯ್ಯ.ಯು ಕಾಸರಗೋಡು.
