‘ಜೊತೆ ಜೊತೆಯಲಿ’ ಕವನ – ವಿ.ಎಂ.ಎಸ್.ಗೋಪಿ

ನನ್ನ ಜೊತೆಯಾಗಿ ಸೂರ್ಯ, ಚಂದ್ರನಷ್ಟೇ ಬೆಳಕು ಚಲ್ಲುತಿರು …ವಿ.ಎಂ.ಎಸ್.ಗೋಪಿ ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಕವಿತೆ, ತಪ್ಪದೆ ಮುಂದೆ ಓದಿ…

ಜೊತೆ ಜೊತೆಯಲಿ
ನಿನ್ನ ಜೊತೆಯಲಿ
ಇರಬೇಕು…
ನಾ ಹೀಗೆ

ನೀ ಯಾರು ನಾ ಯಾರು
ತಿಳಿಯದ ಪರಿಚಯ
ನಮ್ಮ ಸ್ನೇಹಿತರೊಂದಿಗೆ ಅಲ್ಲವೆ
ನಮ್ಮಿಬ್ಬರ ಪರಿಚಯ
ಈ ಸ್ನೇಹ ಈ ಪ್ರೀತಿ

ನಮ್ಮ ಪ್ರೀತಿ ಪ್ರೇಮವೇ
ಈ ಪ್ರೀತಿ ಲೈಲಾ ಮಜ್ನು
ರೋಮಿಯೋ ಜೂಲಿಯೆಟ್

ಪ್ರೀತಿ ಇಲ್ಲದಿದ್ದರು,
ನನ್ನ ಪ್ರೀತಿ ಜೀವನದ ಕೊನೆಯವರೆಗೂ
ಜೊತೆ ಜೊತೆಯಲಿ

ನನ್ನ ಜೊತೆಯಾಗಿ ಇರಲಿ
ಸೂರ್ಯ ಚಂದ್ರನಷ್ಟೇ
ಬೆಳಕು ಚೆಲ್ಲಲ್ಲಿ ಬಾಳಿನಲಿ

ನಮ್ಮ ಮನೆಯ ಜ್ಯೋತಿ ಬೆಳಗಿಸಲು
ನೀ ಇರುವಿಯೇ ಗೆಳತಿ
ನೀ ಆಗು ನನಗೆ ಸಂಗಾತಿ
ಈ ಜೀವನ ಪ್ರಯಾಣದವರೆಗೂ
ಆಗು ನೀ ಒಡತಿ..


  • ವಿ.ಎಂ.ಎಸ್.ಗೋಪಿ – ಲೇಖಕರು, ಸಾಹಿತಿಗಳು ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading