ಚಂಪಕಳಿಗೂ ಆನಂದಪುರಂಕ್ಕೂ ಏನು ಸಂಬಂಧ

ರಂಗೋಲೆ ಪ್ರವೀಣೆ ಚಂಪಕಳಿಂದ ಆನಂದಪುರಂ ಎಂಬ ಹೆಸರು ನಮ್ಮೂರಿಗೆ ಬಂದಿದ್ದು, ರಂಗೋಲಿ ಸ್ಪರ್ಧೆ ದೇವರಿಗೆ ಸಲ್ಲಿಸುವ ಒಂದು ಸೇವೆಯೂ ಹೌದು. ರಂಗೋಲಿ ಸ್ಪರ್ಧೆಯ ಹಿಂದಿದೆ ಒಂದು ಕತೆಯ ಕುರಿತು ಅರುಣ್ ಪ್ರಸಾದ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ನಮ್ಮ ಊರಾದ ಯಡೇಹಳ್ಳಿಯ ಹೊಸನಗರ ರಸ್ತೆಯ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವರ 18ನೇ ವಷ೯ದ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ನಡೆಯಿತು.

ದೇವಾಲಯದಲ್ಲಿ ಪ್ರತಿ ವಷ೯ ರಥೋತ್ಸವದ ಹಿಂದಿನ ದಿನ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸುತ್ತಾರೆ. ಅನೇಕ ಮಹಿಳೆಯರು ಭಾಗವಹಿಸುತ್ತಾರೆ. ರಥ ಬೀದಿಯಲ್ಲಿ ರಥ ಸಾಗುವ ಮಾರ್ಗದಲ್ಲಿ ಗುಡಿಸಿ, ನೀರು ಹಾಕಿ, ಸಾರಿಸಿ ಅವರವರಿಗೆ ನೀಡಿದ ಸ್ಥಳದಲ್ಲಿ ಆಕರ್ಷಕ ರಂಗೋಲಿ ಬಿಡಿಸುತ್ತಾರೆ. ತೀರ್ಪುಗಾರರು ಆಯ್ಕೆ ಮಾಡಿದ ಮೊದಲ, ದ್ವಿತಿಯ ಮತ್ತು ತೃತಿಯ ಬಹುಮಾನಗಳನ್ನು ಜಾತ್ರಾ ಸಮಿತಿ ನೀಡುತ್ತದೆ. ಅಷ್ಟೇ ಅಲ್ಲ, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರೋತ್ಸಾಹದ ಬಹುಮಾನ ನೀಡುತ್ತಾರೆ.

ರಂಗೋಲೆ ಒಂದು ಪ್ರಾಚೀನವಾದ ದೇವರನ್ನು ಒಲಿಸಿಕೊಳ್ಳುವ ಆರಾಧನಾ ಸಂಪ್ರದಾಯದ ಕಲೆ ಮತ್ತು ದೇವರ ಸೇವೆ, ಆದ್ದರಿಂದ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಈ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

ಮರುದಿನ ದೇವರ ರಥ ಸಾಗುವ ರಥ ಬೀದಿ ಇವರು ಬಿಡಿಸುವ ರಂಗೋಲಿಯಿಂದ ಸಿಂಗಾರವಾಗುವುದು ವಿಶೇಷವೆ ಮೊದಲೆಲ್ಲ ದೇವಾಲಯದ ಎದುರಿನ ರಸ್ತೆ ಕಚ್ಚಾ ಕಲ್ಲು ಮಣ್ಣಿನ ರಸ್ತೆ ಆಗಿತ್ತು ಆಗ ಮಹಿಳೆಯರು ಹೆಚ್ಚು ಶ್ರಮದಿಂದ ರಥ ಬೀದಿ ಸರಿಪಡಿಸಿ ಗುಡಿಸಿ ಸಾರಿಸಿ ರಂಗೋಲಿ ಹಾಕಬೇಕಾಗಿತ್ತು ಕಳೆದ ವರ್ಷ ದೇವಾಲಯದ ರಥ ಬೀದಿ ಕಾಂಕ್ರೀಟ್ ರಸ್ತೆ ಆಗಿರುವುದರಿಂದ ರಂಗೋಲಿ ಬಿಡಿಸುವವರಿಗೆ ಸುಲಭವಾಗಿದೆ.

ರಂಗೋಲಿ ಏನಿದರ ಮಹತ್ವ :

“ಕೆಳದಿ ಸಾಮ್ರಾಜ್ಯ ಮರೆತ” ಬೆಸ್ತರ ರಾಣಿ ಚಂಪಕಾ ಎಂಬ ನನ್ನ ಕಾದಂಬರಿ ರಂಗೋಲಿ ಪ್ರವೀಣೆ ಚಂಪಕ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರ ದುರಂತ ಪ್ರೇಮ ಕಥೆ ಆದರಿಸಿ ಬರೆದದ್ದು.

ಈ ಕಾದಂಬರಿಯಲ್ಲಿನ ಒಂದು ಅದ್ಯಾಯ ರಂಗೋಲಿ ಬಗ್ಗೆಯೇ ಇದೆ, ಈ ರಂಗೋಲಿ ಪ್ರವೀಣೆ ಚಂಪಕಳಿಂದಲೇ ನಮ್ಮ ಊರಿಗೆ ಆನಂದಪುರಂ ಎಂಬ ಹೆಸರು ಬರಲು ಕಾರಣವಾಗಿದೆ.
ಚಂಪಕಾ ರಂಗೋಲಿ ಪ್ರವೀಣೆ, ರಾಜ ವೆಂಕಟಪ್ಪ ನಾಯಕರು ಅವಳು ಬಿಡಿಸುವ ರಂಗೋಲಿ ನೋಡಿಯೇ ಅವಳ ಮೇಲೆ ವ್ಯಾಮೋಹಗೊ೦ಡು ವಿವಾಹ ಆಗುತ್ತಾರೆ. ಈ ಕಾದಂಬರಿಯಲ್ಲಿ ರಂಗೋಲಿ ಬಗ್ಗೆ ಒಂದು ಅಧ್ಯಾಯದಲ್ಲಿ ಹೀಗಿದೆ,

“ಚಂಪಕಾಳ ರಂಗೋಲಿಯಲ್ಲಿ ಅದೆಂತಹ ಆಕಷ೯ಣೆ ಇದೆ”

ರಂಗೋಲಿಯ ಬಗ್ಗೆ ಆಸ್ಥಾನದ ಪಂಡಿತರ ಹತ್ತಿರ ಒಮ್ಮೆ ಚಚಿ೯ಸಿದಾಗ ಅವರು ಹೇಳಿದ್ದು ಅರುಣೋದಯದಲ್ಲಿ ಲಲನೆಯರು ತಮ್ಮ ಮನೆಯಂಗಳದಲ್ಲಿ ವಿವಿದ ರೀತಿಯ ರಂಗೋಲಿಯನ್ನ ರಚಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಾಚೀನ ಸಂಪ್ರದಾಯವಾಗಿದೆ.

ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ.

ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ. ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.

ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪುಡಿಗಳಿಂದ ರಂಗೋಲಿಯನ್ನ ರಂಗು ರOಗಾಗಿಸುವ ಕಲೆ ಹೆಣ್ಣು ಮಕ್ಕಳು ಕಲಿತಿದ್ದಾರೆ, ಇದಕ್ಕೆ ಗೋದಿ, ಜವೆಗೋದಿ, ಅಕ್ಕಿ ಹಿಟ್ಟು, ಕುಂಕುಮ, ಅರಿಶಿಣ ಪುಡಿ, ಶಿಲಾ ಚುಣಾ೯ ಮತ್ತು ನವರತ್ನಪುಡಿಯನ್ನ ತುಂಬಿಸುವುದು ಒಂದು ಕಲೆ. ಹೋಮ ಹವನದಲ್ಲಿ, ಮದುವೆಯ ಹಸೆಮಣೆಯಲ್ಲಿ, ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ, ತಾಂತ್ರಿಕ ಪೂಜೆಯಲ್ಲಿ ಮಂಡಲಗಳನ್ನು ರಂಗೋಲಿಯಲ್ಲೇ ಬಿಡಿಸಲೇ ಬೇಕು. ಎಲ್ಲರೂ ರಂಗೋಲಿಯಲ್ಲಿ ಪರಿಣಿತರಾಗಲು ಸಾಧ್ಯವಿಲ್ಲ. ರಂಗೋಲಿ ಬಿಡಿಸುವುದರಲ್ಲಿ ತಾಳ್ಮೆ ಇರಬೇಕು, ದೂರಾಲೋಚನೆ ಇರಬೇಕು, ಕಲ್ಪನೆ ಇರಬೇಕು, ಚುರುಕುತನ ಇರಬೇಕು ಹಾಗಿದ್ದರೆ ಮಾತ್ರ ಜನಾಕಷ೯ಕ ರಂಗೋಲಿ ರಚಿಸಲು ಸಾಧ್ಯ.

ಹುಟ್ಟಿನಿಂದಲೇ ಈ ಚಾಕಚಕ್ಯತೆಯನ್ನ ಕೆಲವರು ತನ್ನ ಹಿಂದಿನ ಜನ್ಮದ ಫಲವಾಗಿ ಪಡೆದಿರುತ್ತಾರೆ. ನಿದಿ೯ಷ್ಟವಾದ ಆಳತೆಯ ಸ್ಪಷ್ಟವಾದ ಗೆರೆಗಳು ಹೊಂದಿರುವ ರಂಗೋಲಿಗೆ ಸೂಕ್ತ ಬಣ್ಣ ತುಂಬುವುದು ಕಲಾಕಾರಿಕೆ, ತಂತ್ರ ವಿದ್ಯೆಯಲ್ಲಿ ಇಂತಹ ರಂಗೋಲಿಗಳು ಸಾಧಕರ ಮನೋಸ್ಥಿಮಿತ ಉ೦ಟು ಮಾಡುತ್ತದೆ, ಅವರನ್ನ ಸಮಾದಿ ಸ್ಥಿತಿಗೂ ಒಯ್ಯುತ್ತದೆ, ತಂತ್ರ ವಿದ್ಯೆಯಿಂದ ಸಾದನೆ ಮಾಡಬೇಕಾದರೆ ಮಂಡಲಗಳು, ರಂಗೋಲಿಗಳು ಬಹುಮುಖ್ಯ.

ಸುOದರವಾದ ಸಮಯೋಚಿತವಾದ ರಂಗೋಲಿಯಿಂದ ದೇವರು ಒಲಿಯಲೇ ಬೇಕು ಹಾಗಾಗಿ ರಂಗೋಲಿ ಎಂದರೆ ಅದು ಸಣ್ಣ ಚಿತ್ರವಲ್ಲ, ಎಂತಹದೊ ಒಂದು ರೇಖೆಯಲ್ಲ, ಯಾವುದೋ ಒಂದು ಪುಡಿಯಲ್ಲ ಇದಕ್ಕೆ ಪ್ರಾಚೀನತೆ ಸ್ಪಶ೯ವಿದೆ, ದೈವ ಶಕ್ತಿಯ ಬಲವಿದೆ, ತಂತ್ರ ವಿದ್ಯೆಯ ಒಲವಿದೆ, ಸಂಸ್ಕೃತಿಯ ಹಿನ್ನೆಲೆಯಿದೆ, ಧಾಮಿ೯ಕ ಭಾವನೆಯ ಸೆಳಕಿದೆ, ಸೌ೦ದಯ೯ದ ತಳುಕಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಹಾಗಾಗಿ ಸುಂದರವಾದ ರಂಗೋಲಿ ಬಿಡಿಸುವ ಚಂಪಕಾಳ ಮೇಲೆ ರಾಜರ ವ್ಯಾಮೋಹವೂ ಇಮ್ಮಡಿಯಾಯಿತು, ಚಂಪಕಾ ನನ್ನವಳಾಗಿರಬೇಕು ಎಂಬ ಭಾವನೆ ರಾಜರಲ್ಲಿ ಉ೦ಟಾಯಿತು.

ಹಾಗಾಗಿ ಚಂಪಕಾಳ ಬೇಟಿ ಮಾಡುವ ಗುರು ಪೂಣಿ೯ಮೆ ಎ೦ಬ ಪವಿತ್ರ ದಿನಕ್ಕಾಗಿ ರಾಜರು ಚಡಪಡಿಸಲು ಶುರು ಮಾಡಿದರು. ಆದ್ದರಿಂದಲೇ ನಮ್ಮ ಊರಿನ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದಂದು ನಡೆಯುವ ರಂಗೋಲಿ ಸ್ಪರ್ಧೆ ಕೇವಲ ಸ್ವರ್ದೆ ಅಗಿಲ್ಲ ಇದು ಪುರದ ದೇವರಿಗೆ ಸಲ್ಲಿಸುವ ಒಂದು ಸೇವಾ ಪೂಜೆಯ ಸಂಪ್ರದಾಯವೂ ಆಗಿದೆ.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW