ಕುರುಡು ಇರುವೆಗೆ ಹೆಸರಾದ ಕೆ ಎನ್ ಗಣೇಶಯ್ಯ



ರೋಚಕ ಕಥೆಗಳ ನಾವಿಕ, ಹೊಸ ಪೀಳಿಗೆಯ ಓದುಗರ ನೆಚ್ಚಿನ ಬರಹಗಾರ ಪ್ರೊ. ಕೆ.ಎನ್.ಗಣೇಶಯ್ಯರವರು. ವೈಜ್ಞಾನಿಕ ಬರಹಗಳನ್ನು ಸಹ ಜನಸಾಮಾನ್ಯರು ಓದುವಂತೆ ರಚಿಸಿಕೊಡುವ ಇವರ ಪ್ರಬಂಧಗಳು ಓದುಗರ ಗಮನ ಅತ್ತಿತ್ತ ಸರಿಯದಂತೆ ಮೂಕವಿಸ್ಮಿತರನ್ನಾಗಿಸುತ್ತದೆ.

ಈಗಾಗಲೇ #ಅಂಡಮಾನ್ ನಲ್ಲಿನ ಒಂದು ಸಸ್ಯಕ್ಕೆ centotheca ganeshaiahiana ಎಂದು ಆಂಧ್ರಪ್ರದೇಶದ ಒಂದು ಸಸ್ಯಕ್ಕೆ Tripogan umaganeshii ಎಂದು ಹೆಸರಾದ ಕೃಷಿ ವಿಜ್ಞಾನಿ ಹಾಗೂ ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಪರಿಸರ ವಿಜ್ಞಾನಿ, ಚಿಂತಕ ಮತ್ತು ಬರಹಗಾರರು ಗಣೇಶಯ್ಯ.

“ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಇನವೈರ್‍ಮೆಂಟ್” (ATREE ) ಎಂಬ ಬೆಂಗಳೂರಿನ ಸಂಶೋಧನ ಕೇಂದ್ರದ ಕೀಟಶಾಸ್ತ್ರಜ್ಞರು ಎರಡು ಹೊಸ ಅಪರೂಪದ ಇರುವೆಗಳನ್ನು Eaglenest wild life santuary (EWS) ಎಂಬ ವನ್ಯಜೀವಿ ಅಭಯಾರಣ್ಯದಿಂದ ಕಂಡುಹಿಡಿದ್ದಾರೆ.

ಫೋಟೋ ಕೃಪೆ :travelchronicles

#ಏಟ್ರಿ_ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು ಹಾಗೂ ATREE ಸಂಶೋಧನ ಕೇಂದ್ರದಲ್ಲಿ ಕೀಟವರ್ಗಿಕರಣ ಮತ್ತು ಸಂರಕ್ಷಣ (Insect taxonomy and conservation) ಪ್ರಯೋಗಲಾಯ ತೆರೆಯುವುದರ ಮುಖ್ಯ ಕಾರಣಕರ್ತರಾದ ಪ್ರೊ. ಕೆ. ಎನ್. ಗಣೇಶಯ್ಯ ರವರನ್ನು ATREE ತನ್ನ ಬೆಳ್ಳಿ ಹಬ್ಬವನ್ನು 2021 ರಲ್ಲಿ ಆಚರಿಸುತ್ತಿದ್ದು ಅದರ ಗೌರವಾರ್ಥವಾಗಿ ಎರಡು ಹೊಸ ಇರುವೆಯಲ್ಲಿ ಒಂದು ಇರುವೆಯನ್ನು “ಪ್ಯಾರಸಿಸ್ಸಿಯ ಗಣೇಶಯ್ಯಯಿ” ಎಂದು ಹೆಸರಿಸಲಾಗಿದೆ. ಮತ್ತೊಂದು ಇರುವೆಯು ಭಾರತದೇಶದಲ್ಲಿ ಮೊದಲು ದಾಖಲಾಗಿರುವ ಕಾರಣ ಭಾರತದೇಶವನ್ನು ಉಲ್ಲೇಖಿಸಿ “ಸಿಸ್ಸಿಯ ಇಂಡಿಕ’ ಎಂದು ಹೆಸರಿಸಲಾಗಿದೆ.



ಅರುಣಾಚಲಪ್ರದೇಶದ ವೆಸ್ಟ್ ಕಾಮೆಂಗ್ ಜಿಲ್ಲೆಯ ಹಿಮಾಚಲದ ತಪ್ಪಲಿನಲ್ಲಿ ಪಕ್ಕೆ ಟೈಗರ್ ರಿಸರ್ವ್ ಮತ್ತು ಟೆಂಗ್ ಆರ್ಮಿ ಕಂಟೋನ್ಮೆಂಟ್ ಪ್ರದೇಶಗಳ ಮರೆಯಲ್ಲಿರುವ ಈಗಲ್‍ನೆಸ್ಟ್ ವನ್ಯಜೀವಿ ಅಭಯಾರಣ್ಯವು ಪರಿಸರ ವಿಜ್ಞಾನಿಗಳಿಗೆ ಮತ್ತು ಪ್ರಕೃತಿ ಉತ್ಸಾಹಿಗಳಿಗೆ ಸ್ವರ್ಗವಾಸಿಯಾಗಿದೆ, 218 ಚದರ ಕಿಲೋಮೀಟರ್‍ಗಳಷ್ಟು ವ್ಯಾಪಿಸಿರುವ ಅರಣ್ಯಪ್ರದೇಶವು ಸಮುದ್ರಮಟ್ಟದಿಂದ 500ಮೀ ನಿಂದ 3250ಮೀ ಎತ್ತರದ ನಡುವೆ ಅನೇಕ ಅಚ್ಚರಿಗಳನ್ನು ಒಳಗೊಂಡಿದೆ. ಅಶೋಕ ಸಂಶೋಧನ ಕೇಂದ್ರದ ಕೀಟಶಾಸ್ರಜ್ಞರು ಈಗಲ್‍ನೆಸ್ಟ್ ಅಭಯಾರಣ್ಯದಿಂದ 200 ಕ್ಕೂ ಹೆಚ್ಚು ಜಾತಿಯ (Species) ಇರುವೆಗಳು ಒಟ್ಟಾರೆ ಭಾರತದ ಇರುವೆಗಳ ಸರಾಸರಿ 25% ರಷ್ಟು ಇರುವೆಗಳನ್ನು ಸಂಗ್ರಹಿಸಿದ್ದಾರೆ ಅದರಲ್ಲಿ ಹಲವರು ಭಾರತಕ್ಕೆ ಹೊಸವರದಿ ಮತ್ತು ಹೊಸ ಜಾತಿಯ ಇರುವೆಗಳನ್ನು ಒಳಗೊಂಡಿದೆ ಈಗಲ್‍ನೆಸ್ಟ್ ನ ವ್ಯಾಪಕ ಪರಿಶೋಧನೆ ಮತ್ತು ವ್ಯಾಪಕ ಅಧ್ಯಯನಗಳ ನಂತರ ಸಂಶೋಧಕರ ತಂಡ ಡಾ. ಪ್ರಿಯದರ್ಶನನ್ ಧರ್ಮರಾಜನ್ (Senior fellow ) ಅಸ್ವಜ್ ಪುನ್ನಥ್ ಸಹನಶ್ರೀ (ATREE Bangalore ) ಹಾಗೂ ಡಾ: ಅನಿರುದ್ದ ಮರಾತೆ (IISC Bangalore) ಅವರುಗಳ ಆಸಕ್ತಿದಾಯಕ ಇರುವೆಗಳನ್ನು ಸಂಗ್ರಹಿಸಿದ್ದಾರೆ ಮತ್ತು ಶ್ರೀ ಲಂಕಾದ ಡಾ: W.S.ಉದಯಕಾಂತ್ (University of Kelania ) ಅವರು ಹೊಸ ಆವಿಷ್ಕಾರವನ್ನು ಖಚಿತಪಡಿಸುವಲ್ಲಿ ಸಹಕರಿಸುವಲ್ಲಿ ಭಾಗವಾಗಿದ್ದಾರೆ.

This slideshow requires JavaScript.

“ಪ್ಯಾರಸಿಸ್ಸಿಯ ಗಣೇಶಯ್ಯಯಿ” ಇರುವೆಯು ಹಳದಿ ಮಿಶ್ರಿತ ಕಂದು ಬಣ್ಣದ ಸಣ್ಣ ಗಾತ್ರದ ಇರುವೆ ಮತ್ತು ಮೇಲ್ಮೈ ಭಾಗವು ಮೈಕ್ರೂಪಂಕ್ಚರ್ಸ್‍ಗಳಿಂದ ಕೊಡಿರುವ ಈ ಇರುವೆಯು ತನ್ನ ಗೂಡನ್ನು ಕೊಳೆತ ದಿಂಬಿಗಳಲ್ಲಿ ಅಥವಾ ಕಲ್ಲುಗಳ ಅಡಿಯಲ್ಲಿ ನಿರ್ಮಿಸುತ್ತದೆ. ಇದನ್ನು ದಟ್ಟ ಅರಣ್ಯದ ಜನನಿಬಿಡ ಪ್ರದೇಶದಲ್ಲಿ ಸಮುದ್ರಮಟ್ಟದಿಂದ 1400ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ. ಭಾರತದಲ್ಲಿ ಒಟ್ಟು ಏಳು ಪ್ಯಾರಸಿಸ್ಸಿಯ ಇರುವೆಗಳಿದ್ದು ಅದರಲ್ಲಿ ಆರು ಇರುವೆಗಳು ಸ್ಥಳೀಯ (Endemic ) ಎಂದು ಗುರುತಿಸಲಾಗಿದೆ.

ಸಿಸ್ಸಿಯ ಜೀನಸ್ ಇರುವೆಗಳು ಕೂಡ ಅಪರೂಪದ ಇರುವೆಗಳು ಎಲೆಯ ತರಗು (leaf litter ) ಕೊಳೆತಮರ ಹಾಗೂ ಮಣ್ಣಿನಲ್ಲಿ ವಾಸಿಸುವ ಇರುವೆಗಳಾಗಿವೆ ಈ ಮೊದಲು ಚೀನಾ, ಜಪಾನ್ ಶ್ರೀಲಂಕ ಹಾಗೂ ಥೈಲಾಂಡ್ ದೇಶಗಳಲ್ಲಿ ದಾಖಲೆಗೊಂಡಿದ್ದು ಭಾರತದಲ್ಲಿ ಸೂಕ್ತವಾದ ದಾಖಲೆಯ ಕೊರತೆಯಿಂದ ಪ್ರಸ್ತುತ ದಾಖಲೆಯನ್ನು ಭಾರತಕ್ಕೆ ಮೊದಲ ದಾಖಲೆಯಾಗಿ ಪರಿಗಣಿಸಲಾಗಿದೆ.
“ಸಿಸ್ಸಿಯ ಇಂಡಿಕ” ಇರುವೆಯು ಕೆಂಪುಮಿಶ್ರಿತ ಕಂದು ಬಣ್ಣಹೊಂದಿದ್ದು ಮೇಲ್ಮೈ ಭಾಗವು ಚಿಕ್ಕ ಚಿಕ್ಕ ಪಂಕ್ಚರ್ಸ್ ಇದ್ದು ಕುರುಡು ಇರುವೆಯಾಗಿದೆ ಈ ಇರುವೆಯನ್ನು ಅರಣ್ಯದ ಒಳಭಾಗದಲ್ಲಿ ಸಮುದ್ರ ಮಟ್ಟದಿಂದ 1600 ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ.

(ಪರಿಸರ ವಿಜ್ಞಾನಿ, ಚಿಂತಕ ಮತ್ತು ಬರಹಗಾರರು  ಪ್ರೊ. ಕೆ.ಎನ್.ಗಣೇಶಯ್ಯ ಏಟ್ರಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು)  ಫೋಟೋ ಕೃಪೆ : tech kannada

ಬಹಸಂಖ್ಯಾ ಇರುವೆಗಳು ಕ್ರಿಪ್ಟೋ ಬಯೋಟಿಕ್ ಜೀವನ ಶೈಲಿಯನ್ನು ಒಳಗೂಡಿಸಿಕೊಂಡು ದಟ್ಟಅರಣ್ಯದಲ್ಲಿ ಉದುರಿರುವ ಎಲೆಗಳಲ್ಲಿ ಮಣ್ಣಿನ ಅಡಿಯಲ್ಲಿ ಮರೆಯಾಗಿ ಜೀವಿಸುತ್ತಿರುತ್ತವೆ. ಇದರಲ್ಲಿ ಬಹಳಷ್ಟು ವಿಜ್ಞಾನಕ್ಕೆ ಅಪರಿಚತವಾಗಿರುವ ಇರುವೆಗಳಿದ್ದಾವೆ. ಹೊಸ ದಾಖಲೆಯಾದ ಪ್ಯಾರಸಿಸ್ಸಿಯ ಹಾಗೂ ಸಿಸ್ಸಿಯ ಇರುವೆಗಳು ಕೂಡ ಬಹುಅಪರೂಪದ ಸುಲಭವಾಗಿ ದೊರಕದ ಇರುವೆಗಳಾಗಿದೆ ಆದ್ದರಿಂದ ಈ ರೀತಿಯ ಇರುವೆಗಳನ್ನು ಸಂಗ್ರಹಿಸಲು Non-conventional ವಿಧಾನವಾದ Winkler extraction ಅನ್ನು ಬಳಸಲಾಗುತ್ತದೆ. ಮುಂಬರುವ ಸಂಶೋಧನೆಯಲ್ಲಿ ಈಸ್ಟ್ರನ್ ಹಿಮಾಲಯದ ಪ್ರದೇಶಗಳನ್ನು ವ್ಯಾಪಕವಾಗಿ ಅನ್ವೇಷಿಸಿದರೆ ಅದರಲ್ಲೂ Non-conventional ವಿಧಾನಗಳ ಕೀಟ ಸಂಗ್ರಹಣ ಬಳಕೆಯಿಂದ ಇನ್ನು ಅಪರೂಪವಾದ ವಿಭಿನ್ನವಾದ ಹೊಸ ಹೊಸ ಇರುವೆಗಳು ದೊರೆಯಬಹುದು ಎಂದು ತಿಳಿಸಿದೆ.

ಈ ಸಂಶೋಧನೆಯನ್ನು Department of biotechnology (DBT Government of India) and National Mission on Himalayan Studies (MOEF & CC, Government of India) and the John D and Catherine T.Mac Arthur ಫೌಂಡೆಶನ್ ಬೆಂಬಲಿಸಿದ್ದಾರೆ.


  • ಚಿದಾನಂದ (ಯುವ ಸಂಚಲನ, ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW