ಯಾವ ಕಾಲ ಹುಟ್ಟುವ ಮಗುವಿಗೆ ತಿಳಿದಿತ್ತೇ?…ವಿ.ಎಂ.ಎಸ್.ಗೋಪಿ ಅವರ ಕಾಲಕ್ಕೊಂದು ಪ್ರಶ್ನೆಯನ್ನು ಇಡುತ್ತಾ ಕವಿತೆಯನ್ನು ಬರೆದಿದ್ದಾರೆ, ತಪ್ಪದೆ ಓದಿ…
ಶುಭ ಕಾಲ ಈ ಕಾಲ
ಯಾವ ಕಾಲ
ರಾಹುಕಾಲ ಯಮಗಂಡಕಾಲ
ಗುಳಿಕಾಲ
ಸಾಯುವನಿಗೇ ಗೊತ್ತಾ
ಯಾವ ಕಾಲ
ಹುಟ್ಟುವ ಮಗುವಿಗೆ
ತಿಳಿದಿತ್ತ ಈ ಕಾಲ
ಎಲ್ಲಾವು ನಮ್ಮ
ಕಾಲ…
ಆ ವಾರ ಈ ವಾರ
ಯಾವ ವಾರ
ಹಣ ಕೊಡುವುದಕ್ಕೇ
ಈ ವಾರ
ಶುಭ ಅಶುಭಕ್ಕೇ
ಯಾವ ವಾರ
ಜೀವನವು ಹೀಗೆ
ನಾವು ನಡೆಯುವುದು ಹಾಗೆ
ದಿನ ಕಾಲ ಬದಲಾಗಲ್ಲಿಲ್ಲ
ಈ ಬದಲಾವಣೆಗೆ
ನಾವೇ ಕಾರಣ
ಸುಳ್ಳಿಗೆ ಇದೆ ಬೆಲೆ
ಸತ್ಯಕ್ಕೆ ಇಲ್ಲ ನೆಲೆ
ಬಣ್ಣ ಬಣ್ಣದ ಮಾತಿಗೆ
ಬೆಲೆ ಜಾಸ್ತಿ
ನಾ ಹೀಗೆ ಇರುವೇ
ಸತ್ಯವೇ ಹೇಳುವೇ
ನನ್ನ ಜೀವನವೇ ಹೀಗೆ
ಈ ಮನುಷ್ಯನಿಗೆ ಗೌರವ ಮರ್ಯಾದೆನೇ ಇಲ್ಲವೆ..
- ವಿ.ಎಂ.ಎಸ್.ಗೋಪಿ – ಲೇಖಕರು, ಸಾಹಿತಿಗಳು – ಬೆಂಗಳೂರು.
