ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಈ ಕನಸುಗಳ ಪಾತ್ರ ಬಹಳ ವಿಶೇಷವಾದದ್ದು. ರೋಗಿ ತನ್ನ ಆಪ್ತ ಸಮಾಲೋಚನೆಯಲ್ಲಿ ಹೇಳಿಕೊಳ್ಳದ ಸಂಗತಿಯನ್ನು ಅನೇಕ ಪ್ರಯೋಗಗಳ ಮೂಲಕ ಆತನ ಸುಪ್ತ ಮನಸ್ಸಿನಲ್ಲಿನ ಜರುಗುವ ಘಟನೆಗಳನ್ನು ವಿಶ್ಲೇಷಿಸಿ ಚಿಕಿತ್ಸೆ ನೀಡುವುದು ಇದುವರೆಗಿನ ಪದ್ಧತಿ. ಡಾ.ಲಕ್ಷ್ಮಣ ವಿ ಎ ಅವರ ಸುಂದರ ವಿಚಾರವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ನಿನ್ನೆ ನೀನು ಕನಸಿನಲ್ಲಿ ಬಂದಿದ್ದೆ ಮಾರಾಯ ! ಆದರೆ ಕನಸಿನಲ್ಲಿ ಏನೇನು ನಡೆಯಿತು ಎಂದು ಸರಿಯಾಗಿ ನೆನಪಾಗುತ್ತಿಲ್ಲ..!ಅಂತ ತಡವವರಿಸುವವರನ್ನು ನೀವು ನೋಡಿದ್ದೀರಿ.ಅಥವ ನಿಮಗೂ ಹೀಗೆಯೇ ಅನುಭವವಾಗಿದ್ದನ್ನು ನೆನಪಿಸಿಕೊಳ್ಳುತ್ತೀರಿ.ಜಗತ್ತಿನಲ್ಲಿ ಎಲ್ಲರಿಗೂ ನಿದ್ದೆಯಲ್ಲಿ ಕನಸು ಬೀಳುತ್ತವೆ ಆದರೆ ಶೇಕಡಾ ತೊಂಬತ್ತು ಭಾಗ ಆ ಕನಸುಗಳು ನೆನಪಿನ್ನಲ್ಲುಳಿವುದಿಲ್ಲ.ಕನಸುಗಳು ಮನುಷ್ಯನ ಆಳ ನಿದ್ರೆಯಲ್ಲಿ ನಡೆಯುವ ಒಂದು ವಿಶಿಷ್ಟ ವಿದ್ಯಮಾನ.ಕೆಲವು ಕನಸುಗಳು ಕೈ ಗೂಡದ ಕನಸುಗಳಾಗಿದ್ದರೆ ಇನ್ನು ಹಲವರಿಗೆ ದುಸ್ವಪ್ನಗಳು.ದಿಕ್ಕು ತಪ್ಪಿದವನಿಗೊಂದು ದಾರಿ ದೀಪವಾದರೆ ಇನ್ನು ಹಲವರಿಗೆ ಮಲಗಲು ನಿದ್ದೆ ಮಾಡಲು ಬಿಡದ ಬೆನ್ನಿಗೆ ಬಿದ್ದ ಬೇತಾಳದಂತೆ.
ನಿಮಗೆ ನಾಳೆಯೇ ಗಣಿತ ಪರೀಕ್ಷೆ ಇದೆ.ನೀವಿನ್ನೂ ಗಣಿತದ ಪುಸ್ತಕವನ್ನೇ ತೆರೆದಿಲ್ಲವೆಂಬುದು ನಿಮ್ಮನ್ನು ಇಂಚಿಂಚಾಗಿ ಕಾಡುವುದು.ನೀವೆಲ್ಲೋ ಆಳ ಬಾವಿಯಲ್ಲಿ ನೀರಿನಲ್ಲಿ ಮುಳುಗಿದ್ದೀರಿ ಈಜು ಬರುತ್ತಿದ್ದರೂ ನಿಮಗೆ ಕೈ ಕಾಲು ಆಡಿಸದ ಹಾಗೆ ಯಾರೋ ಕಟ್ಟಿ ಹಾಕಿದ್ದಾರೆ.ರೈಲು ಹೊರಡಲು ಇನ್ನೇನು ಎರಡು ನಿಮಿಷ ಬಾಕಿ ಇದೆ ಆದರೆ ನೀವಿನ್ನೂ ಟಿಕೇಟನ್ನೇ ಖರೀದಿಸಿಲ್ಲ…ಕೆಲವರಿಗೆ ಕನಸಿನಲ್ಲಿ ಬೆತ್ತಲೆಯಾಗಿ ನಡು ರಸ್ತೆಯಲ್ಲಿ ನಡೆದಂತೆ…ಹೀಗೆ ಸುಪ್ತ ಮನಸಿನ ಯೋಚನೆಗಳ ದುಸ್ವಪ್ನಗಳ ನಾನಾ ವಿಧಗಳು.

ಎಲ್ಲ ಕನಸುಗಳೂ ನೇತ್ಯಾತ್ಮಕವಾಗಿಯೇ ಇರಬೇಕಿಲ್ಲ.ಕೆಲವೊಬ್ಬರು ಕನಸುಗಳ ಜಾಡು ಹಿಡಿದು ಕನಸಿನಲ್ಲಿ ಬಂದ ಎಳೆಯನ್ನೇ ಹಿಡಿದು ಕಥೆ ಕಾದಂಬರಿ ಬರೆದಿದ್ದಾರೆ.ಬೇಂದ್ರೆ ಅವರ ಕಾವ್ಯಗಳಲ್ಲಿ ಕನಸುಗಳು ಕೇವಲ ವೈಯಕ್ತಿಕ ಆಕಾಂಕ್ಷೆಗಳಲ್ಲ, ಆದರೆ ಸಾಮಾಜಿಕ ಮತ್ತು ಜಾಗತಿಕ ಪರಿವರ್ತನೆಗಳ ಸಂಕೇತವೂ ಆಗಿವೆ. ಅವರ ಕಾವ್ಯಗಳಲ್ಲಿ, ಕನಸುಗಳು ಜೀವನದ ಸತ್ಯಗಳನ್ನು ಅರಿಯಲು ಮತ್ತು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತವೆ.
ಬೇಂದ್ರೆಯವರ “ನಾಳೆ ಎಂಬುವುದು ನಿನ್ನಿನ ಕನಸು, ಮುಂದೆ ಎಂಬುವುದು ಇಂದಿನ ಕನಸು” ಎಂಬ ನುಡಿಮುತ್ತು, ಅವರ ಕಾವ್ಯದ ತಿರುಳನ್ನು ಮತ್ತು ಅವರ ಕನಸುಗಳ ದೃಷ್ಟಿಕೋನವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮೆಂಡಿಲೀವ್ ಎಂಬ ವಿಜ್ಞಾನಿಗೆ ಪಿರಿಯಾಡಿಕ್ ಟೇಬಲ್ಲ್ ಕಂಡಿದ್ದು ಕನಸಿನಲ್ಲಿ. ಅಗಷ್ಟ ಕುಕುಲೆ ಗೆ ಕನಸಿನಲ್ಲಿ ಬೆಂಝೀನ್ ರಿಂಗ್ ಎಲಿಯಾಸ್ ಹೂವೆ ಹೊಲಿಗೆಯ ಯಂತ್ರವೂ ಕಂಡಿದ್ದು ಕನಸಿನಲ್ಲಿ.
ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಈ ಕನಸುಗಳ ಪಾತ್ರ ಬಹಳ ವಿಶೇಷವಾದದ್ದು.ರೋಗಿ ತನ್ನ ಆಪ್ತ ಸಮಾಲೋಚನೆಯಲ್ಲಿ ಹೇಳಿಕೊಳ್ಳದ ಸಂಗತಿಯನ್ನು ಅನೇಕ ಪ್ರಯೋಗಗಳ ಮೂಲಕ ಆತನ ಸುಪ್ತ ಮನಸ್ಸಿನಲ್ಲಿನ ಜರುಗುವ ಘಟನೆಗಳನ್ನು ವಿಶ್ಲೇಷಿಸಿ ಚಿಕಿತ್ಸೆ ನೀಡುವುದು ಇದುವರೆಗಿನ ಪದ್ಧತಿ.
ಹೊಸ ಆವಿಷ್ಕಾರವೊಂದು ವ್ಯಕ್ತಿಯೊಬ್ಬ ಕಾಣುವ ಕನಸುಗಳನ್ನು ಸಚಿತ್ರವಾಗಿ ವಿಡಿಯೋ ಮಾಡುವ ತಂತ್ರಜ್ಞಾನವೊಂದು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ.ಈ ತಂತ್ರಜ್ಞಾನದ ಕನಸುಗಳ ವೈಜ್ಞಾನಿಕ ವಿಶ್ಲೇಷಣೆ,ಅಪಾರಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಹಾಗು ರೋಗಿಯ ನಿಖರ ಚಿಕಿತ್ಸೆ ಯಲ್ಲಿ ಸಹಾಯಕವಾಗಲಿದೆ.
- ಡಾ.ಲಕ್ಷ್ಮಣ ವಿ ಎ
