‘ಕಣ್ಣೀರು’ ಕವನ – ಪ್ರೊ. ರೂಪೇಶ್ ಪುತ್ತೂರು



ಭೂಮಿಗೆ ಸ್ವಂತ ಕಣ್ಣೀರಿದ್ದರೆ….?! ತಾನು ಸೃಷ್ಟಿಸಿದ ಮಾನವನಿಗಾಗಿ ಮೊದಲು ಕಣ್ಣೀರು ಹಾಕುತ್ತಿದ್ದಳು ಆ ಭುವನೇಶ್ವರಿ….ಪ್ರೊ. ರೂಪೇಶ್ ಪುತ್ತೂರು ಅವರ ಒಂದು ಸುಂದರ ಕವನ ಓದುಗರಿಗಾಗಿ, ಮುಂದೆ ಓದಿ…

ಮರ ಕಡಿದಾಗ, ಎಲೆಯನ್ನು ಹಿಂಡಿದಾಗ,
ಅದರಿಂದ ಬರುವ ಕೆಲ ಜಲ ತೇವಾಂಶ
ಅದರ ಸ್ವಂತ ಕಣ್ಣೀರಾಗಿರಬಹುದು.

ಮೇಘಗಳಿಂದ ಮಳೆಯೆಂಬ
ಹೆಸರಲ್ಲಿ ಸುರಿವುದು
ಅದರ ಸ್ವಂತ ಕಣ್ಣೀರಾಗಿರಬಹುದು.

ಒಂದು ಕೀಟವನ್ನು ಚುಚ್ಚಿದರೆ,
ನೋಯಿಸಿದರೆ, ಅದರಿಂದ ಹೊರ ಬೀಳುವ
ಬಿಂದುಗಳು ಅದರ ಸ್ವಂತ ಕಣ್ಣೀರಾಗಿರಬಹುದು.

ಪ್ರಾಣಿ , ಮನುಷ್ಯ, ಪಶು ಪಕ್ಷಿಗಳು
ತಮ್ಮ ನೋವನ್ನು ತೋರುವ ನೀರಿನ ಹನಿಗಳು
ಅದರ ಸ್ವಂತ ಕಣ್ಣೀರಾಗಿರಬಹುದು.

#ಬಿಸಿಲು, ಚಳಿ ಕಾಲಕ್ಕೆ , ಋತುಗಳಿಗೂ
ಪರಿಸರ ತೋರುವ ತೊಟ್ಟಿಕ್ಕುವಿಕೆ
ಅದರ ಸ್ವಂತ ಕಣ್ಣೀರಾಗಿರಬಹುದು.

ವಾತ್ಸಲ್ಯ, ಆನಂದ ಎಂಬ ಹಲವು
ಮಾನವ ಭಾವನೆಗಳಿಗೆ ಬರುವ ಬಾಷ್ಪ
ಅದರ ಸ್ವಂತ ಕಣ್ಣೀರಾಗಿರಬಹುದು.

ಇವೆಲ್ಲವೂ ಭೂಮಿಯ‌ ಮೇಲಾದರೂ….
ಭೂಮಿಗೆ ಸ್ವಂತ ಕಣ್ಣೀರಿದ್ದರೆ…..
ಕೊರೋನ ಮನುಷ್ಯ ಜೀವಿಯನ್ನೇ ಕೊಲ್ಲುವ
ರೋಗವಾಗಿ ಬಿಟ್ಟು ಹೋಗುವುದಿಲ್ಲವಾದ ಈ ಸಂದರ್ಭದಲ್ಲಿ
ಮನುಷ್ಯ ತಾನೇ ಶ್ರೇಷ್ಟನೆಂದು ಸ್ವಾರ್ಥ , ದ್ವೇಷ , ಅಹಂ ರೋಗಗಳ ಹೊತ್ತು ಯುದ್ದಮಾಡುವುದು ಕಂಡು…
ನಗುವ ಕೊರೋನದ ಮುಂದೆ…..

ತಾನು ಸೃಷ್ಟಿಸಿದ ಅದ್ಭುತ ಪ್ರಾಣಿಯಾದ
ಈ ಮಾನವನ ಆಟದ ಚೌಕಟ್ಟಿನಲ್ಲಿ
ಭೂಮಿಗೆ ಸ್ವಂತ ಕಣ್ಣೀರಿದ್ದರೆ…..
ಅಸಹಾಯಕತೆಯ ಶೂನ್ಯತೆಯಲ್ಲಿ….

ನಿಮ್ಮವ ನಲ್ಲ

*ರೂಪು*


  • ಪ್ರೊ. ರೂಪೇಶ್ ಪುತ್ತೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading