‘ಜೀವನದ ಪಯಣ’ ಕವನ – ಪ್ರೊ.ರೂಪೇಶ್ ಪುತ್ತೂರು



ಜೀವನದ ಪಯಣದಲ್ಲಿ ‘ಇಂದು ದುಃಖ ಬಂದರೆ ನಾಳೆ ಸುಖವೇ ಅತಿಥಿ’… ಪ್ರೊ.ರೂಪೇಶ್ ಪುತ್ತೂರು ಸುಂದರ ಸಾಲುಗಳು ಓದುಗರಿಗಾಗಿ, ಮುಂದೆ ಓದಿ…

ಜೀವನದ ರೂಢಿಯೇ ಹೀಗೇನೇ
ಸೋತ ಮೇಲೆಯೇ
ಗೆಲುವು #ಅತಿಥಿಯಾಗಿ ಬರುವುದು
ಸ್ವಲ್ಪ ಕಣ್ಣೀರ ಕುರುಡು,
ಒಂಚೂರು ಆನಂದ ಭಾಷ್ಪ
ಇಂದು ದುಃಖ ಬಂದರೆ #ನಾಳೆ ಸುಖವೇ ಅತಿಥಿ!!!

ಜೀವನವು ಕಗ್ಗತ್ತಲೂ ಹೌದು
ಮುಂಜಾನೆಯೂ ಹೌದು
ಜೀವನವು ಪ್ರಯಾಣವೂ ಹೌದು
ವಿಶ್ರಾಮಧಾಮವೂ ಹೌದು
ಒಂದು ಕ್ಷಣ ನೋವಿನ
ಹುಣ್ಣೂ ಅಹುದು
ಮತ್ತೊಂದು ಕ್ಷಣ ಪೂರ್ಣವಾಸಿಯಾದ
ತುರಿಕೆಯೂ ಅಹುದು
ಪ್ರತೀ ಕ್ಷಣಗಳೂ ಹೊಸಾ ಹಾಡಿನಂತೆ
ಎಲ್ಲಾ ಹೆಜ್ಜೆಯೂ ಸಹಪಾಠಿಯಂತೆ
ದೂರವಾದರೂ ಹತ್ತಿರವಾದರೂ ಸನ್ಮಿತ್ರನಂತೆ.

ಇಂದು ಎಲ್ಲವೂ ನಷ್ಟ- ನಾಶವೂ
ಇರಬಹುದು
ಕಳೆದುಕೊಂಡಿದ್ದರಲ್ಲಿ ನಮ್ಮದಾಗಿರುವುದೂ
ಇರಬಹುದು
ನಾಳೆ ಎಲ್ಲವೂ ನಮ್ಮ ಸಮೀಪವಾಗಿಯೂ
ಇರಬಹುದು
ಪಡೆದುದರಲ್ಲಿ ಪ್ರಯತ್ನಗಳೂ
ಇರಬಹುದು.

#ಪರಿಶ್ರಮದಲ್ಲಿ ಹೊಸಾ ಸಾಧನೆಯೆಂಬ ಸದಭಿರುಚಿಯೂ ಇರಬಹುದು.
ಸಂದಿಗ್ಧತೆಯ ಕಾರ್ಮೋಡ ಕವಿದಾಗ
ಕಣ್ಣಿನೊಳಗಿನ ಮನದಲ್ಲಿ
ಭರವಸೆಯ‌ ಜ್ಯೋತಿ
ಕ್ರಾಂತಿಯಾಗಿ ಬೆಳಗಲಿ..

ನಿಮ್ಮವ ನಲ್ಲ
*ರೂಪು*


  • ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading