‘ಕರಿಬೇವಿನ ಗೊಜ್ಜು’ ಬಾಣಂತಿಯರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಆರೋಗ್ಯಕರ ಆಹಾರ, ವೀಣಾ ಶಂಕರ್ ಅವರು ಮಾಡುವ ವಿಧಾನವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೆಳಿಗ್ಗೆ ಹಾಗೆ ಕಿಟಕಿ ಹತ್ತಿರ ಕೂತು ಅಡಿಗೆ ಏನು ಮಾಡುವುದು ಅಂತ ಯೋಚಿಸುತ್ತಾ ಇದ್ದೆ. ಕಿಟಕಿಯಲ್ಲಿ ಕರಿಬೇವಿನ ಗಿಡ ಕಾಣಿಸಿತು. ಗಾಳಿಯಲ್ಲಿ ಜೋಕಾಲಿ ಹಾಡ್ತಾ ಹಾಯಾಗಿ ಹಾಡು ಹಾಡ್ಕೊತಾ ಇತ್ತು. ಅಮ್ಮ ಬಾಣಂತಿಯಲ್ಲಿ ಮಾಡಿ ಬಡಿಸುತ್ತಿದ್ದ ಕರಿಬೇವಿನ ಗೊಜ್ಜು ನೆನಪಾಯಿತು. ಅದನ್ನೇ ಮಾಡಿದ್ರಾಯ್ತು ಅಂತ ಕರಿಬೇವಿನ ಗೊಜ್ಜು ರೆಡಿ ಮಾಡಿದೆ.

ಬೇಕಾಗುವ ಸಾಮಾನುಗಳು :
- ಒಂದು ಹಿಡಿ ಕರಿಬೇವು
- ಮೆಣಸು
- ಜೀರಿಗೆ
- ಒಂದು ಸ್ಪೂನ್ ಉದ್ದಿನ ಬೇಳೆ
- ಒಂದು ಸ್ಪೂನ್ ಕಡ್ಲೆ ಬೇಳೆ
- ತೆಂಗಿನ ತುರಿ
- ಬೆಲ್ಲ
- ಹುಣಸೆ ಹಣ್ಣು
ಎಲ್ಲವನ್ನೂ ಮೊದಲು ಹುರಿದುಕೊಳ್ಳಿ. ನಂತರ ತೆಂಗಿನ ತುರಿ, ಬೆಲ್ಲ, ಉಪ್ಪು, ಹುಣಸೆ ಹಣ್ಣು ಹಾಕಿ ರುಬ್ಬಿ ಕೊಳ್ಳಿ. ಈ ಕಡೆ ಬಾಣಲೆಯಲ್ಲಿ ತುಪ್ಪ ಹಾಕಿ ಸಾಸಿವೆ, ಜೀರಿಗೆ ಒಗ್ಗರಣೆ ಕೊಟ್ಟು ರುಬ್ಬಿರುವುದನ್ನು ಬಾಣಲೆಗೆ ಹಾಕಿ ಕುದಿಸಬೇಕು. ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನಬಹುದು. ರೊಟ್ಟಿ,ಚಪಾತಿ, ಜೊತೆ ಕೂಡ ಚೆನ್ನಾಗಿರುತ್ತದೆ.
ಬಾಣಂತಿಯರಿಗೆ ಕರಿಬೇವಿನ ಗೊಜ್ಜಿಗೆ ಬೇಕಾಗುವ ಸಾಮಗ್ರಿಗಳು:
- ತೊಗರಿಬೇಳೆ
- ಕೊಬ್ಬರಿ
- ಮೆಣಸು
- ಜೀರಿಗೆ
- ಕರಿಬೇವು
ಎಲ್ಲವನ್ನೂ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ . ಬೆಲ್ಲ, ಉಪ್ಪು ಹಾಕಿ ಕುದಿಸಿ ತುಪ್ಪದ ಒಗ್ಗರಣೆ ಕೊಡಿ ..
- ವೀಣಾ ಶಂಕರ್
