‘ಕರ್ಮಸ್ಥಳ’ ಕವನ

ಸಾಧನೆಯ ಪುಟಗಳಲಿ ದಾಖಲಾಗಿ ಉಳಿಯಲಿ ನಮ್ಮ ಬದುಕು ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…

ನಾವು ಇರುವ ಸ್ಥಳ
ಕರ್ಮಸ್ಥಳ ಆಗಲಿ

ಸತತ ಪ್ರಯತ್ನವು
ನಮ್ಮದಾಗಿರಲಿ

ಸೋಲು ಗೆಲುವು
ಬಂದು ಹೋಗುತ್ತಿರಲಿ

ಹಿಗ್ಗದೆ ಕುಗ್ಗದೆ ಮುಂದೆ
ಸಾಗುವ ಪರಿ ನಮ್ಮದಾಗಿರಲಿ

ಅಪಮಾನ ಅವಮಾನ
ಸನ್ಮಾನಗಳು
ಯಾವುದೇ ಬರಲಿ

ಸಾಧನೆಯ ಹಾದಿಯಲ್ಲಿ
ಯಾವುದೇ ಎಡರು
ತೊಡರುಗಳಿಗೆ ಎಡವದಿರಲಿ

ಮುಂದಿಟ್ಟ ಪ್ರತಿ ಹೆಜ್ಜೆಯೂ
ಮೈಲಿಗಲ್ಲಾಗಲಿ

ಅಚ್ಚಳಿಯದ ಹೆಜ್ಜೆಯ
ಗುರುತು ಮೂಡಲಿ

ಸಾಧನೆಯ ಪುಟಗಳಲಿ
ದಾಖಲಾಗಿ ಉಳಿಯಲಿ

ನೆಮ್ಮದಿಯ ಬದುಕಿಗೆ
ಎಲ್ಲರಿಗೂ ನೆಚ್ಚಿನ ಮೆಚ್ಚಿನ
ಕಾಯಕ ಸಿಗಲಿ


  • ನಾಗರಾಜ ಜಿ. ಎನ್. ಬಾಡ- ವಾಣಿಜ್ಯ ತೆರಿಗೆ ನಿರೀಕ್ಷಕರು, ವಾಣಿಜ್ಯ ತೆರಿಗೆ ಅಧಿಕಾರಿಗಳ ಕಛೇರಿ, ಜಾರಿ-೨, ಕುಮಟ, ಉತ್ತರ ಕನ್ನಡ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading