ತಿರುವಣ್ಣಮಲೈ (ತಮಿಳುನಾಡು)ದಲ್ಲಿ ಕಾರ್ತಿಕ ಮಾಸ ಕೃತ್ತಿಕ ದಿನದಂದು, ಅಂದರೆ ಅರುಣಾಚಲ ಪರ್ವತದ ಮೇಲೆ ಕಾರ್ತಿಕ ದೀಪವನ್ನು ಪ್ರಜ್ವಲಿಸುತ್ತದೆ. ಲೇಖಕರು ವಿ.ಎಂ.ಎಸ್.ಗೋಪಿ ಅವರು ಆ ದಿನದ ವಿಶೇಷತೆಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ತಿರುವಣ್ಣಾಮಲೈ ತಮಿಳುನಾಡಿನಲ್ಲಿ ಕಾರ್ತಿಕ ದೀಪೋತ್ಸವ ಆಚರಣೆ !
ಪ್ರತಿವರ್ಷ ಕಾರ್ತಿಗೈ ಮಾಸದ ಕೃತ್ತಿಕ ದಿನ ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಮತ್ತು ಅಲ್ಲಿನ ಅರುಣಾಚಲ ಪರ್ವತದ ಮೇಲೆ ಸುಂದರವಾದ ಒಂದು ದೊಡ್ಡ ದೀಪವನ್ನು ಪ್ರಜ್ವಲಿಸಲಾಗುತ್ತದೆ. ಮತ್ತು ನಂತರ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಗುತ್ತದೆ.
ಇಲ್ಲಿ ಹಚ್ಚಲಾಗುವ ದೊಡ್ಡ ದೀಪದಲ್ಲಿ ಬಹುತೇಕ ಮೂರೂವರೆ ಸಾವಿರ ಕಿಲೋಗಳಿಗಿಂತ ಹೆಚ್ಚು ತುಪ್ಪ ಮತ್ತು 1 ಸಾವಿರ ಮೀಟರ್‌ನಷ್ಟು ಬಟ್ಟೆಯನ್ನು ಬತ್ತಿಗಾಗಿ ಉಪಯೋಗಿಸಲಾಗುತ್ತದೆ. ಅದಕ್ಕೂ ಮೊದಲು ಪ್ರಾತಃಕಾಲ 4 ಗಂಟೆಗೆ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪವನ್ನು ಪ್ರಜ್ವಲಿಸಲಾಗುತ್ತದೆ ಮತ್ತು ನಂತರ ಅದೇ ದೀಪವನ್ನು ಅರ್ಚಕರು ಮತ್ತು ಗ್ರಾಮಸ್ಥರು ಒಟ್ಟಿಗೆ ಪರ್ವತದ ಮೇಲೆ ತೆಗೆದುಕೊಂಡು ಹೋಗುತ್ತಾರೆ. ಸಾಯಂಕಾಲ ಸರಿಯಾಗಿ 6 ಗಂಟೆಗೆ ‘ಕಾರ್ತಿಕ ದೀಪಮ್ ಪ್ರಜ್ವಲಿಸಲಾಗುತ್ತದೆ. ಈ ದೀಪೋತ್ಸವದ ನೇರಪ್ರಸಾರವನ್ನು ಟಿವಿ ದೂರದರ್ಶನವಾಹಿನಿ ಮೂಲಕ ಪ್ರಸಾರ ಮಾಡಲಾಗುತ್ತದೆ.
ತಿರುವಣ್ಣಾಮಲೈ ದೇವಸ್ಥಾನ ಕಾರ್ತಿಕ ದೀಪಮ್ ಉತ್ಸವವನ್ನು ನೋಡಬಹುದು ಮತ್ತು ಪ್ರತಿಯೊಬ್ಬರು ‘ಕಾರ್ತಿಕ ದೀಪಮ್ ಪ್ರಜ್ವಲಿಸಿ ಒಂದು ರೀತಿಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಇದು ತಮಿಳುನಾಡು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ತಿರುವಣ್ಣಾಮಲೈ’ ಮತ್ತು `ಅರುಣಾಚಲ’ ಹೆಸರುಗಳು “ಪವಿತ್ರ ಅಗ್ನಿ ಬೆಟ್ಟ” ವನ್ನು ಸೂಚಿಸುತ್ತವೆ. ನಂತರ ರಾಜರು ಮತ್ತು ಪ್ರಸಿದ್ಧ ಸಿಬ್ಬಂದಿಗಳು ಶಿವನ ಸ್ಮರಣಾರ್ಥ ಬೆಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಿದರು. ಈ ನಿರ್ದಿಷ್ಟ ಸ್ಥಳದಲ್ಲಿ ಈ ಹಬ್ಬವನ್ನು ಅದ್ಭುತವಾಗಿ ಆಚರಿಸಲಾಗುತ್ತದೆ.
ತಿರುವಣ್ಣಾಮಲೈ ಕ್ಷೇತ್ರ
ತಿರುವಣ್ಣಾಮಲೈ ದೇವಸ್ಥಾನಕ್ಕೆ ಬೆಂಗಳೂರಿನಿಂದ ಹೊಸೂರು, ಕೃಷ್ಣಗಿರಿ ಚೆಂಗಂ ಮೂಲಕ ಸುಲಭವಾಗಿ ಬಸ್ಸುಗಳಲ್ಲಿ ತೆರಳಬಹುದು. ಬೆಂಗಳೂರಿನಿಂದ 221 ಕಿ.ಮೀ ಹಾಗೂ ಚೆನ್ನೈ ನಗರದಿಂದ 185 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ತಿರುವಣ್ಣಾಮಲೈ ಅಣ್ಣಾಮಲೈ ಬೆಟ್ಟಗಳ ಬುಡದಲ್ಲಿ ರೂಪಗೊಂಡ ಪಟ್ಟಣವಾಗಿದೆ. ಈ ಎರಡೂ ಪ್ರಮುಖ ನಗರಗಳಿಂದ ಇಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ತಿರುವಣ್ಣಾಮಲೈಯಲ್ಲಿ ಹುಣ್ಣಿಮೆಯ ದಿನ ಗಿರಿವಲಂ ನಡೆಯುತ್ತದೆ. ಗಿರಿವಲಂ ಅಂದರೆ ಈ ಪವಿತ್ರ ಬೆಟ್ಟ ಗುಡ್ಡದ ಸುತ್ತ ಪ್ರದಕ್ಷಿಣೆ ಹಾಕುವುದು. ಇದಕ್ಕಾಗಿ ರಸ್ತೆಯ ಮಾರ್ಗವಿದ್ದು ಭಕ್ತಾದಿಗಳು ಈ ಬೆಟ್ಟವನ್ನು ಸುಮಾರು 14 ಕಿ.ಮೀ ಕಾಲ್ನಡಿಗೆಯಲ್ಲಿ ಚಲಿಸಿ ಪ್ರದಕ್ಷಿಣೆ ಹಾಕಬಹುದು. ಕಲಿಯುಗದ ಈ ಒಂದು ಪ್ರದಕ್ಷಿಣೆಯು ಸಾವಿರ ಕುದುರೆ ತ್ಯಾಗಕ್ಕೆ ಸಮ ಎಂದು ಹೇಳಲಾಗಿದೆ ಹಾಗೂ ನಿರಂತರ ಭೇಟಿ ಹಾಗೂ ಪ್ರದಕ್ಷಿಣೆಯಿಂದ ಜೀವನ್ಮರಣಗಳ ಕಾಲ ಚಕ್ರದಿಂದ ಮುಕ್ತಿ ಪಡೆಯಬಹುದು ಎಂದೂ ಸಹ ಹೇಳಲಾಗಿದೆ.ಇಲ್ಲಿರುವ ಎಂಟು ಶಿವಲಿಂಗಗಳು ಹಾಗೂ ಅವುಗಳನ್ನು ಪೂಜಿಸುವುದರಿಂದ ದೊರಕುವ ಫಲಗಳು.
ಶಿವಲಿಂಗಗಳು ದಿಕ್ಕು ಸ್ಥಾಪಿಸಿದವರು ಅಧಿಪತಿ ಪ್ರತಿಫಲಗಳು :
- ಇಂದ್ರ ಲಿಂಗಂ ಪೂರ್ವ ಇಂದ್ರ, ಆಕಾಶ ದೇವತೆಗಳ ದೊರೆ ಸೂರ್ಯ ಹಾಗೂ ಶುಕ್ರ ಆಯುಷ್ಯ ವೃದ್ಧಿ ಹಾಗೂ ಪ್ರಸಿದ್ಧಿ.
- ಅಗ್ನಿ ಲಿಂಗಂ ನೈರುತ್ಯ ಅಗ್ನಿ ದೇವ ಚಂದ್ರ ಭಯ ಹಾಗೂ ರೋಗಗಳಿಂದ ಮುಕ್ತಿ.
- ಯಮ ಲಿಂಗಂ ದಕ್ಷಿಣ ಯಮ ದೇವ ಮಂಗಳ ಸುದೀರ್ಘ ಜೀವನ.
- ನಿರುತಿ ಲಿಂಗಂ ಆಗ್ನೇಯ ನಿರುತಿ ದೈತ್ಯಗಳ ದೊರೆ ರಾಹು ಆರೋಗ್ಯ, ಭಾಗ್ಯ, ಸಂತಾನ ಪ್ರಾಪ್ತಿ.
- ವರುಣ ಲಿಂಗಂ ಪಶ್ಚಿಮ ವರುಣ ದೇವರು ಶನಿ ನೀರು ಸಂಬಂಧಿ ಕಾಯಿಲೆಗಳಿಂದ ಮುಕ್ತಿ.
- ವಾಯು ಲಿಂಗಂ ವಾಯವ್ಯ ವಾಯು ದೇವರು ಕೇತು ಶ್ವಾಸಕೋಶ, ಹೃದಯ ಸಂಬಂಧಿ ತೊಂದರೆಗಳಿಂದ ಮುಕ್ತಿ.
- ಕುಬೇರ ಲಿಂಗಂ ಉತ್ತರ ಕುಬೇರ ಗುರು ಧನ ಪ್ರಾಪ್ತಿ ಹಾಗೂ ಪ್ರತಿಷ್ಠೆ.
- ಈಶಾನ್ಯ ಲಿಂಗಂ ಈಶಾನ್ಯ ಈಶಾನ್ಯನ್ ಬುಧ ನೆಮ್ಮದಿ ಹಾಗೂ ಮನಶ್ಶಾಂತಿ.
- ವಿ.ಎಂ.ಎಸ್.ಗೋಪಿ – ಲೇಖಕರು, ಸಾಹಿತಿಗಳು, ಬೆಂಗಳೂರು.
