‘ಕವಿಚಕ್ರವರ್ತಿ ರನ್ನ’ ಕವನ

ಬಳೆಗಾರ ವಂಶದಿ ನೀನಂದು ಜನಿಸಿದೆ !…ಕವಿ,ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಅವರ ರಚನೆಯ ‘ಕವಿಚಕ್ರವರ್ತಿ ರನ್ನ’ ಕವನವನ್ನು ತಪ್ಪದೆ ಮುಂದೆ ಓದಿ…

ಹಳೆಗನ್ನಡದ ವೀರರ
ಕಾಲದ ಮಹಾಕವಿ ರನ್ನ !
ಕರುನಾಡಿನ ಮುದುವೊಳಲಿನ
ಅಪ್ಪಟ ಚೊಕ್ಕ ಚಿನ್ನ !!

ನಿನ್ನ ತಾಯಿ ಅಬ್ಬಲಬ್ಬೆ
ತಂದೆ ಜಿನವಲ್ಲಭ !
ನಿನ್ನ ಹೆತ್ತವರು ಅದೆಂಥಾ
ಪುಣ್ಯವಂತರು, ಅಬ್ಬಾ !!

ಬಳೆಗಾರ ವಂಶದಿ
ನೀನಂದು ಜನಿಸಿದೆ !
ವಿದ್ಯಾರ್ಜನೆಯೇ ಪರಮ
ಗುರಿಯೆಂದು ನೀನು ಅರಿದೆ !!

ಗುರು ಅಜಿತಸೇನಾಚಾರ್ಯರ
ಹುಡುಕಿ ನೀನು ನಡೆದೆ !
ಅವರ ಪ್ರಶ್ನೆಗಳಿಗೆ ಸಮರ್ಪಕ
ಉತ್ತರಿಸಿ, ಶಿಷ್ಯೋತ್ತಮನಾದೆ !!

ಪಂಪ ಮಹಾಕವಿಯ
ಕಾವ್ಯ ಮಾರ್ಗ ಅನುಸರಿಸಿದೆ !
ಎರಡು ಮಹಾಕಾವ್ಯಗಳ
ಚಂಪೂವಿನಲ್ಲಿ ರಚಿಸಿದೆ !!

ವಾಗ್ದೇವಿಯ ಭಂಡಾರದ
ಮುದ್ರೆಯನೊಡೆದೆ !
ಸಾಹಸ ಭೀಮ ವಿಜಯಂ
ಅಜಿತ ತೀರ್ಥಂಕರ ಕಾವ್ಯ ಬರೆದೆ !!

ದಾನ ಚಿಂತಾಮಣಿ ಅತ್ತಿಮಬ್ಬೆ
ಸತ್ಯಾಶ್ರಯ ಇರಿವೆಬೆಡಂಗ, ಚಾವುಂಡರಾಯ !
ಆಶ್ರಯದ ನೆರಳಲಿ ಬೆಳೆದು
ಅಂದು ನೀನಾದೆ ಕವಿಗಳಿಗೆ ಕವಿರಾಜ !!

ರತ್ನತ್ರಯರಲ್ಲಿ
ಕವಿ ರನ್ನ ನೀನೂ ಒಬ್ಬ !
ಕನ್ನಡವನು ಶ್ರೀಮಂತಗೊಳಿಸಿದವು
ನಿನ್ನ ಮಹಾ ಕಬ್ಬ !!

ಕವಿಚಕ್ರವರ್ತಿಯೆಂಬ
ಬಿರುದಾಕಿಂತ ನೀನು !
ಶರಣೆಂಬೆನು ನಿನ್ನ
ಪವಿತ್ರ ಪಾದಕ್ಕೆ ನಾನು !!

ಶಕ್ತಿ ಕವಿ ರನ್ನ ನಿನ್ನ
ಕವಿತ್ವದ ಒಂದು ಗುಂಜಿ !
ನನಗೂ ಆಶೀರ್ವದಿಸಿದರೆ
ಆಗುವೆನು ನಾನು ಗುಲಗಂಜಿ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ, ಕಾವ್ಯನಾಮ – ಚಿರಂಜೀವಿ, ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW