ಬೆಂದಕಾಳು ಸೀದು ತಳಹಿಡಿತ್ತು… ಊರಿಗೆ ದೇಶಕೆ ವಾಸನೆ ಬಡಿದಿತ್ತು… ಕವಿ ಬೆಂಶ್ರೀ ರವೀಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಸಿರಿ ಗರ ಬಡಿದವನೊಬ್ಬ
ಗರಿ ಬಿಡದೆ ಹಿಡಿದವನೊಬ್ಬ
ನಡೆಸಿದ್ದರು ಮಾರಾಮಾರಿ
ನನಗೇ ನನಗೇ ಪೇಟ ಜರಿ
ಸಿರಿ ಐಸಿರಿ ಗರ ಬಡಿದವಗೆ
ಗರಿ ಬರ ಭಾಳಾ ಬಡಿದಿತ್ತು
ಉರುಉರುಳಿದರೂ ಸರಿ ಗಿರಿ
ಬಿಢೆಬಿಟ್ಟಿಹೆ ಬೇಕೇಬೇಕು ಜರಿ
ಗರಿ ಅಯ್ಯಂಗೆ ಗರಿಯೆ ಗುರಿ
ನಾ ಚೆಲ್ಲುವೆ ಬೇಕಾದಷ್ಟು ಸಿರಿ
ಅಡ್ಡ ಬಂದರೆ ಮುರಿವೆ ಬೆನ್ಹುರಿ
ಬೆಂದಕಾಳಿಗೆ ನಾನೇ ಹರಿ ಹರಿ
ಮುಡಿದವ ಬಿಟ್ಟಾನೆಯೆ ಗರಿ
ಗರಿಗೆದರಿ ಎದ್ದ ನಖ ತೋರಿ
ಹತ್ತಿತು ಧಗಧಗ ಉರಿ ಉರಿ
ಕೆಂಪ್ಕೆಂಪಾಯ್ತು ಹೊಟ್ಟೆಯುರಿ
ಸಿರಿ ಗರಬಡಿದವಗೆ ಬಡಬಡಿಕೆ
ಗರಿಯ ಹಿಡಿದವಗೆ ಚಡಪಡಿಕೆ
ನರಿ ಗೊಸುಂಬೆಗಳ ಮುಚ್ಚಳಿಕೆ
ಹಸು ಮುಖ ಹುಲಿ ಹೋರಾಟಕೆ
ಬೆಂದಕಾಳು ಸೀದು ತಳಹಿಡಿತ್ತು
ಊರಿಗೆ ದೇಶಕೆ ವಾಸನೆ ಬಡಿದಿತ್ತು
ಕಳಕೊಂಡವರ ಗತಿ ಕಣ್ಣೀರಾಯ್ತು
ಗುದಮುರಿಗೆ ಮದ ಮುಳುವಾಗಿತ್ತು
- ಬೆಂಶ್ರೀ ರವೀಂದ್ರ
