ಕೊಡಸು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆಯಾಗುವ ಔಷಧೀಯ ಸಸ್ಯವಾಗಿದೆ. ಔಷಧಕ್ಕಾಗಿ ಬಳಸುವ ಸಸ್ಯ ಕನಿಷ್ಠ 9 ರಿಂದ 12 ವರ್ಷದ ಪ್ರಾಯದಲ್ಲಿ ಇರಬೇಕು. ಇದರ ತೊಗಟೆ ಹೂವು, ಎಲೆ, ಕಾಯಿ, ಬೇರು ಇವುಗಳು ಔಷಧಿಗೆ ಉಪಯೋಗ. ಇದರ ಮಹತ್ವದ ಕುರಿತು ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
1.) ಕೊಡಸಿನ ಚಕ್ಕೆ ದಾಳಿಂಬೆಯ ಸಿಪ್ಪೆ ಸಮಾನವಾಗಿ ಪೇಸ್ಟ್ ಮಾಡಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆಮಶಂಕೆ ಗುಣವಾಗುತ್ತದೆ.
2) ಬೇರನ್ನು ಗಂಧ ತೈದು ದೇಸಿ ಆಕಳ ಹಾಲಿನಲ್ಲಿ ಸೇರಿಸಿ ಕುಡಿದರೆ ಊರಿಮೂತ್ರ ಗುಣವಾಗುತ್ತದೆ.
3) ಎಳೆಯ ಎಲೆಯನ್ನು ರಸ ತೆಗೆದು ಹಾಲಿನಲ್ಲಿ ಕುಡಿಯುವುದರಿಂದ ಕಾಮಾಲೆ ಗುಣವಾಗುತ್ತದೆ.
4) ಎಲೆಗಳನ್ನು ಬೆಣ್ಣೆ ಸೇರಿಸಿ ಜಗಿಯುವುದರಿಂದ ಹಲ್ಲು ನೋವು ಗುಣವಾಗುತ್ತದೆ.

ಫೋಟೋ ಕೃಪೆ :google
5) ಕೊಡಸಿನ ಬೀಜ ಮತ್ತು ಅಮೃತಬಳ್ಳಿಯ ರಸಾ ತೆಗೆದು ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಗುಣವಾಗುತ್ತದೆ.
6) ಬೀಜವನ್ನು ಅರೆದು ಬೆಣ್ಣೆಯೊಂದಿಗೆ ಸೇರಿಸಿ ಹಚ್ಚುವುದರಿಂದ ಚರ್ಮರೋಗ ಗುಣವಾಗುತ್ತದೆ.
7) ಹುರಿದ ಕೊಡಸಿನ ಬೀಜ ಹೊಂಗೆಯ ಬೀಜ ಮತ್ತು ಬಜೆ ಪುಡಿಯನ್ನು ಜೇನುತುಪ್ಪ ದಲ್ಲಿ ಸೇರಿಸಿ ಕೊಟ್ಟರೆ ಅಗ್ನಿ ಮಾಧ್ಯ ಉದರ ಕ್ರೀಮಿ ಉದರ ವಾಯು ಗುಣವಾಗುತ್ತದೆ.
8) ಹೂವುಗಳನ್ನು ಪೇಸ್ಟ್ ಮಾಡಿ ಕುರಕ್ಕೆ ಹಚ್ಚಿದರೆ ಕುರ ಒಡೆಯುತ್ತದೆ.
.
9) ಕೊಡಸಿನ ಕಷಾಯ ಮಾಡಿ ಟಬ್ ನಲ್ಲಿ ಹಾಕಿ ಕೂರುವುದ್ರಿಂದ ಮೂಲವ್ಯಾಧಿ ಗುಣವಾಗುತ್ತದೆ.
10) ಇದು ಇಷ್ಟು ಔಷಧೀಯ ಗುಣ ಹೊಂದಿದ್ದರು 47 ದಿನಕ್ಕಿಂತ ಹೆಚ್ಚು ಸೇವಿಸುವಂತಿಲ್ಲ.
11)ಇದು ನನ್ನ ಹಿಂದಿನ ಲೇಖನ ಹೆಚ್ಚಿನ ಮಾಹಿತಿಗಾಗಿ.
ಮಲೆನಾಡಿನ ಜಿಟಿ ಜಿಟಿ ಮಳೆ ಗಾಲದ ಸ್ವಲ್ಪ ಹೊತ್ತು ಮಳೆ ನಿಂತು ಸೂರ್ಯ ಕಣ್ಣು ಬಿಟ್ಟಾಗ ಕಲೆಕ್ಟ್ ಮಾಡಿ ಆಹಾರ ವಾಗಿ ಉಪಯೋಗಿಸಿ ಕಾಯಿಲೆ ಬರದಂತೆ ತಡೆಯುವ ಗಿಡಮೂಲಿಕೆ ಪಟ್ಟಿಯಲ್ಲಿ ಕೊಡಸಿನ ಕಡ್ಡಿ(ಕುಟಜ)ವೂ ಒಂದು. ಸ್ವಲ್ಪ ಕಹಿ ಹಾಗಲ ಕಾಯಿ ಅಷ್ಟೇ ಕಹಿ ಇರುವ ಉದರಕ್ಕೆ ಸಿಹಿ .ಪಲ್ಯ ಮಾಡಿ ತಿನ್ನಬಹುದು.ಇದು ಒಂದು ವಾರ ಕಾಲ ಹಾಳಾಗುವುದಿಲ್ಲ.ಇದರಿಂದ ಪಿಸಿಓಡಿ, ಮುಟ್ಟಿನ ಅವಧಿಯಲ್ಲಿ ಬರುವ ಹೊಟ್ಟೆನೋವು ,ಬಿಳಿ ಸೊರಗು…. ಮುಂತಾದ ಕಾಯಿಲೆ ಬರದಂತೆ ತಡೆಯುತ್ತದೆ.ಕರುಳಿನ ಕ್ರಿಮಿ ಆಗುವುದಿಲ್ಲ.
ಮೂಲವ್ಯಾಧಿ , ಚರ್ಮ ರಕ್ಷಣೆಗೆ … ಮತ್ತಿತರ ನಂಜು ನಿವಾರಕವಾಗಿ ಒಳ್ಳೆಯ ಮೆಡಿಸಿನ್.ಮಳೆಯಿಂದ ಬರಬಹುದಾದ ಅನೇಕ ರೀತಿಯ ಕಾಯಿಲೆ ಬರದಂತೆ ತಡೆಯುತ್ತದೆ.ಜ್ಯೇಷ್ಠ ಮಾಸದಲ್ಲಿ ಬಳಸಲು ಯೋಗ್ಯವಾಗಿದೆ.ನಂತರದ ದಿನಗಳಲ್ಲಿ ಬಲಿತು ಬಿಡುವ ಕಾಯಿ ನಂತರ ಯೋಗ್ಯ ಅಲ್ಲ.ನಮ್ಮ ಆಹಾರ ದಲ್ಲಿ ಔಷಧಿ ಇರಬೇಕು.ಹೊರತಾಗಿ ಔಷಧಿ ಆಹಾರ ಆಗಬಾರದು ಎನ್ನುವ ಆಶಯ ನಮ್ಮ ಹಿರಿಯರದು.
- ಸುಮನಾ ಮಳಲಗದ್ದೆ