ಹಿಂದೂಗಳಲ್ಲಿ ಯಾವುದೇ ಶಾಸ್ತ್ರ, ಒಳ್ಳೆಯ ಕೆಲಸ ಮಾಡುವಾಗ ಬಲಗೈ ಬಳಸುವುದು ಶ್ರೇಯಸ್ಕರ, ಎಡಗೈ ಅನಿಷ್ಠ ಎಂಬ ನಂಬಿಕೆ ಇದೆ. ಎಡಗೈ ಬಗೆಗಿನ ಕೆಲವು ಕೂತಹಲಕಾರಿ ವಿಚಾರಗಳನ್ನು ವೈದ್ಯಕೀಯ ಲೇಖಕರಾದ ಪ್ರಕಾಶ ಬಾರ್ಕಿ ಅವರು ಸ್ವಾರಸ್ಯಕರ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…
ಹಣ, ಆಹಾರ, ಪ್ರಸಾದ ಮುಂತಾದವುಗಳನ್ನ ಕೊಡುವಾಗ ಅಥವಾ ತೆಗೆದುಕೊಳ್ಳುವಾಗ ಎಡಗೈ ಚಾಚಿದರೆ ಎದುರಿನವರು “ಥೂ.. ಅನಿಷ್ಟ” ಅನ್ನೋ ತರ ಕಣ್ಣೋಟದಲ್ಲೇ ತಿರಸ್ಕರಿಸುವರು.
ತಿರಸ್ಕಾರಕ್ಕೆ ಕುಗ್ಗದೆ ಎಡಚರು ಖುಷಿಪಡುವ ದಿನ ಆಗಸ್ಟ್ ೧೩ .
“ವಿಶ್ವ ಎಡಚರ ದಿನ”(International Left Handers Day).
ಬಲಗೈ ಜಗತ್ತಿನಲ್ಲಿ ಎಡಗೈ ಪ್ರಧಾನವಾಗಿ ಬಳಸುವವರ ಅನುಕೂಲ, ಅನಾನೂಕೂಲತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನಾಚರಣೆ ಹೊಂದಿದೆ. ೧೯೭೬ ರಲ್ಲಿ ಡೀನ್ ಆರ್ ಕ್ಯಾಂಪ್ ಬೆಲ್ ಎಂಬುವರು ಪ್ರತಿ ಆಗಸ್ಟ್ ೧೩ ರನ್ನು “ವಿಶ್ವ ಎಡಚರ ದಿನ”ವನ್ನಾಗಿ ಆಚರಿಸಲು ಆರಂಭಿಸಿದರು. ನಮ್ಮ ಕಡೆ (ಉತ್ತರ ಕರ್ನಾಟಕ) ಎಡಚರನ್ನು #ರೊಡ್ಡ ಅಂತ ಛೇಡಿಸುವುದು, ಕರೆಯುವುದು ಸಾಮಾನ್ಯ.

ಫೋಟೋ ಕೃಪೆ :WikiBio
ಎಡಚರ ಬಗೆಗಿನ ಕೆಲವು ಕೂತಹಲಕಾರಿ ವಿಚಾರಗಳು :
- ಜಗತ್ತಿನ ಶೇ.೧೦ ರಿಂದ ೧೨ ರಷ್ಟು ಮಂದಿ ಎಡಗೈ ಪ್ರಮುಖವಾಗಿ ಬಳಸುವವರಿದ್ದಾರೆ.
- ಎಡಗೈ ಬಳಸುವವರಲ್ಲಿ ಗಂಡಸರದ್ದೆ ಮೇಲುಗೈ.
- ಅಂಕಿಸಂಖ್ಯೆಗಳ ಪ್ರಕಾರ ಶೇ.33ರಷ್ಟು ಕ್ರಿಮಿನಲ್‌ಗಳು ಎಡಚರೆ. ಸಂಶೋಧನೆಗಳು ಕೂಡಾ ಎಡಗೈ ವೀರರು ಹಾಗೂ ದುರ್ವರ್ತನೆ ನಡುವೆ ಸಂಬಂಧ ಇರುವುದನ್ನು ಖಚಿತಪಡಿಸಿವೆ.
- ಎಡಗೈ ವೀರರೇ ಹೆಚ್ಚು ಬುದ್ದಿವಂತರು.
- ಸೇಂಟ್ ಲಾರೆನ್ಸ್ ವಿಶ್ವವಿದ್ಯಾಲಯವು ಎಡಗೈ ವೀರರು ಹಾಗೂ ಬಲಗೈ ಭಂಟರ ನಡುವೆ ಐಕ್ಯೂ ಟೆಸ್ಟ್ ನಡೆಸಿತು. ಎಡಗೈ ಪ್ರಮುಖವಾಗಿ ಬಳಸುವವರಲ್ಲಿ ಬಹುತೇಕರ ಐಕ್ಯೂ 140ಕ್ಕಿಂತ ಹೆಚ್ಚಿದ್ದು ಅವರೆಲ್ಲ ಜೀನಿಯಸ್ ಎನಿಸಿಕೊಂಡರು. ಬೆಂಜಮಿನ್ ಫ್ರ್ಯಾಕ್ಲಿನ್, ಮೇರಿ ಕ್ಯೂರಿ, ಐಸಾಕ್ ನ್ಯೂಟನ್, ಐನ್‌ಸ್ಟೀನ್, ಇವರೆಲ್ಲರೂ Left handed ಎನ್ನುವುದೇ ಇದಕ್ಕೊಂದು ಸಾಕ್ಷಿ.
- ಎಡಗೈ ಮಂದಿ ಹೆಚ್ಚು ಸೃಜನಶೀಲರು, ಕೀಯಾಶೀಲರು, ವಿಶಿಷ್ಟ ಯೋಚನಾ ಲಹರಿ ಹೊಂದಿರುವವರು, ಪ್ರತಿಭಾ ಸಂಪನ್ನರು ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.
ಆದ್ದರಿಂದಲೇ ಬಹುತೇಕ ಪ್ರಸಿದ್ಧ ಕಲಾವಿದರು, ಬರಹಗಾರರು, ಕಲಾತ್ಮಕತೆ ಹೊಂದಿರುವವರು, ಶ್ರೀಮಂತರು, ಕ್ರೀಡಾಪಟುಗಳು ಎಡಚರಂತೆ. - ಎಡಚರು ಅವಮಾನಕ್ಕೊಳಗಾಗುವ ಭಯದಿಂದ ಬಹು ಬೇಗ ಕುಗ್ಗಿ, ಟೀಕೆಗಳಿಗೆ ನರಳುತ್ತಾರಂತೆ.
- ಜಗತ್ತಿನ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ಎಡಗೈ ಭಂಟ.
- ರತನ್ ಟಾಟಾ, ಲಕ್ಷ್ಮೀ ಮಿತ್ತಲ್ ಮುಂತಾದ ಶ್ರೀಮಂತರು ಎಡಚರೆ.
- ಫೆಸ್ಬುಕ್ ಸಂಸ್ಥಾಪಕ ” ಮಾರ್ಕ್ ಜುಕರ್ಬರ್ಗ್”ಪ್ಪ ಎಡಚ.
- ಎಡಚರು ಬಹು ಕೋಪಿಷ್ಠರಂತೆ ದೂರ್ವಾಸ ಮುನಿ ತರ.
- ಎಡಚರು ಹೆಚ್ಚಾಗಿ Schizophrenia ಎಂಬುವ ಮಾನಸಿಕ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಂತೆ.

ಫೋಟೋ ಕೃಪೆ : best life
ಎಡಚರು ಖುಷಿಪಡುವ ಲಿಸ್ಟ್ ಇಲ್ಲಿದೆ ನೋಡಿ. ಈ ಕೆಳಗಿನ ನಾಮಧೇಯರೆಲ್ಲರೂ ಎಡಚರೇ…
ಭಾರತದ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ, ಹಾಲಿವುಡ್‌ನ ಟಾಮ್ ಕ್ರೂಸ್, ಓಪ್ರಾ ವಿನ್‌ಫ್ರೇ, ಜಸ್ಟಿನ್ ಬೀಬರ್, ಬ್ರಾಡ್ ಪಿಟ್, ಏಂಜಲೀನಾ ಜೂಲಿ, ಮರ್ಲಿನ್ ಮನ್ರೋ, ಬಾಲಿವುಡ್‌ನ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಮದರ್ ಥೆರೇಸಾ, ಬರಾಕ್ ಒಬಾಮಾ, ಕ್ರಿಕೆಟ್ ದೇವರು ಸಚಿನ್ ಥೆಂಡೂಲ್ಕರ್, ಸೂಪರ್‌ಸ್ಟಾರ್ #ರಜನಿಕಾಂತ್, ಚಾರ್ಲಿ ಚಾಪ್ಲಿನ್, ಮೈಕೆಲ್ ಜಾಕ್ಸನ, ಮುಂತಾದವರೆಲ್ಲರೂ ಎಡಚರೆ.

ಫೋಟೋ ಕೃಪೆ : pinterest
ಅರೆರೆ!!! ಹಾಗಿದ್ದರೆ ಎಡಗೈಗೂ ಯಶಸ್ಸಿಗೂ ಸಂಬಂಧವಿರಬಹುದೇ?.
ಯಶಸ್ವಿ ಭಯಾನಕ ಕಥಾ ಬರಹಗಾರ, ಸೃಜನಶೀಲ ಲೇಖಕ ಗುರುರಾಜ ಕೊಡ್ಕಣಿ ಸರ್ ತಮಗೆ “ವಿಶ್ವ ಎಡಚರ ದಿನ”ದ ಶುಭಾಶಯಗಳು. ಕ್ರೀಯಾಶೀಲತೆ, ವಿಶಿಷ್ಟ ಯೋಚನಾ ಲಹರಿ ಹೊಂದಿರುವ ಕಥೆಗಾರರು, ಲೇಖಕರು, ಕವಿಗಳು ಹೆಚ್ಚಾಗಿ ಎಡಚರೆ ಎಂಬುದಕ್ಕೆ ನೀವೆ ಉದಾಹರಣೆ ನೋಡಿ.
- ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
