‘ಪ್ರೀತಿಯ ಬಲೆ’ ಕವನ – ಖಾದರ್



ಒಮ್ಮೆ ಪ್ರೀತಿಯ ಬಲೆಯಲ್ಲಿ ಸಿಲುಕಿದರೆ ಹೊರಕ್ಕೆ ಬರುವುದು ಎಷ್ಟು ಕಷ್ಟ ಅನ್ನುವುದು ಪ್ರೀತಿಯಲ್ಲಿ ಬಿದ್ದವರಿಗೆ ಅದರ ಅರಿವಿರುತ್ತದೆ. ಒಂದು ಪ್ರೀತಿಯ ಕವನ ಓದಿ…

ಪ್ರೀತಿಯ ಬಲೆಯದು
ಸಿಲುಕಿಕೊಂಡರೆ ತೊಡಕುವುದು

ನೆನೆಯುವುದು ಪ್ರೇಮಿಯ ಅನುಕ್ಷಣವು
ನೆನಪಲ್ಲೆ ದಿನವ ಕಳೆಯುವುದು

ಊಟ ನಿದ್ರೆಯ ಸೇರಿಸದು
ಸಾಮೀಪ್ಯಕೆ ತತ್ತರಿಸುವುದು

ಬಳಿಯಲಿರಬೇಕೆಂದು ಬಯಸುವುದು
ನೋಡುತಲೇ ಜಗವ ಮರೆಯುವುದು

ತಪ್ಪಾಗಲಿ, ಒಪ್ಪಾಗಲಿ, ಮುಪ್ಪಾಗಲಿ
ಜೊತೆಯಲಿರಬೇಕೆಂದು ಜಪಿಸುವುದು

ಹಣ ಅಂತಸ್ತು ಅರಮನೆಯ
ಅವಗಣಿಸಿ ಗುಡಿಸಲಿಗೆ ಒಗ್ಗುವುದು

ನೆನಸಿ ಹರಸಿ ಅಳುತ್ತಾ
ತನ್ನಲ್ಲೇ ತಾ ಮರೆತುಹೋಗುವುದು

ಕಣ್ಣಿಗೆ ನಿದ್ರೆಯ ಹಚ್ಚಿ
ಕನಸಿನ ಸಾಗರದೀ ಕಳೆದುಹೋಗುವುದು

ಪ್ರೀತಿಯೊಂದು ಅಮಲು
ಮದುವೆಯೇ ಬಾಗಿಲು
ಬರುವೆನು ಗೆಳತಿ ನೀ
ಕಾಯಿತಿರು ಬಿಟ್ಟುಬಿಡದಿ.


  • ಖಾದರ್ (ಕವಿಗಳು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading