ಐಪಿಎಲ್ ಎನ್ನುವ ಜೂಜಿನಾಟ – ಖಾದರ್



ಒಂದು ಆಟ ಉತ್ತಮ ಆರೋಗ್ಯಕ್ಕೆ ದಾರಿಯಾಗಲು ಬಹುದು, ಇಲ್ಲವೇ ಮಾರಕವಾಗಲು ಬಹುದು. ಆಟವನ್ನು ಆಟವನ್ನಾಗಿ ತಗೆದುಕೊಂಡರೆ ಒಳಿತು. ಇಲ್ಲವಾದರೆ ಜೇಬೆಲ್ಲ ಖಾಲಿ ಆಗುವುದು, ಹುಷಾರ್… ಎಂದು ಕವಿ ಖಾದರ್ ಅವರು ಎಚ್ಚರಿಸಿದ್ದಾರೆ.. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಈ ಕವನದ ಬಗ್ಗೆ ನಿಮ್ಮಅಭಿಪ್ರಾಯ ತಿಳಿಸಿ…

ಅಲ್ಲೊಂದು ಆಟ ನಡೆದಿತ್ತು
ಗೂಟ ಊರಿ ಕುಂತಿತ್ತು ಗುಂಪೊಂದು

ಆಟವೆಂದು ಬಂದರವರು
ಮೋಸಮಾಡಿ ಗಳಿಸುತಿಹರು

ಹಣಕ್ಕಾಗಿ ಹರಾಜು ಆಗಿದ್ದರವರು
ಗೆದ್ದರೂ ಬಂದಿತ್ತು ಸೋತರೂ ಬಂದಿತ್ತು

ಅಭಿಮಾನವೆಂದು ಅರಚುತಿರುವರವರು
ಆರಕ್ಕೆ ಏರಲಿಲ್ಲ ಅದ್ವಾನ ಆದರು

ಜೂಜು ಎಂಬ ಪಾಶವ ಹಿಡಿದು ಬಂದರವರು
ಜೇಬೆಲ್ಲ ಜಾಡಿಸಿ ಕಿತ್ತುಕೊಂಡರು

ಸಾಲವ ಮಾಡಿ ಸುರಿದರವರು
ಕುತ್ತಿಗೆಗೆ ಬಂದಾಗ ಕತ್ತು ಕೊಯಿಕೊಂಡರು

ಕಷ್ಟ ಸುಖದಿ ಮಗನ ಸಾಕಿದ್ದರವರು
ಕುಡಿಯ ಕಳಕೊಂಡು ಕೊರಗುತ್ತಿರುವರು

ಇಷ್ಟಾದರೂ ಅರ್ಥ ಮಾಡಿಕೊಂಡಿಲ್ಲರವರು
ಸಾಲುಸಾಲಾಗಿ ಸಾಯಿತಿರುವರವರು


  • ಖಾದರ್ (ಕವಿ- ಲೇಖಕರು, ಬಳ್ಳಾರಿ ಜಿಲ್ಲೆ ತೆಕ್ಕಲಕೋಟೆ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading