ಜೀವನದ ನುಡಿಮುತ್ತುಗಳು – ಖಾದರ್



ಜೀವನದಲ್ಲಿ ಯಾವುದು ಮುಖ್ಯವಾಗಿರಬೇಕು ಎನ್ನುವ ನುಡಿಮುತ್ತುಗಳನ್ನು ಕವಿ ಖಾದರ್ ಅವರು ಓದುಗರಿಗೆ ನೀಡಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಹುಚ್ಚನಂತಿದ್ದರೂ ಸರಿಯೇ
ಹತ್ತು ಜನ ಮೆಚ್ಚುವಂತಿರಬೇಕು

ಬಟ್ಟೆ ಮಾಸಿದರೂ ಸರಿಯೇ
ಗೌರವ ಹೊಳೆಯುತಿರಬೇಕು

ಮಾತಾಡದಿದ್ದರೂ ಸರಿಯೇ
ಆಡಿದ್ದು ಮುತ್ತಾಗಿರಬೇಕು

ಸಿರಿ ಸಂಪತ್ತಿದ್ದರೂ ಸರಿಯೇ
ಸರಳತೆ ಜೀವಾನವಾಗಿರಬೇಕು

ಸುಖ-ದುಃಖ ಸಾಕಷ್ಟಿದ್ದರೂ ಸರಿಯೇ
ತನ್ನೊಳು ತಾ ನುಂಗುವವನಾಗಿರಬೇಕು

ಜಗಳ ಜೂಟಿಯವನದರೂ ಸರಿಯೇ
ಅನ್ಯಾಯಕ್ಕೆ ಅಲುಗಾಡದವನಾಗಿರಬೇಕು

ಜಿಪುಣನದರೂ ಸರಿಯೇ
ಜೀವನ ಜೋಪಾನ ಮಾಡುವವನಾಗಿರಬೇಕು

ಹೊಟ್ಟೆ ಬಾಕನದರೂ ಸರಿಯೇ
ತಿಂದದ್ದು ತನ್ನದಾಗಿರಬೇಕು

ಏನಾದರೂ ಸರಿಯೇ
ಮೊದಲು ಮಾನವನಾಗಿರಬೇಕು


  • ಖಾದರ್  (ಕವಿ, ಚಿಂತಕ)

One thought on “ಜೀವನದ ನುಡಿಮುತ್ತುಗಳು – ಖಾದರ್”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading