ಬೇಡದ ಜಗತ್ತು – ಖಾದರ್ಆಧುನಿಕ ಜೀವನದಲ್ಲಿ ಮಾನವೀಯ ಮೌಲ್ಯಕ್ಕೆ ಬೆಲೆ ಇಲ್ಲದಾಗಿ, ಸಂಬಂಧಗಳು ಅಳಿದು ದೇವರ ಭಯವನ್ನು ಮರೆತು, ಮನುಷ್ಯ ಎಸಗುತ್ತಿರುವ ಅಪರಾಧದ ಬಗ್ಗೆ ಕವಿ ಖಾದರ್ ಅವರು ಈ ಕವನದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.

ಏನು ಮಾಡುವುದು ಯೋಚಿಸ ಹೊರಟರೆ
ಜಗವೇ ಬೇಡವೆನಿಸುವುದು

ಒಳ್ಳೆತನದ ವ್ಯಾಲಿಡಿಟಿಯು ಮುಗಿದಿರುವುದು
ಕೆಡಕಿಗೆ ಕೊನೆಯೇ ಇಲ್ಲದಾಗಿರುವುದು

ಬುದ್ಧಿಯು ಬಲಿತು ಜ್ಞಾನವು ಮುದುಡಿ
ಅಲ್ಪನೆ ಮೆರೆಯುತಿರುವನು

ನಾವು ನಮ್ಮದೆಂಬ ಭಾವನೆಯು ಅಳಿದಿರುವುದು
ನೀನ್ಯಾರೋ ನಾನ್ಯಾರೋ ಅನ್ನುತಲಿರುವೆವು

ಸಂಬಂಧಗಳು ಸತ್ತು ಕಾಮವೇ ತುಂಬಿ
ಕಣ್ಣಿಗೆ ಕಾಣುವುದೆಲ್ಲ ಹೊಲಸೆ ಅನಿಸುತಿವುದು

ರೊಕ್ಕವು ಕಣ್ಣ ತುಂಬಿ ಯಾವುದಕ್ಕೂ ಹೇಸದೆ
ರುಂಡ ಮುಂಡಗಳು ಬೇರ್ಪಡುತ್ತಿರುವವು

ನೋಡಿದ್ದೇಲವು ಬೇಕೆಂದು ಇದದ್ದು ಒದ್ದು
ಎದ್ದು ಬಿದ್ದು ಏನೇನೋ ಆಗುತ್ತಿರುವುದು

ಭಯ ಗೌರವದ ಘನತೆ ಕೆಟ್ಟು
ಸಮಾಜವು ಸುಧಾರಿಸದಂತಾಗಿರುವುದು

ಇಲ್ಲಿರುವುದೇ ಎಲ್ಲವೆಂದು ಅಲ್ಲಿರುವುದು
ಎನ್ನಿಲ್ಲವೆಂದು ಆ ಒಬ್ಬಾತನನ್ನು ಮರೆತಿರುವೆವು


  • ಖಾದರ್ (ಯುವ ಕವಿ, ಬಳ್ಳಾರಿ)

 

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW