ಈಗಿನ ಮಕ್ಕಳಿಗೆ ತರಕಾರಿಯನ್ನು ತಿನ್ನಿಸುವುದೇ ಕಷ್ಟ. ಅಂತಹ ಮಕ್ಕಳಿಗಾಗಿ ಶುಭಾಷಿಣಿ ಅವರು ಕ್ಯಾರೆಟ್ ಕೇಕ್ ಹೇಳಿ ಕೊಟ್ಟಿದ್ದಾರೆ . ಮಕ್ಕಳ ಕಣ್ಣಿಗೆ, ಅದು ಕೇಕ್ ಆದರೆ, ತಾಯಂದಿರಿಗೆ ಆರೋಗ್ಯಭರಿತ ಕ್ಯಾರೆಟ್ ತಿಂದ ಸಂತೋಷ. ಮನೆಯಲ್ಲಿ ಮಾಡಿ ನೋಡಿ…
ಕ್ಯಾರೆಟ್ ಕೇಕ್ ಮಾಡಲು ಬೇಕಾಗಿರುವ ಸಾಮಗ್ರಿಗಳು :
೩ ಕಪ್ ತುರಿದಿರುವ ಕ್ಯಾರೆಟ್
೪ ಮೊಟ್ಟೆ
೨ ಕಪ್ ಮೈದಾ
೨ ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ
೧/೨ ಟೇಬಲ್ ಸ್ಪೂನ್ ಉಪ್ಪು
೧ ೧/೨ ಟೇಬಲ್ ಸ್ಪೂನ್ ಚಕ್ಕೆ ಪೌಡರ್
೧ ೧/೪ ಕಪ್ ಅಡುಗೆ ಎಣ್ಣೆ
೧ ಕಪ್ ಬ್ರೌನ್ ಶುಗರ್
೧ ಕಪ್ ಸಕ್ಕರೆ
೧ ಟೇಬಲ್ ಸ್ಪೂನ್ ವೆನಿಲ್ಲಾ ಎಸೆನ್ಸ್
೧/೨ ಕಪ್ ಒಣ ದ್ರಾಕ್ಷಿ ಮತ್ತು ಗೋಡಂಬಿ
ಮಾಡುವ ವಿಧಾನ :
೧ ಅಗಲವಾದ ಪಾತ್ರೆಗೆ ಜರಡಿ ಹಿಡಿದಿರುವ ಮೈದಾ, ಬೇಕಿಂಗ್ ಸೋಡಾ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಚಕ್ಕೆ ಪುಡಿ ಮತ್ತು ಪುಡಿ ಮಾಡಿರುವ ಬ್ರೌನ್ ಮತ್ತು ನಾರ್ಮಲ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅದಕ್ಕೆ ತುರಿದಿರುವ ಕ್ಯಾರೆಟ್ ಮತ್ತು ಮೊಟ್ಟೆ ಹಾಕಿ ಒಂದೇ ಕಡೆಗೆ ಚೆನ್ನಾಗಿ ಬೀಟ್ ಮಾಡಿ ಕೊಳ್ಳಿ.(ಯಾವಾಗಲೂ ಕೇಕ್ ಮಾಡುವಾಗ ಮಿಶ್ರಣವನ್ನು ಒಂದೇ ಡೈರೆಕ್ಷನ್ ನಲ್ಲಿ ಬೀಟ್ ಮಾಡಿಕೊಳ್ಳಬೇಕು) ನಂತರ ೧ ಕೇಕ್ ಟಿನ್ ಗೆ ಅರ್ಧ ಸ್ಪೂನ್ ತುಪ್ಪ ಹಚ್ಚಿ ಸ್ವಲ್ಪ ಮೈದಾವನ್ನು ಉದುರಿಸಿ ಸಿದ್ಧವಾಗಿರುವ ಕೇಕ್ ಮಿಶ್ರಣವನ್ನು ಟಿನ್ ಗೆ ಸುರಿದು ನಿಮಗೆ ಬೇಕಾದ ರೀತಿಯಲ್ಲಿ ಗೋಡಂಬಿ ದ್ರಾಕ್ಷಿಯೊಂದಿಗೆ ಅಲಂಕರಿಸಿಕೊಳ್ಳಿ.

ಮೈಕ್ರೋವೇವ್ ನಲ್ಲಿ ಮಾಡುವ ವಿಧಾನ :
ಹತ್ತು ನಿಮಿಷ ಮೈಕ್ರೋವೇವ್ ನನ್ನು ೧೮೦ ಡಿಗ್ರಿಯಲ್ಲಿ ಪ್ರಿಹೀಟ್ ಮಾಡಿಕೊಳ್ಳಿ. ನಂತರ ಕೇಕ್ ಟಿನ್ ನನ್ನು ಮೈಕ್ರೋ ವೇವ್ ಒಳಗಿಟ್ಟು ಮೂವತ್ತು ನಿಮಿಷ ೧೮೦ ಡಿಗ್ರಿಯಲ್ಲಿ ಕನ್ವೆಕ್ಷನ್ ಮೂಡ್ ನಲ್ಲಿ ಬೇಕ್ ಮಾಡಿದರೆ ರುಚಿಯಾದ ಕ್ಯಾರೆಟ್ ಕೇಕ್ ಸಿದ್ಧವಾಗಿರುತ್ತದೆ.

ಕುಕ್ಕರ್ ನಲ್ಲಿ ಮಾಡುವ ವಿಧಾನ :
ಕುಕ್ಕರ್ ಗೆ ಒಂದೂವರೆ ಕಪ್ ಪುಡಿ ಉಪ್ಪು ಹಾಕಿ ಹತ್ತು ನಿಮಿಷ ಪ್ರಿಹೀಟ್ ಮಾಡಿಕೊಳ್ಳಬೇಕು ನಂತರ ಮಿಶ್ರಣ ಇರುವ ಕೇಕ್ ಟಿನ್ ಅನ್ನು ಇಟ್ಟು ವಿಷಲ್ ಮತ್ತು ಗ್ಯಾಸ್ ಕೆಟ್ ತೆಗೆದು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಕ್ಯಾರೆಟ್ ಕೇಕ್ ಸವಿಯಲು ಸಿದ್ಧವಾಗಿರುತ್ತದೆ.
- ಕೈ ಚಳಕ : ಶುಭಾಷಿಣಿ (ಗೃಹಿಣಿ, ನಳಪಾಕ ಪ್ರವೀಣೆ) ಬೆಂಗಳೂರು.