ಕಾಸರಗೋಡಿನ ಕವಿ ಅಪ್ಪಯ್ಯನವರು ಬರೆದಿರುವ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…
ನನ್ನೊಲವಿನ ಪುಟದೊಳಗೆ
ಮಧುರ ಕವಿತೆಯಾದೆ ನೀ
ನನ್ನಜೀವ ಜೀವಕಣದಿ
ಮಧುರ ಸಂಜೀವಿನಿಯು ನೀ..
ಮಂದಹಾಸ ಬೀರಿಬಂದು
ಚಂದದಿಂದ ಅಪ್ಪಿಕೊಂಡು
ಪ್ರೇಮ ಕವಿತೆಯಾದೆ ನೀ..
ರೋಮರೋಮದಲ್ಲೂ ನನ್ನ
ಕಾಮನೆಗಳ ಕನಸ ಚೆಲ್ಲಿ
ಒಡಲೊಳೆಲ್ಲೋ ಚಿಗುರ ಬಿಟ್ಟು
ಮಧುರ ಕವಿತೆಯಾದೆನೀ..
ನನ್ನೊಲವಿನ ಪುಟದೊಳಗೆ
ಗೀಚಿ ಹಲವು ಕಾಮನೆಗಳ
ಘಾಸಿಗೊಳಿಸಿ ಹೃದಯವನ್ನ
ಮಧುರಕವಿತೆಯಾದೆನೀ..
- ಅಪ್ಪಯ್ಯ – ಕಾಸರಗೋಡು.
