‘ಮಹಾರಾಜ’ ಸಿನಿಮಾ ನೆಟ್ಫ್ಲಿಸ್ ನಲ್ಲಿದ್ದು, ನಟ ವಿಜಯ್ ಸೇತುಪತಿ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪ ಮಗಳ ಸೆಂಟಿಮೆಂಟ್ ಇರುವ ಮಹಾರಾಜ ಸಿನಿಮಾದ ಕುರಿತು ರುದ್ರೇಶ್ ಬಿ ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಸಾಮಾನ್ಯವಾಗಿ ಒಂದು ಮೂವಿ ಅಂದ್ರೆ, ಅದ್ರಲ್ಲಿ ನಾಲ್ಕೈದು ಸಾಂಗ್ಸು.. ಒಂದು ಐಟಂ ಡ್ಯಾನ್ಸ್.. ಹೀರೋ ರಗಡ್ ಎಂಟ್ರಿ.. ಬಿಲ್ಡಪ್ ಡೈಲಾಗ್.. ಅರಚಾಟ.. ಕಿರುಚಾಟ.. ಒಂದೆರಡು ವಲ್ಗರ್ ಸೀನ್ಗಳು.. ಸೋ ಟೋಟಲಿ ಮಸಾಲಾ ಮತ್ತು ಆಕ್ಷನ್ ಮಿಕ್ಸ್ ಇದ್ರೆ ಅದು ಮೂವಿ ಅನ್ನೋರೇ ಜಾಸ್ತಿ.. ಅದೇ ಥರಾ ಮೂವಿ ಮಾಡೋರೆ ಜಾಸ್ತಿ ಬಿಡಿ. ಇಂಥಾ ಮೂವಿಗಳಲ್ಲೂ ಒಂದೊಳ್ಳೆ ಕಥೆ ಇದ್ರೆ ಕೆಲವು ಓಡ್ತವೆ.. ಕೆಲವರಿಗೆ ಕೆಲವು ಇಷ್ಟ ಆಗ್ತವೆ. ನಾನೂ ಇಂಥಾ ಸುಮಾರು ಮೂವಿಗಳನ್ನ ನೋಡಿದಿನಿ.. ಗಾಂಧಿನಗರ ಅನ್ನೋ ಮಾಯಾಬಜಾರ್ನಲ್ಲಿದ್ದ (ಅಪರ್ಣ, ತ್ರಿವೇಣಿ, ಮೆಜೆಸ್ಟಿಕ್, ಸಂತೋಷ್, ನರ್ತಕಿ, ಸಪ್ನ, ಕಲ್ಪನಾ, ಸಾಗರ್, ಸ್ಟೇಟ್ಸ್(ಭೂಮಿಕಾ), ಮೇನಕಾ, ಸಂಗಮ್, ಹಿಮಾಲಯ, ಕೆಂಪೇಗೌಡ, ತ್ರಿಭುವನ್, ಕೈಲಾಶ್, ಮೂವಿಲ್ಯಾಂಡ್, ಕಪಾಲಿ, ಅಭಿನಯ, ವಿಜಯಲಕ್ಷ್ಮೀ, ಶಿವಾಜಿ) ಅಷ್ಟೂ ಥಿಯೇಟರ್ಗಳಲ್ಲೂ ಮೂವಿಗಳನ್ನ ನೋಡಿದಿನಿ.. ಅದ್ರಲ್ಲಿ ತೋಪೆದ್ದ ಮೂವಿಗಳೂ ಇದಾವೆ.. ಸೂಪರ್ ಹಿಟ್ ಆಗಿರೋ ಮೂವಿಗಳೂ ಇದಾವೆ.. ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮೂವಿಗಳನ್ನೂ ನೋಡಿದಿನಿ.. ನೋಡ್ತಾನೂ ಇದಿನಿ. ಆದ್ರೆ, ಕೆಲವರು ಥರಾ ಸುಖಾಸುಮ್ಮನೆ ಚೆನ್ನಾಗಿಲ್ಲದೇ ಇರೋ ಮೂವಿಗಳ ಬಗ್ಗೆ ಚೆನ್ನಾಗಿದೆ ಅಂತಾ ಬರೆಯೋಕೆ ಹೋಗೋದಿಲ್ಲ.. ಗೀಚೋಕೆ ಪುರುಸೊತ್ತೂ ಇಲ್ಲ.. ಆದ್ರೆ, ಈ ಮೂವಿ ಬಗ್ಗೆ ಬರೀಲೇಬೇಕು ಅನ್ನಿಸ್ತು.. ಹೇಳಬೇಕು ಅನ್ನಿಸ್ತು. ಫಿಲ್ಮ್ ಅಂದ್ರೆ, ಎರಡು ಗಂಟೆ ಎಂಟರ್ಟೈನ್ಮೆಂಟ್ ಕೊಡಬೇಕು.. ಸ್ಟೋರಿ ಇರಬೇಕು.. ಅದ್ರ ಜೊತೆ ಒಂದ್ ಮೆಸೇಜ್ ಕೂಡ ಇರಬೇಕು.

ಫೋಟೋ ಕೃಪೆ : google
ಅಂಥದ್ದೊಂದು ಅದ್ಭುತ ಮೂವಿ ಮಹಾರಾಜ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ತಣ್ಣಗಿನ ಕ್ರೌರ್ಯ.. ಅಪ್ಪ ಮಗಳ ಸೆಂಟಿಮೆಂಟ್.. ಅತ್ಯದ್ಭುತ ಕ್ಲೈಮ್ಯಾಕ್ಸ್.. ಅತ್ಯುತ್ತಮ ಚಿತ್ರಕಥೆ.. ವಿಜಯತ್ ಸೇತುಪತಿಯ ಅಸಾಧಾರ ನಟನೆಗೆ ಹ್ಯಾಟ್ಸಾಫ್ ಹೇಳಲೇಬೇಕು. ಸಹಜ ನಟನೆಯಿಂದಲೇ ಜನಮನ ಗೆದ್ದಿರೋ ವಿಜಯ್ ಸೇತುಪತಿಗೆ ಇದು 50ನೇ ಸಿನಿಮಾ.. ನಿಮಗೆ ಈ ಫಿಲ್ಮ್ನ ಆರಂಭದಲ್ಲಿ ಒಬ್ಬ ದೊಡ್ಡ ಸ್ಟಾರ್ನ 50ನೇ ಸಿನಿಮಾಗೆ ಇದ್ಯಾವುದೋ ಇಂಥಾ ಸ್ಟೋರಿನಾ ಅಂತಾ ಅನ್ನಿಸಬಹುದು.. ಆದ್ರೆ, ಹೋಗ್ತಾ ಹೋಗ್ತಾ ನಿಮ್ಮನ್ನ ಮೈಮರೆಸಿಬಿಡುತ್ತೆ.. ಅದೆಂಥಾ ಕಲ್ಲುಗುಂಡಿಗೆ ಇರೋ ಗಂಡಿಗೂ ಕಣ್ಣೀರುತರಿಸಿಬಿಡುತ್ತೆ.. ಇದು ಅದಲ್ಲ.. ಇನ್ನೇನೋ ಇದೆ ಅನ್ನೋ ರೋಚಕತೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗುತ್ತೆ.. ಜಸ್ಟ್ 300 ರೂಪಾಯಿಯ ಡಸ್ಟ್ಬಿನ್.. ಒಬ್ಬ ಮುಗ್ದ ಕ್ಷೌರಿಕ.. ಆತನ ಮಗಳು.. ಪೊಲೀಸ್ ಸ್ಟೇಷನ್.. ಆ ಕ್ಷೌರಿಕ(ಮಹಾರಾಜ) ಹೇಳುವ ಕಥೆ.. ಆತನ ಮುಖಭಾವ.. ಮಗಳ ಮೇಲಿನ ಪ್ರೀತಿ.. ಕಣ್ಣಂಚಿನಿಂದ ಇನ್ನೇನು ಕೆಳಬೀಳುವಂತಿರುವ ಕಣ್ಣೀರು.. ಸೇಡು.. ಆ ಸೇಡಿನ ಸಂಕೇತವಾಗಿ ಬಂದುಹೋಗುವ ನಾಗರಹಾವು.. ಮಹಾರಾಜ ಮತ್ತು ಮತ್ತೊಬ್ಬ ವಿಲನ್ ನಲ್ಲಸಿವಂ ನಡುವಿನ ಆ ಸಂಭಾಷಣೆ.. ಚಿತ್ರದುದ್ದಕ್ಕೂ ಒಂದೊಂದು ರೋಚಕತೆನೇ.. ಕ್ಲೈಮ್ಯಾಕ್ಸ್ ಅಂತೂ ಚಿಂದಿ ಕಣ್ರೀ.. ಆ ಮಗುವಿನ ಎರಡು ಹೆಜ್ಜೆ.. ಆ ಹೆಜ್ಜೆಗೆ ಹರಿಯೋ ನೆತ್ತರು.. What a amazing scene.. its extraordinary.. ವಿಜಯ್ ಸೇತುಪತಿ ನಟನೆಗೆ ಮತ್ತಷ್ಟು ಮೆರಗು ಕೊಟ್ಟಿದ್ದು ಅನುರಾಗ್ ಕಶ್ಯಪ್ (ಸೆಲ್ವಂ) ವಿಲನ್ ರೋಲ್.. ಡೈರೆಕ್ಟರ್ ನಿತಿಲಾನ್ ಸಾಮಿನಾಥನ್ ಟ್ಯಾಲೆಂಟ್ನ ಮೆಚ್ಚಿಕೊಂಡ್ಲೇಬೇಕು ಬಿಡಿ..
There is no secret to the fact that Vijay Sethupathi is a brilliant actor. ಒಬ್ಬ ನಟ ಹೇಗೆ ಪರಕಾಯಪ್ರವೇಶ ಮಾಡ್ತಾನೆ ಅನ್ನೋದನ್ನ ನಟ ವಿಜಯ್ ಸೇತುಪತಿ ಪ್ರತಿ ಫ್ರೇಮ್ನಲ್ಲೂ ತೋರಿಸಿದ್ದಾರೆ. ಏನು ಹೇಳಬೇಕು ಅನ್ನೋದನ್ನ ಕಣ್ಣಲ್ಲೇ ಹೇಳೋದು.. ಡೈಲಾಗ್ ತುಂಬಾನೇ ಕಮ್ಮಿ ಇರೋ ಪಾತ್ರದಲ್ಲಿ ಮುಖಚರ್ಯೆಯಲ್ಲೇ ಎಲ್ಲವನ್ನೂ ಹೇಳಿದ್ದು ಮಾತ್ರ ಅತ್ಯದ್ಭುತ.. So, ಇದು Netflixನಲ್ಲಿದೆ.. ಫ್ಯಾಮಿಲಿ ಜೊತೆ ಕೂತ್ಕೊಂಡ್ ನೋಡಿ.. ಎಂಜಾಯ್ ಮಾಡಿ..
- ರುದ್ರೇಶ್ ಬಿ
