ವೀರೇಶ ಬ ಕುರಿ ಸೋಂಪೂರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನಗಳು, ತಪ್ಪದೆ ಮುಂದೆ ಓದಿ…
ಕನ್ನಡ
ಕನ್ನಡ ನುಡಿಯ
ನುಡಿಯಲು ಕೂಸೆ,
ಸವಿದಂಗಾಗ್ತದೆ
ಬಿಸಿ ಬಿಸಿ ದೋಸೆ.
ಕನ್ನಡ ಹಾಡನು
ಹಾಡಲು ಕಂದ,
ಕೇಳಲು ಕಿವಿಗೆ
ಪರಮಾನಂದ.
ಕನ್ನಡ ಅಕ್ಷರ
ಬರೆಯಲು ಓ ಮಗು,
ಹಾಳೆಯ ತುಂಬಾ
ಹುಣ್ಣಿಮೆಯ ನಗು.
ಕನ್ನಡ ಸಾಹಿತ್ಯ
ಓದಲು ಚಿಣ್ಣರೆ,
ಹಣ್ಣಿನ ರುಚಿಯು
ಮನಕೆ ಅಣ್ಣರೆ.
ಸೊಗಸಿನ ಭಾಷೆಯು
ಜಗದೊಳು ಕನ್ನಡ,
ಮುಗಿಲಾಚೆಯೂ
ಜಗಮಗಿಸಲಿ ಕನ್ನಡ.
- ವೀರೇಶ ಬ ಕುರಿ ಸೋಂಪೂರ
