ಮಾವಿನ ಹಣ್ಣಿನ ಸಾಸಿವೆ – ವಸಂತ ಗಣೇಶ

ಮಾವಿನ ಹಣ್ಣು ತಿನ್ನೋಕೆ ರುಚಿಕರ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅದರಲ್ಲಿ ಸಾಸಿವೆ ಮಾಡಿ ಅನ್ನ, ಚಪಾತಿ ಜೊತೆಗೆ ತಿಂದಾಗ ಹುಳಿ,ಸಿಹಿ ಸಮ್ಮಿಶ್ರ ಅನುಭವ ಕೊಡುತ್ತದೆ. ಸಾಸಿಮೆ ಮಾಡುವ ಕುರಿತು ಲೇಖಕಿ ವಸಂತ ಗಣೇಶ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ನಾವು ಮಾವಿನ ಹಣ್ಣಿನ ಸೀಸನ್ ಬಂತು ಅಂದ್ರೆ ನಾವು ಚಪಾತಿ, ಪೂರಿ, ಜೋಳದ ಹಿಟ್ಟಿನ ಬಕ್ರಿ, ಅನ್ನದೊಟ್ಟಿಗೆ ಕೂಡ ಮಾವಿನ ಹಣ್ಣು ಎಲ್ಲದರಲ್ಲೂ ಮಾವಿನ ಹಣ್ಣನ್ನೇ ಉಪಯೋಗಸೋದು. ಇವತ್ತೊಂದು ಹವ್ಯಕರ ಅಡಿಗೆ ವಿಶೇಷ ಮಾವಿನಹಣ್ಣಿನ ಸಾಸಿವೆಯೊಂದಿಗೆ ಬಂದಿದ್ದೇನೆ.

ಬೇಕಾಗುವ ಸಾಮಗ್ರಿಗಳು :

ಮಾವಿನ ಹಣ್ಣು – ನಾಲ್ಕು
ಒಣಮೆಣಸು – ನಾಲ್ಕು
ಸಾಸಿವೆ -ಒಂದು ಸ್ಪೂನ್
ಇಂಗು – ಸ್ವಲ್ಪ
ತೆಂಗಿನಕಾಯಿ ತುರಿ – ಅರ್ಧ ಬಟ್ಟಲು

ಎಲ್ಲವನ್ನು ಸೇರಿಸಿ ಹಸಿದೆ ನುಣ್ಣಗೆ ರುಬ್ಬಿಕೊಳ್ಳಬೇಕು.

ಮಾವಿನ ಹಣ್ಣನ್ನು ಕಿವುಚಿ ಅದಕ್ಕೆ ರುಬ್ಬಿದ ಮಸಾಲೆ ಬೆಲ್ಲ ಉಪ್ಪು ಹದ ನೋಡಿ ನೀರು ಸೇರಿಸಿ ಕಲಿಸಿ,ಮೇಲೆ ತೆಂಗಿನ ಎಣ್ಣೆ ಹಾಕಿ ಒಗ್ಗರಣೆ ಹಾಕ್ಬಿಟ್ರೆ, ಹುಳಿ ಮಧುರವಾದ,ರುಚಿಕರವಾದ ಮಾವಿನ ಹಣ್ಣಿನ ಸಾಸ್ವೆ ಅನ್ನದೊಟ್ಟಿಕೆ ತಿನ್ನೋಕೆ ರೆಡಿ.


  • ವಸಂತ ಗಣೇಶ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading