ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣ ಸಮೀಪದ ಮರಕಡ ಗುತ್ತು ಮಿಜಾರು ಗ್ರಾಮಕ್ಕೊಳ ಪಟ್ಟಿದೆ. ಇಲ್ಲೊಂದು ದಿ. ಶ್ರೀ ಸುಬ್ಬಯ್ಯ ಶೆಟ್ಟಿ ಕುಟುಂಬಕ್ಕೆ ಸಂಬಂಧಿಸಿದಂತೆ ಸು.400 ವರ್ಷ ಗಳ ಹಿಂದಿನ ಅರಮನೆಯೊಂದನ್ನು ವೀಕ್ಷಿಸ ಬಹುದಾಗಿದೆ. ಬಾಲು ದೇರಾಜೆ ಅವರು ಚಿತ್ರಬರಹದ ಮೂಲಕ ಓದುಗರಿಗೆ ಪರಿಚಯಿಸಿದ್ದಾರೆ, ತಪ್ಪದೆ ಮುಂದೆ ಓದಿ….
ಇದು 1ಎಕ್ರೆ ಸ್ಥಳವನ್ನಾವರಿಸಿ ಕೊಂಡಿದೆ. ಎದುರುಗಡೆ ನಂದಾ ದೀಪವಿದ್ದು, ಹಳೆಯ ಕಾಲದ ದಪ್ಪ ಗಾತ್ರದ ಕಿಟಕಿ-ಬಾಗಿಲುಗಳು, ಮೇಜು-ಬೆಂಚುಗಳು, ಗೋಡೆಗಳೆಲ್ಲಾ ಪೂರ್ವಿಕರ ಭಾವಚಿತ್ರಗಳು, ಒಳಗಡೆ ಪಾತ್ರೆಗಳ ಜೊತೆಗೆ ದೈವ ಭಂಡಾರವಿದ್ದು, ಹೊರಗಿನ ಆವರಣದಲ್ಲೊಂದು ತಾವರೆ ಕೊಳ – ದನದ ಕೊಟ್ಟಿಗೆ. ತೋಟದಲ್ಲಿ ಹೂ-ಹಣ್ಣಿನ ಗಿಡಗಳಲ್ಲದೆ ಬದಿಯ ಜಾಗದಲ್ಲಿ ಸಮಾಧಿ ಗಳನ್ನು ಕಾಣಬಹುದಾಗಿದೆ.
ಇಲ್ಲಿನ ವಾರಸುದಾರಲ್ಲೊಬ್ಬರಾದ 80 ನೇ ವಯಸ್ಸಿನ ಶ್ರೀಮತಿ ಅರುಂಧತಿ ಯವರು ಬೆಂಗಳೂರಲ್ಲಿ ವಾಸವಾಗಿದ್ದು, 40 ವರ್ಷ ಗಳ ಹಿಂದೆ ಶ್ರೀ ರಾಮಚಂದ್ರ ಭಟ್ ರು ಈ ಜಾಗದ ಮೇಲ್ವಿಚಾರಕರಾಗಿದ್ರಂತೆ. ಇದೀಗ ಕಳೆದ 6 ವರ್ಷಗಳಿಂದ ಶ್ರೀ ಲಕ್ಷ್ಮೀನಾರಾಯಣ ಭಟ್ ಪಕ್ಕದ ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡು, ಸಂಸಾರ ಜೊತೆಗೆ ವಾಸಿಸುತ್ತಿದ್ದು, ಮೇಲ್ವಿಚಾರಕರಾಗಿ ಜೊತೆಗೆ ಹೈನುಗಾರಿಕೆ-ಜೇನುಹುಳಗಳ ಸಾಕಾಣೆಯಲ್ಲಿ ತೊಡಗಿದ್ದಾರೆ.
ಒಂದು ಬಾರಿಯಾದರೂ ನೋಡಲೇಬಾಕಾದ ಮರಕಡಗುತ್ತು ಅರಮನೆ ಇತಿಹಾಸವುಳ್ಳದ್ದಾಗಿದ್ದು, ಇಲ್ಲಿಗೆ ಅನಿರೀಕ್ಷಿತ ಭೇಟಿ ಯಲ್ಲಿ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ.
- ಬಾಲು ದೇರಾಜೆ
