ಮಿಮಿಕ್ರಿ, ಭಾಷಣ, ಯಕ್ಷಗಾನ, ನಾಟಕ, ಹಾಡು, ನೃತ್ಯದಲ್ಲಿ ಪರಿಣಿತಿ ಹೊಂದಿದ ” ಬಹುಮುಖ ಪ್ರತಿಭೆ” ಯೇ ಸಾಯಿಶ್ರುತಿ. ಬಾಲು ದೇರಾಜೆ ಅವರು ಸಾಯಿಶ್ರುತಿ ಅವರ ಸಾಧನೆಯ ಕುರಿತು ಲೇಖನವೊಂದನ್ನು ಬರೆದಿದ್ದಾರೆ. ತಪ್ಪದೆ ಮುಂದೆ ಓದಿ…
ನಮ್ಮ ನಾಡು ಕಲೆಗಳ ಬೀಡು. ಈ ಬೀಡು ನಲ್ಲಿ ಬಿಡಾರ ಹೂಡಿದವುಗಳು ಹಲವಾರು.ಇವುಗಳಲ್ಲಿ ಹುಟ್ಟಿನಿಂದಲೂ ಇನ್ನು ಕೆಲವು ಮೈಗೂಡಿಸಿಕೊಂಡು ಕಲಾತ್ಮಕ ಜೀವನ ದಲ್ಲಿ ಮುನ್ನಡೆ ಸಾಧಿಸಿದ್ದಾರೆ. ದ.ಕ.ಸುಳ್ಯ ತಾಲೂಕು ಕಲಾವಿದರು- ಕಲಾಪ್ರೇಮಿ ಗಳನ್ನೊಳಗೊಂಡಿದೆ.ಇದಕ್ಕೆ ಐವರನಾಡಿನ ಐವರ್ನಾಡು ಗ್ರಾಮ ಹೊರತೇನಲ್ಲ. ಇಲ್ಲಿ ಯಕ್ಷಗಾನ,ನಾಟಕ, ಸಂಗೀತ, ಚಿತ್ರ ಕಲೆಯ ಜೊತೆಗೆ ನೈಜತೆಗೆ ಪ್ರಾಮುಖ್ಯತೆ ಕೊಡುವ ಛಾಯಾಚಿತ್ರಣಕಲೆ ಯೂ ಸೇರಿಕೊಂಡಿದೆ. ಇವುಗಳೆಲ್ಲಾ ರಕ್ತಗತ ವಾಗಿ ಬಂದಿದ್ದು, ರಕ್ತದೊತ್ತಡ ಕಾರಣವಾಗಿದೆ.
ನಮ್ಮ ನೆರೆಯ ಅಮರ ಮೂಡ್ನೂರು ಗ್ರಾಮದಲ್ಲಿ ಇತ್ತೀಚೆಗಿನ ವರ್ಷಗಳಿಂದ ವಿಭಿನ್ನವಾದ “ಮಾತಲ್ಲೇ ಮಾತನಾಡಿಸುವ “ಕಲೆಯು ” ಚಿಂಟೂ” ಎಂಬ ನಾಮಧೇಯ ಬೊಂಬೆಯ ಮೂಲಕ ಬೆಳಕಿಗೆ ಬಂದಿದೆ. ಈ ಗ್ರಾಮದ ಪಿಲಿಕಜೆ ಮನೆಯ ಶ್ರೀ ಶಿವಸಾಯಿ ಭಟ್ ಪಿಲಿಕಜೆ ಹಾಗೂ ದಿ| ಶ್ರೀಮತಿ ಸುಜ್ಯೋತಿ ದಂಪತಿಗಳ ಏಕೈಕ ಮಗಳು ಸಾಯಿಶ್ರುತಿ. ನಮ್ಮ ಮಗಳ (ಅಂಜಲಿ ದೇರಾಜೆ) ಲಂಗ ಜೋಸ್ತಿಯಾಗಿದ್ದು, ಜೊತೆಯಲ್ಲೇ ಪ್ರೌಢ -ಪದವಿಪೂರ್ವ ಶಿಕ್ಷಣವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ಳಾರೆಯಲ್ಲಿ ಪಡೆದು, ಬಳಿಕ 1 ವರ್ಷ ಕುಕ್ಕೇ ಶ್ರೀ ಸುಬ್ರಹ್ಮಣ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ,ಸುಳ್ಯದ ಲೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯನ್ನೂ ಗಳಿಸಿ, ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ M. B. A.ಮಾಡಿರುತ್ತಾರೆ.
ಮಿಮಿಕ್ರಿ , ಭಾಷಣ, ಯಕ್ಷಗಾನ, ನಾಟಕ, ಹಾಡು, ನೃತ್ಯ ದಲ್ಲಿ ಪರಿಣಿತಿ ಹೊಂದಿದ ” ಬಹುಮುಖ ಪ್ರತಿಭೆ ” ಯ ಸಾಯಿಶ್ರುತಿ ಪಿಲಿಕಜೆ ಕಳೆದ 5 ವರ್ಷಗಳಿಂದ ಬೊಂಬೆ – ಚಿಂಟೂವನ್ನು ಜೊತೆಗಾರನ್ನಾಗಿ ಮಾಡಿಕೊಂಡು, ಅದಕ್ಕೆ ಜೀವ ತುಂಬುವ ಕೆಲಸದಲ್ಲಿ ತೊಡಗಿ, ಕಳೆದ 1 ವರ್ಷದಿಂದ ಬೆಂಗಳೂರಿನ ಜೋಯ್ ಅಲುಕಾಸ್ ಸಂಸ್ಥೆ ಯಲ್ಲಿ ನೌಕರಿ ಪಡೆದಿರುತ್ತಾರೆ.
” ಮಾತನಾಡುವ ಬೊಂಬೆ – ಚಿಂಟೂ ” ಎಂಬ ವಿನೂತನ ಕಾರ್ಯಕ್ರಮ ವನ್ನು ಪ್ರಾರಂಭಿಸಿದ ಸಾಯಿಶ್ರುತಿ ಮಾತೇ ಮಾಣಿಕ್ಯವಾಗಿ ಮನರಂಜಿಸುವಲ್ಲಿ ಯಶಸ್ವಿಗೊಂಡು, ಸುಳ್ಯ, ಬೆಳ್ಳಾರೆ, ಪುತ್ತೂರು, ಸುಬ್ರಹ್ಮಣ್ಯ, ಕೇರಳ, ಬೆಂಗಳೂರು, ಗುಲ್ಬರ್ಗ, ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡುವುದರ ಜೊತೆಗೆ, On Line ಮೂಲಕ ಅಮೆರಿಕದ ಕನ್ನಡಿಗರಿಗೆ ಕಾರ್ಯಕ್ರಮ ಕೊಟ್ಟಿರುತ್ತಾರೆ. ಇತ್ತೀಚೆಗೆ ತಾನು ಕಲಿತ ಶಾಲೆ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪದರ್ಶನ ನೀಡಿ ಸಾವಿರ – ಸಾವಿರ ಚಪ್ಪಾಳೆ ಗಿಟ್ಟಿಸಿ ಗೊಂಡಿದ್ದಾರೆ. ಸುಳ್ಯ, ಪುತ್ತೂರು, ಉಜಿರೆ, ಗುಲ್ಬರ್ಗ, ಮೊದಲಾದ ಊರಿನ ಸಂಘ – ಸಂಸ್ಥೆಗಳಿಂದ ಗೌರವ ಸನ್ಮಾನ ಗಳ ಜೊತೆಗೆ ಶೈನಿಂಗ್ ಸ್ಟಾರ್ ನ್ಯಾಷನಲ್ ಪ್ರೈಡ್ ಎವಾರ್ಡ್, ಜೋನ್ 15 ಗಾಟ್ ಟ್ಯಾಲೆಂಟ್ ಯೂತ್ ಐಕಾನ್ ಆಫ್ ದ ಇಯರ್ 2023, ಕ್ವೀನ್ ಆಫ್ ಜೋನ್ 15 ಅವಾರ್ಡ್ ಆಫ್ ಎಕ್ಸಲೆನ್ಸ್, ಯೂನಿಕಾನ್ ವರ್ಡ್ ರೆಕಾರ್ಡ್ ಪ್ರಶಸ್ತಿ ಗಳನ್ನು ಗಳಿಸಿರುತ್ತಾರೆ.
ನಾಡಿನಾದ್ಯಂತ ಉತ್ತಮ ಮಾತುಗಾರ್ತಿಯಾದ ಕು. ಸಾಯಿಶ್ರುತಿ ಪಿಲಿಕಜೆ ಮಾತಿನ ಮೂಲಕ ಚಿಂಟೂ ಜೊತೆ ಹಲವಾರು ಕಾರ್ಯಕ್ರಮ ಗಳಲ್ಲಿ ಕಲಾರಾಧನೆ ಮೂಲಕ ಜನ – ಮನ ರಂಜಿಸಿ ಪ್ರಖ್ಯಾತಿ ಗಳಿಸಿದ ಕಲಾವಿದೆ ನಮ್ಮೂರಿನ – ನಮ್ಮವಳೇ ಆಗಿರುವುದು ಹೆಮ್ಮೆ.
- ಬಾಲು ದೇರಾಜೆ
