‘ಅಪ್ಪ’ ಕವನ – ರೂಪಶ್ರೀ ಎಂ

ಅಪ್ಪ ಬಹಳ ಸ್ವಾಭಿಮಾನಿ, ಮರೆಯಲ್ಲಿ ಸುರಿಸುವ ಕಂಬನಿ…ರೂಪಶ್ರೀ ಎಂ ಅವರ ಲೇಖನಿಯಲ್ಲಿ ಅರಳಿದ ಅಪ್ಪನ ಪ್ರೀತಿ, ತಪ್ಪದೆ ಮುಂದೆ ಓದಿ…

ತೊಟ್ಟಿರುವ ಅಂಗಿಯ ಕಾಲರ್
ಸವೆದು ಮಬ್ಬಾಗಿದೆ ಕಲರ್
ಆದರೂ ಅಪ್ಪನಿಗೆ ಬೇಜಬ್ದಾರಿ !
ಕೊಳ್ಳುವುದಿರಲಿ
ಅದರೆಡೆ ಗಮನವೂ ಇಲ್ಲ

ಪ್ಯಾಂಟಿನ ತುದಿಯಲಿ ಮಡಿಕೆ
ಹರಿದು ಬಿಚ್ಚಿಹೋಗಿದೆ
ಅದರ ಪರಿವೆಯೂ ಇಲ್ಲ
ಕಿಸೆಯನ್ನು ಮಾತ್ರ
ಭದ್ರ ಮಾಡಿಕೊಳ್ಳುವ ನೋಡಿ !

ತನ್ನವರಿಗಾಗಿ ಗಳಿಸಿದ ಕಾಸು
ಕಳೆದುಹೋಗಬಾರದಲ್ಲ …
ಕಳೆದು ಹೋದರೂ ಪರವಾಗಿಲ್ಲ
ಅವನ ಆಯುಷ್ಯ ಭವಿಷ್ಯ
ಇದೆಲ್ಲ ಅವನಿಗೆ ಅಮುಖ್ಯ !

ಮಡದಿಯ ಮೊಗದಲಿ ಸಂತೃಪ್ತಿ
ಮಕ್ಕಳ ತೊದಲು ಮಾತಲಿ ಪ್ರೀತಿ
ಮಡದಿ ಮಕ್ಕಳೇ ಅವನ ಮನೆಯ ಜ್ಯೋತಿ
ಹೀಗೇ ನಗುನಗುತಿರಲಿ ನನ್ನ ಪರಿವಾರ
ಇದಷ್ಟೇ ಆ ಬಡಜೀವದ ಆಶಯ

ಕುಟುಂಬ ಗಮನ ಕೊಡಬಾರದೇ
ಗುಂಡಿ ಕಳಚಿರೋ
ಅವನ ಅಂಗಿಯ ಕರೆಗೆ ….
ಬಂಡಿ ಎಳೆದು ಸವಿದ
ಅವನ ಮಂಡಿಯ ಕಡೆಗೆ…..

ಹೇಳದೇ ಅರಿಯಿರಿ ಅಪ್ಪನ ಅಗತ್ಯ
ಅಪ್ಪ ಬಹಳ ಸ್ವಾಭಿಮಾನಿ
ಮರೆಯಲ್ಲಿ ಸುರಿಸುವ ಕಂಬನಿ
ಅಪ್ಪನದು ಗಡಸು ಜನ್ಮ ಮಾತ್ರ
ಮನಸ್ಸಲ್ಲ….


  • ರೂಪಶ್ರೀ ಎಂ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading