ಕಣ್ಣೊಳಗಿನ ಮೊದಲ ದೃಷ್ಟಿಕೋನ

ಬೇರೆಯವರ ಬಗ್ಗೆ ಹಾಗೆ ಹೀಗೆ ಅನ್ನುವ ಬದಲು ನಮ್ಮ ಅಂತರಂಗ ಶುದ್ಧವಾಗಿರಲಿ…ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…

ತಾಜ್ ಮಹಲ್ ಮುಂದೆ ನಿಂತು, ತಾಜ್ ಮಹಲ್ ಎಲ್ಲಿ ಎಂದು ಯಾರಾದರೂ ಕೇಳಿದಾಗ, ತಾಜ್ ಕಡೆ ತೋರುಬೆರಳು ಮಾಡಿ ತೋರಿಸುತ್ತೇವೆ ಅಲ್ಲಿದೆಯೆಂದು.

ಭೌತಶಾಸ್ತ್ರದ ಅನ್ವಯ ಬೆಳಕು ತಾಜ್ ಮೇಲೆ ಬಿದ್ದು ಪ್ರತಿಫಲಿಸಿ ಮರಳಿ ಬಂದು, ನಮ್ಮ ಕಣ್ಣಲ್ಲಿ ಪ್ರವೇಶಿಸಿ ಕಣ್ಣಿನ ಅಕ್ಷಿಪಟಲದ ಮೇಲೆ ತಲೆಕೆಳಗಾದ ಪ್ರತಿರೂಪವನ್ನು ಮೂಡಿಸಿದಾಗ ತಾಜ್ ನಮಗೆ ಕಾಣುವಂತೆ ಭಾಸವಾಗುತ್ತದೆ. ಅಂದರೆ ತಾಜ್ಮಹಲ್ ನ್ನು ಮೊದಲು ನಾವು, ನಮ್ಮ ಕಣ್ಣೊಳಗೆ ನೋಡುತ್ತೇವೆ ಆದರೆ ತೋರು ಬೆರಳಿಂದ ತೋರಿಸುವುದು ಮಾತ್ರ ಹೊರಗಡೆ.

 

ಜೀವನದಲ್ಲಿ ಎಲ್ಲವನ್ನೂ ಮೊದಲು ನಾವು ನಮ್ಮೊಳಗೆ ಕಂಡುಕೊಳ್ಳುತ್ತೇವೆ. ಕೈ ಮಾಡಿ ತೋರಿಸುವುದು ಮಾತ್ರ ಹೊರಗೆ. ಜೀವನವನ್ನು ನೋಡುವ ಕ್ರಮ ನಮ್ಮೊಳಗಿನಿಂದಲೇ ಪ್ರಾರಂಭ ಎನ್ನುವ ಅರಿವಾದಾಗ ಹೊರ ಜಗತ್ತನ್ನು ಹೇಗೆ ನೋಡಬೇಕೆಂಬ ಬದಲಾವಣೆ ಸಾಧ್ಯವಾಗುವುದು.

ಕೈತೋರಿಸಿ ಅವನು ಸರಿಯಿಲ್ಲ, ಅವಳು ಸರಿಯಿಲ್ಲ, ಈ ಪ್ರಪಂಚ ಸರಿಯಿಲ್ಲ ಎಂದು ದೂರುತ್ತಾ ಸಾಗುತ್ತೆವೆ. ನಿಜವಾಗಿಯೂ ನಾವು ಆ ದೃಷ್ಟಿಕೋನದಲ್ಲಿ ನಮ್ಮೊಳಗೆ ಮೊದಲು ನೋಡಿಕೊಂಡು, ಆಮೇಲೆ ಪ್ರಪಂಚದತ್ತ ಕೈ ತೋರುತ್ತ ಸಾಗುತ್ತೆವೆ.

ನಮ್ಮೊಳಗೆ ನೋಡುವ ರೀತಿ ಬದಲಾಗಲಿ, ನೋಡುವ ದೃಷ್ಟಿ ಸರಿಯಾಗಲಿ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading