‘ಹಸಿರೊಂದು ಉಸಿರಿಗೆ’ ಕವನ – ನಾಗರಾಜ ಬಿ.ನಾಯ್ಕ

ನಗುವೊಂದು ಮರವಾಗಿ ಎತ್ತರಕ್ಕೆ ಬೆಳೆಯಲಿ…ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಪರಿಸರ ಸೌರಕ್ಷಣೆ ಕುರಿತಾದ ಕವನವನ್ನು ತಪ್ಪದೆ ಮುಂದೆ ಓದಿ…

ಹಸಿರೊಂದು ಉಸಿರಿಗೆ
ನೆಟ್ಟು ಬೆಳೆಸಬೇಕಿದೆ
ಹೊಸದೊಂದು ನಾಳೆಗೆ
ಗಿಡ ಹಚ್ಚಬೇಕಿದೆ.

ಉಸಿರುಸಿರು ಇಳೆಯಲಿ
ಹಸಿರ ತರು ತುಂಬಲಿ
ಹಬ್ಬಿ ಬೆಳೆದು ಸೊಬಗಲಿ
ತಂಪು ಲತೆ ಹರಡಲಿ

ಗಿಡ ಮರದ ನೆರಳಲಿ
ಜೀವಜಾಲ ಬದುಕಲಿ
ಹಸಿರಸಿರ ಉಳಿವಲಿ
ಬೇರು ಬಳ್ಳಿ ಚಿಗುರಲಿ

ಬೆಳೆದು ನಿಂತ ಹೆಮ್ಮರದಿ
ಹಕ್ಕಿ ಗಾನ ಕೇಳಲಿ
ಬುವಿಯೊಂದು ಮಡಿಲಾಗಿ
ಎಲ್ಲರನ್ನೂ ಸಲಹಲಿ

ಮತ್ತೆ ಮತ್ತೆ ಹಸಿರು ರಾಶಿ
ಎಲ್ಲೆಡೆಯೂ ತುಂಬಲಿ
ನಗುವೊಂದು ಮರವಾಗಿ
ಎತ್ತರಕ್ಕೆ ಬೆಳೆಯಲಿ.


  • ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading