ಪ್ರಕೃತಿಯಿಂದಲೆ ಸರ್ವವೂ ಎಂಬ ಸತ್ಯದ ಮಾತನು ಸಾರೋಣ!!…ಪರಿಸರ ದಿನಾಚರಣೆಯ ಅಂಗವಾಗಿ ಎಚ್. ಪಿ. ಕೃಷ್ಣಮೂರ್ತಿ ಅವರ ಒಂದು ಕವಿತೆಯನ್ನು ಪ್ರಕಟಿಸುವುದರ ಮೂಲಕ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು…
ಬನ್ನಿ ಸಾವಿರ ಸಾವಿರ ಹೆಜ್ಜೆಯನಿಟ್ಟು
ಪರಿಸರ ಕ್ರಾಂತಿಯ ನಡೆಸೋಣ
ಊರು ಕೇರಿಗಳ ತಿರುಗುತ ಸಾಗಿ
ಪರಿಸರ ಪ್ರಜ್ಞೆಯ ಬೆಳೆಸೋಣ!!
ಬೆತ್ತಲುಗೊಂಡಿಹ ರಸ್ತೆ ರಸ್ತೆ ಬದಿ
ಗಿಡ ಮರವನ್ನು ಬೆಳೆಸೋಣ
ಪರಿಸರದೊಡಲಿಗೆ ಕೊಡಲಿಯನಿಕ್ಕುವವರಿಗೆ
ಹಸಿರಿನ ಮಹತ್ವವ ತಿಳಿಸೋಣ!!
ವಸುಂಧರೆ ನಗುತಿರೆ ಈ ಜಗದೆಲ್ಲೆಡೆ
ಪ್ರಾಣ ವಾಯುವಿನ ಸಂಚಾರ
ವಿನಾಶಗೊಂಡರೆ ಅವಳೊಡಲದುವೆ
ಜೀವರಾಶಿಗೆ ಸಂಚಕಾರ!!
ಪರಿಸರ ಪ್ರಜ್ಞೆಯ ಸುಜ್ಞಾನರೆ ಬನ್ನಿರಿ
ಸಾಗರೋಪಾದಿಯಲಿ ತೆರೆಳೋಣ
ಪ್ರಕೃತಿಯಿಂದಲೆ ಸರ್ವವೂ ಎಂಬ
ಸತ್ಯದ ಮಾತನು ಸಾರೋಣ!!
- ಎಚ್. ಪಿ. ಕೃಷ್ಣಮೂರ್ತಿ – ಬೆಂಗಳೂರು
