ಯುವಕವಿ ಮಲ್ಲಿಕಾರ್ಜುನ್ ಮಲ್ಲು ಎಸ್ ಆಲಮೇಲ ಅವರು ಇತ್ತೀಚೆಗಷ್ಟೇ ಪರಿಚಯವಾಗಿದ್ದು, ಮಲ್ಲಿಕಾರ್ಜುನ ಅವರ ಮೋಹನ ರಾಗ ಎಂಬ ಕವನ ಸಂಕಲನದಲ್ಲಿ ಪ್ರೀತಿಯ ಗುಂಗಿದೆ. ಸುಮಾ ಉಮೇಶ ಗೌಡ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮೋಹನ ರಾಗ
ಲೇಖಕರು : ಮಲ್ಲಿಕಾರ್ಜುನ್ ಮಲ್ಲು ಎಸ್ ಆಲಮೇಲ
ಪ್ರಕಾರ : ಕವನ ಸಂಕಲನ
ಯುವಕವಿ ಮಲ್ಲಿಕಾರ್ಜುನ್ ಮಲ್ಲು ಎಸ್ ಆಲಮೇಲ ಅವರು ಇತ್ತಿಚೆಗಷ್ಟೆ ಪರಿಚಯವಾಗಿದ್ದು. ಅದು ಕೂಡ ಅವರ ಕವನ ಸಂಕಲನವೊಂದು ನನ್ನ ಕೈ ಸೇರುವ ಮೂಲಕ. ಈ ಸಾಹಿತ್ಯದ ನಂಟೆ ಹಾಗೆ. ಗುರುತು ಪರಿಚಯ ಇಲ್ಲದವರನ್ನು ಸ್ನೇಹ ಬೆಳೆಸುತ್ತೆ. ಸಾಹಿತ್ಯದ ಮೂಲಕವೇ ಎಷ್ಟೋಂದು ಹೃದಯಗಳ ಸ್ನೇಹ, ಪ್ರೀತಿ, ಆತ್ಮಿಯತೆ, ಬಾಂಧವ್ಯ ದೊರಕಿದೆ.
ಮಲ್ಲಿಕಾರ್ಜುನ ಅವರ ಮೋಹನ ರಾಗ ಎಂಬ ಕವನ ಸಂಕಲನದಲ್ಲು ಪ್ರೀತಿಯ ಗುಂಗಿದೆ. ಈ ಜಗತ್ತು ನಡೆಯುತ್ತಿರುವುದೆ ಪ್ರೀತಿಯಿಂದ. ಅದು ತಂದೆ ತಾಯಿ, ಅಣ್ಣಾ ತಂಗಿ ಯಾವ ತರ ಪ್ರೀತಿ ಆಗಿದ್ದರು. ಗಂಡು ಹೆಣ್ಣಿನ, ಗಂಡ ಹೆಂಡತಿ ಪ್ರೀತಿಯ ಸೆಳೆತವೇ ಬೇರೆ. ಮಲ್ಲಿಕಾರ್ಜುನ ಅವರಿಗೆ ಇದು ಮೊದಲ ಕವನ ಸಂಕಲನವಾದರು ಈ ಮೊದಲು ಅನೇಕ ರೀತಿಯಲ್ಲಿ ಸಾಹಿತ್ಯ ಸೇವೆ ಮಾಡಿರುವರು ಅವರಿಗೆ ಶುಭವಾಗಲಿ.

ಅರವತ್ತ ಮೂರು ಕವನಗಳಲ್ಲು ಪ್ರೀತಿ ಪ್ರೇಮ ಮೋಹದ ಬಣ್ಣನೆ ಹೆಚ್ಚಾಗಿ ತುಂಬಿದೆ. ಹಾಗೆ ಬಾಲ್ಯದ ನೆನಪಿನ ಸ್ನೇಹವಿದೆ. ಮೋಹ ಅಂದಕೂಡಲೇ ರಸಿಕತೆಯ ಪದಗಳೆ ತುಂಬಿರಬೇಕು ಅಂತೆನಿಲ್ಲ ಎಂಬುದನ್ನು ಬರವಣಿಗೆ ಮೂಲಕ ತೋರಿಸಿರುವರು.ಮನ್ಮಥನ ಪುತ್ರಿಯಂತಿರುವ ಹೆಣ್ಣು, ಮುದ್ದಾಡಿ ಸ್ವರ್ಗಕ್ಕೆ ಕಿಚ್ಚು ಹಚ್ಚಿ, ಮಧು ಮಂಚದಿ ಶೃಂಗಾರ ಕಾವ್ಯವ ಸೃಷ್ಟಿಸಿದವಳು. ಇವಳೇನಾ ಅವಳು ಕನಸಲ್ಲಿ ಕಂಡವಳು ಎಂದು ಸ್ವಪ್ನ ಸುಂದರಿ ಕವನದಲ್ಲಿ ಸುಂದರವಾಗಿ ವರ್ಣಿಸಿರುವರು.
ಬದುಕು ಅಂದ ಮೇಲೆ ನೋವು ಮನಸ್ತಾಪ ಸಹಜ ಹಾಗಂತ ಹೆಂಡತಿನ ಯಾವತ್ತೂ ದೂರ ಮಾಡಬೇಡ. ನಿನಗೋಸ್ಕರ ಹೆತ್ತು ಹೊತ್ತವರ ಒಡಹುಟ್ಟಿದವರ ಬಿಟ್ಟು ಬಂದು ನಿನ್ನನ್ನೆ ಪರದೈವ ಅಂದುಕೊಡಿದಾಳೆ , ತನ್ನ ಆಸೆ ಕನಸನ್ನು ಬಚ್ಚಿಟ್ಟುಕೊಂಡು ನಿನ್ನ ಮುಂದೆ ನಗುತ್ತಾ. ನಿನ್ನ ಮಕ್ಕಳಿಗಾಗಿ ನೋವುಂಡು ತಾಯಿ ಆದ ಹೆಂಡತಿಯ ಕೈ ಬಿಡಬೇಡ ಎಂದು ಸುಂದರವಾಗಿ ದಾಂಪತ್ಯದ ಬಗ್ಗೆ ಹೇಳಿರುವರು.

ಒಂದು ಕೂಗಿಗೆ ಸಂತಸದಿ ಹತ್ತಿರ ಬರುತಿದ್ದವಳು, ನನ್ನ ಅಪ್ಪುಗೆಯ ಹಂಬಲಿಸುತಿದ್ದವಳು, ನನ್ನುಸಿರಾದವಳು. ನನ್ನ ಕಣಕಣದಲ್ಲು ಬೆರೆತವಳು. ಒಲವಿನ ಅಮೃತ ಬಡಿಸಿದವಳು ಇಂದೆಕೆ ಏನು ಕೇಳಿದರು ಹೇಳದೆ ನನ್ನಿಂದ ಅಂತರ ಕಾಯ್ದುಕೊಂಡಿದಾಳೆ, ಒಲವಿನ ಅಮೃತ ಬರಿದಾಯಿತೆ. ಎಂದು ನೋವಿನ ಭಾವದಲ್ಲಿ ಮೂಡಿದೆ.
ಸಂಸಾರದ ನೋಗ ಹೊತ್ತ ಹೆಣ್ಣಿಗೆ ಅಕ್ಷರ ಜ್ಞಾನವೇ ಬೇಕಿಲ್ಲ ಅವಳಲ್ಲಿ ಬದುಕುವ ಕಿಚ್ಚು ಇರವಾಗ ಹಸುಗಳನ್ನು ಸಾಕಿಯೋ, ಮನೆ ಕೆಲಸ ಮಾಡಿಯಾದರು ಸರಿ ಯಾರ ಹಂಗಿಲ್ಲದೆ ಬದುಕುವಳು ಎಂಬ ಕವಿಯ ಯೋಚನೆ ಸರಿಯಾಗಿದೆ. ಬಾಲ್ಯದ ಆಟ, ಜಗಳಾಟ. ಬೇರೆಯವರ ಮಾತು ಕೇಳದೆ ಆಡಿ ಬಿದ್ದು ಗರ್ವಭಂಗವಾದ ಸವಿನೆನಪನ್ನು ಕವನದಲ್ಲಿ ಕಟ್ಟಿರುವರು..
ಇವು ಕೇವಲ ಮೋಹನ ರಾಗ ಕವನ ಸಂಕಲನದ ಒಂದಷ್ಟು ತುಣುಕುಗಳಷ್ಟೆ ಇಂತ ಚಂದದ ಕವನಗಳ ಸಂಗ್ರಹವೇ ಕವನ ಸಂಕಲನ. ನೀವು ಕೊಂಡು ಓದಿ ಯುವ ಕವಿಯನ್ನು ಹಾರೈಸಿ.
- ಸುಮಾ ಉಮೇಶಗೌಡ – ಲೇಖಕರು, ಹುಬ್ಬಳ್ಳಿ.
