ಹಚ್ಚಸಿರಂತಿದೆ ನಮ್ಮಿಬ್ಬರ ಒಲವ ನೆನಪು… ಕೋರುವೆನು ನಿನ್ನ, ಕನಸಲ್ಲಾದರೂ ತಲುಪು…ಸೋಮೇಶ್ ಕಣದೂರ್ ಅವರು ತಮ್ಮ ವಿವಾಹವಾರ್ಷಿಕೋತ್ಸವದ ಸಂದರ್ಭದಲ್ಲಿ ನಲ್ಮೆಯ ಮಡದಿಗಾಗಿ ಬರೆದ ಒಂದು ಒಲವಿನ ಕವಿತೆ…
ಮುಂಗಾರಿನಲ್ಲಿ ಒಲವಿನ ಸೆಳೆಯು,
ತಂಗಾಳಿಯಲ್ಲೂ ಸೋಕಿದೆ ಕಿಡಿಯು,
ಮಳೆಗಾಲದಲ್ಲಿ ಹನಿಗಳ ಹೊಳೆಯು,
ಹನಿ ಹನಿ ಹೀರಿ ತಂಪಾಗಿದೆ ಇಳೆಯು.
ಮತ್ತೆಲ್ಲವ ನೆನಪಿಸಿ ಹುಚ್ಚಿಡಿದಿದೆ ಮನವು,
ಹೊಸ ನಿರೀಕ್ಷೆಯ ಹೆಚ್ಚಿಸಿದೆ ತನುವು,
ಕೊಟ್ಟಂತಿದೆ ನಿನ್ನಾಗಮನದ ಸುಳಿವು,
ಹನಿಗಳ ಸಿಂಚನದಿ ತಣಿದಿದೆ ಮನವು.
ಹಚ್ಚಸಿರಂತಿದೆ ನಮ್ಮಿಬ್ಬರ ಒಲವ ನೆನಪು,
ಕೋರುವೆನು ನಿನ್ನ ಕನಸಲ್ಲಾದರೂ ತಲುಪು,
ಈ ಜೀವವು ನಿನಗಾಗಿಯೇ ಮುಡಿಪು,
ನೀ ಸಿಗಲು ನನ್ನ ಬಾಳೆಲ್ಲ ಹೊಳಪು..
- ಸೋಮೇಶ್ ಕಣದೂರ್
