‘ಮುಸುಕಿನ‌ ತೆರೆ’ ಕವನ – ರೇಶ್ಮಾ ಗುಳೇದಗುಡ್ಡಾಕರ್



ಪ್ರತಿ ಕ್ಷಣ, ಪ್ರತಿಯೊಂದು ನಿಮಿಷ ನಿಮಗಾಗಿ ಜೀವಿಸಿ ಬಿಡಿ…ಇಲ್ಲವಾದರೆ ಇಂದಿನ ವರ್ತಮಾನ, ನಾಳೆಗೆ ಹಳತಾಗಿ ಹೋಗುವುದು ಜೀವದ ಸಾರವನ್ನು ಈ ಕವಿತೆ ಸಾರುತ್ತದೆ. ಕವಿಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಲೇಖನಿಯನಲ್ಲಿ ಮೂಡಿದ ‘ಮುಸುಕಿನ‌ ತೆರೆ’ ಕವನವನೊಮ್ಮೆ ಓದಿ…

ಅರಿತು ನೋಡಲೇ
ಇಲ್ಲ , ಬೆರೆತು ಕೇಳಲೇ ?
ಪರದೆ ಸರಿಸಲು
ಮುಖವಾಡಗಳೇ ಕಾಣುವಾಗ
ಕಂಡು ಕಾಣದಂತೆ
ಇದ್ದುಬಿಡಲೇ..??

ಉರುಳಿದ ಘಳಿಗೆಯು
ಕಾಡುವುದು ಈ ಬದುಕೆಲ್ಲಾ ..!!
ಕ್ಷಣ ಕ್ಷಣವು ನೆನಪಿಡುವ
ಭರದಲಿ ಜಾರುವದು
ಈಗಿನ ಹೊತ್ತು …..

ಇಂದಿನ ವರ್ತಮಾನ ನಾಳೆಗೆ
ಹಳತಾಗಿ ಹರಿಯುವಾಗ
ವರ್ಷಗಳೇ ಉರುಳಿ
ಕ್ಷಣವಾಗಿ ಸವೆಯುವಾಗ
ಎದೆಯು ಅಗ್ನಿಕುಂಡವಾಗಿ
ಉರಿಯ ಬೇಕೇ ?

ನಾಳೆಯ ಭರದಲ್ಲಿ
ಇಂದಿನ ಹಸಿ ಕ್ಷಣಗಳು
ಬಿಸಿಯಾಗಿ ಎದೆಯ
ದಹಿಸುವಾಗ ನಾ ನಗುತ್ತಲೇ
ನೋಡಬೇಕಾ..?


  • ರೇಶ್ಮಾ ಗುಳೇದಗುಡ್ಡಾಕರ್
5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW