ಮಹಾನದಿಯು ವಿವಿಧ ರಾಜ್ಯಗಳ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಬೆನ್ನೆಲುಬಾಗಿ ಸದಾ ಪೋಷಿಸುತ್ತಿದೆ. ಈ ನದಿಯು ತನ್ನ ಒಟ್ಟು ಉದ್ದದ್ದ ಅರ್ಧ ಭಾಗವನ್ನು ಓಡಿಶಾ ಪ್ರವೇಶಿಸುವ ಮೂಲಕ ಜೊಂಕ್ ಮತ್ತು ಹಸ್ಡಿಯೋ ನದಿಗಳನ್ನು ಸೇರುತ್ತದೆ.ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಮಹಾನದಿಯ ಕುರಿತಾಗಿದ್ದು, ತಪ್ಪದೆ ಮುಂದೆ ಓದಿ…
ಭಾರತದ ಅತ್ಯದ್ಭುತ ನದಿಗಳಲ್ಲಿ ಒಂದಾಗಿ ವಿವಿಧ ರಾಜ್ಯಗಳ ಹಸಿರಿನ ಸಿರಿಯ ಸೊಬಗನು ಹೆಚ್ಚಿಸುತ, ಹರಿಯುತ ಜೀವಸಂಕುಲದ ದಾಹವನ್ನು ನೀಗಿಸಿ ಪ್ರವಾಸಿ ತಾಣಗಳಾಗಿ ಪರಿವರ್ತಿಸುತ ಪ್ರವಾಸಿಗರನ್ನು ಪರಿಸರ ಪ್ರೇಮಿಗಳ ಮನದಲ್ಲಿ ಹೊಸತನವ ಬಿತ್ತುವ ಕಾನನಗಳ ನಡುವೆ ಪ್ರಶಾಂತದಿ ಹರಿದು ಭೂತಾಯಿಯ ಒಡಲನು ಸಮೃದ್ಧಿಗೊಳಿಸುತ ಹಾಲಿನಂತೆ ಶುಭ್ರವಾಗಿ ಹರಿದು ಅರಣ್ಯ ಸಂಪತ್ತು ರಕ್ಷಿಸುತ ಭಾರತಮಾತೆಯ ಮಡಿಲಲಿ ಒರಗಿ ತಂಗಾಳಿಗೆ ಮೈಸೋಕಿ ತಣ್ಣನೆಯ ಅನುಭವ ನೀಡುತ ಮೈದುಂಬಿ ಹರಿಯುವ ನದಿಯೇ ಮಹಾನದಿ.
ಈ ನದಿಯು ಬಹುಪಯೋಗಿ ಉದ್ದೇಶಗಳನ್ನು ಹೊಂದಿದ್ದು. ವಿವಿಧ ರಾಜ್ಯಗಳ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಬೆನ್ನೆಲುಬಾಗಿ ಸದಾ ಪೋಷಿಸುತ್ತಿದೆ. ಈ ನದಿಗೆ ಯುಗಗಳಿಗೆ ತಕ್ಕಂತೆ ವಿವಿಧ ಹೆಸರುಗಳಿಂದ ಕರೆಯಲಾಗಿದೆ. ಈ ನದಿಯ ಹೆಸರು ಸಂಸ್ಕೃತ ಭಾಷೆಯ ಸಂಯುಕ್ತವಾಗಿದೆ. ಪ್ರಾಚೀನ ಯುಗದಲ್ಲಿ ಕನಕನಂದಿನಿ ಎಂದು ದ್ವಾಪರಯುಗದಲ್ಲಿ ಚಿತ್ರೋತಲ್ಪ ಎಂದು ತೇತ್ರಾಯುಗದಲ್ಲಿ ನೀಲೋತಲ್ಪ ಎಂದು ಮಹಾಭಾರತ ಯುಗದಲ್ಲಿ ಮಹಾನಾಡ್ ಎಂದು ಪ್ರಸ್ತುತ ಕಲಿಯುಗದಲ್ಲಿ ಮಹಾನದಿ ಅಥವಾ ಮಹಾಶ್ವೇತಾ ಎಂಬ ಹೆಸರುಗಳಿಂದ ಕರೆಯಲಾಗಿದ್ದು. ಯುಗಗಳಿಂದ ಯುಗಗಳಿಗೆ ವಿಭಿನ್ನ ಹೆಸರುಗಳಿಂದ ಹೆಸರಿಸಲಾಗಿದೆ.

ಮಹಾನದಿ ಹೆಸರು ಸಂಸ್ಕೃತ ಪದಗಳಾದ ಮಹಾ ಮತ್ತು ನಾಡಿ ಪದಗಳಿಂದ ಬಂದಿದೆ ಸಂಸ್ಕೃತದಲ್ಲಿ ಮಹಾ ಎಂದರೆ ಶ್ರೇಷ್ಠ ನಾಡಿ ಎಂದರೆ ನದಿ ಎಂದರ್ಥ.
ಭಾರತದ ನದಿಗಳಲ್ಲಿಯೇ ಇದು ಶ್ರೇಷ್ಠ ನದಿಯಾಗಿದ್ದು ತನ್ನದೆಯಾದ ಐತಿಹಾಸಿಕ ಮಹತ್ವವನ್ನು ಒಳಗೊಂಡಿದೆ. ಇದು ಇತರ ನದಿಗಳಂತೆ ಅನೇಕ ರೀತಿಯ ಪರ್ವತ ತೊರೆಗಳ ಸಂಯೋಜನೆಯಾಗಿದೆ.ಹಾಗಾಗಿ ಈ ನದಿಯ ಮೂಲವನ್ನು ಕಂಡು ಹಿಡಿಯುವುದು ಅಸಾಧ್ಯವಾಗಿದೆ.ಹಾಗಾಗಿ ಇದರ ನಿಖರ ಮೂಲವನ್ನು ಕಂಡು ಹಿಡಿಯುವುದು ಅಸಾಧ್ಯ. ಇದು ಆರಂಭದಲ್ಲಿ 100 ಕಿಮೀವರೆಗೆ ಮಹಾನದಿಯು ಉತ್ತರ ದಿಕ್ಕಿನಲ್ಲಿ ಹರಿಯುತ್ತಿದ್ದು ರಾಯಪುರ್ ಜಿಲ್ಲೆಯನ್ನು ಸಂಧಿಸದೆ ಪೂರ್ವ ಭಾಗಗಳನ್ನು ತಲುಪುವುದು. ಈ ಹಂತದಲ್ಲಿ ಕಿರಿದಾಗುತ್ತ ಹೋಗುತ್ತದೆ. ಶಿವನಾಥ ಎಂಬ ಸ್ಥಳವನ್ನು ತಲುಪಿದ ನಂತರ ನದಿಯು ತನ್ನ ಪ್ರಯಾಣದ ಉಳಿದ ಭಾಗದ ಮೂಲಕ ಪೂರ್ವ ದಿಕ್ಕಿನಲ್ಲಿ ಹರಿಯುತ್ತದೆ.
ಈ ನದಿಯು ತನ್ನ ಒಟ್ಟು ಉದ್ದದ್ದ ಅರ್ಧ ಭಾಗವನ್ನು ಓಡಿಶಾ ಪ್ರವೇಶಿಸುವ ಮೂಲಕ ಜೊಂಕ್ ಮತ್ತು ಹಸ್ಡಿಯೋ ನದಿಗಳನ್ನು ಸೇರುತ್ತದೆ.ಸಂಬಲ್ಪುರ್ ನಗರದ ಹತ್ತಿರ ಪ್ರಪಂಚದ ಅತಿ ದೊಡ್ಡದಾದ ಮಣ್ಣಿನ ಅಣೆಕಟ್ಟು ಹಿರಾಕುಡ್ ಅಣೆಕಟ್ಟು ನಿರ್ಮಾಣವಾಗಿ ಆರ್ಥಿಕತೆಗೆ ವರದಾನವಾಗಿದೆ.ಈ ಅಣೆಕಟ್ಟು ಎರಡು ಬೆಟ್ಟಗಳನ್ನು ಆವರಿಸಿದೆ. ಅವುಗಳೆಂದರೆ. ಲಾಮಡುಂಗಿ ಮತ್ತು ಚಾಂಡಿಲಿ ಡುಂಗುರಿ.ಅಲ್ಲದೆ ಇದು ಏಷ್ಯಾದ ಅತಿದೊಡ್ಡ ಕೃತಕ ಸರೋವರವನ್ನು ಸಹ ಸೃಷ್ಟಿಸಿದೆ. ಛತ್ತೀಸ್ ಗಡ್ ರಾಜ್ಯದ ರಚನೆಯ ನಂತರ ಮಹಾನದಿಯು ಸಂಪೂರ್ಣ ಜಲಾನಯನ ಪ್ರದೇಶವಾಗಿ ಛತ್ತೀಸ್ ಗಡ್ ಅನ್ನು ಆವರಿಸಿದೆ.
1953 ರಲ್ಲಿ ಈ ನದಿಗೆ ಅಣೆಕಟ್ಟು ನಿರ್ಮಿಸುವ ಮುಂಚೆ ಈ ನದಿ ಸಂಬಲ್ಪುರದಲ್ಲಿ ಒಂದು ಮೈಲಿ ಅಗಲವನ್ನು ಹೊಂದಿದ್ದು ಮಾನ್ಸೂನ್ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ನದಿಯಿಂದ ಹೂಳನ್ನು ತೆಗೆದು ಸಾಗಿಸಿ ನದಿಯ ನೀರಿನ ಸಂಗ್ರಹಣ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಇಂದು ಅಣೆಕಟ್ಟು ಕಟ್ಟಿದಾಗಿನಿಂದ ಈ ನದಿ ಬಹುಪಯೋಗಿಯಾಗಿದೆ. ಇಬ್ ಒಂಗ್ ಟೆಲ್ ಇತರ ಸಣ್ಣ ತೊರೆಗಳಿಂದ ಕೂಡಿದ ನದಿಯಾಗಿದ್ದು. ಓಡಿಶಾದ ಧೋಲಪುರ್ ತಲುಪುವವರೆಗೆ ಸರಣಿ ರೇಖೆಗಳಗುಂಟ ಗೋಡೆಯ ಅಂಚುಗಳನ್ನು ಸುತ್ತುತ್ತ ಮುಂದೆ ಸಾಗುತ್ತದೆ. ರಭಸವು ಇಲ್ಲಿಯೇ ಮುಕ್ತಾಯಗೊಂಡು ನದಿಯು ಪೂರ್ವ ಘಟ್ಟಗಳತ್ತ ಹರಿಯುತ್ತ ಸಾಗುತ್ತದೆ.
ಈ ನದಿಯು 40 ಮೈಲಿ ಉದ್ದದ ಸತ್ಕೊಶಿಯಾ ಗಾರ್ಜ್ ಮೂಲಕ ತನ್ನ ದಾರಿಯನ್ನು ಸುಗಮಗೊಳಿಸುತ್ತ ಮುನ್ನಡೆಯುತ್ತ ಸಾಗುತ್ತದೆ . ಈ ನದಿಯು ದಟ್ಟವಾದ ಕಾಡುಗಳನ್ನು ಇಲ್ಲಿ ಈ ನದಿಯ ಸುತ್ತಲಿನ ಬೆಟ್ಟಗಳನ್ನು ಆವರಿಸಿದೆ. ಅಲ್ಲದೆ ಕಣಿವೆಗಳನ್ನು ಬೇಧಿಸುತ್ತ ಸಾಗುತ್ತದೆ.
ಭಾರತದ ಮೇರು ಜೀವಸಂಕುಲದ ಉಸಿರು. ಮಹಾನದಿಯು ಅಗಾಧ ವಿಸ್ತಾರವಾಗಿದ್ದು ತನ್ನದೆಯಾದ ವಿಭಿನ್ನ ದಿಕ್ಕುಗಳಲ್ಲಿ ಹರಿಯುತ್ತ ಇಡೀ ದೇಶದ ನಾನಾ ರಾಜ್ಯಗಳ ವಲಯಗಳಿಗೆ ಆಸರೆಯಾಗಿ ಸದಾ ಪೊರೆಯುತ್ತಿದೆ. ಒರಿಸ್ಸಾದ್ ಕಟಕ್ ನಿಂದ 14 ಕಿಮೀ ನರಾಜ್ ನಲ್ಲಿ ಓಡಿಶಾ ಬಯಲು ಪ್ರದೇಶವನ್ನು ಪ್ರವೇಶಿಸಿ.ಒಂದು ಮೈಲಿ ಅಂತರದಲ್ಲಿ ಎರಡು ಬೆಟ್ಟಗಳ ನಡುವೆ ಹರಿಯುತ ಕಟಕ್ ನದಿಯ ಹರಿವನ್ನು ನಿಯಂತ್ರಿಸಲು ಇಲ್ಲಿ ಬ್ಯಾರೇಜ್ ಅನ್ನು ನಿರ್ಮಿಸಲಾಗಿದೆ.

ಫೋಟೋ ಕೃಪೆ : google
ಹಿರಾಕುಡ್ ಅಣೆಕಟ್ಟನ್ನು ಕಟ್ಟುವದಕ್ಕಿಂತ ಮೊದಲು ಇದು ತನ್ನ ಮೂಲದಿಂದ ಸುಮಾರು 250 ಕಿಮೀ ದೂರದಲ್ಲಿ ಅರಾಂಗ್ ವರೆಗೆ ಮುನ್ನಡೆಯುತ್ತಾ ಇತರ ಬ್ಯಾರೇಜ್ ಗಳಿಗೂ ಕೂಡ ಇದು ವರದಾನವಾಗಿದೆ.ಪ್ರಸ್ತುತ ದೋಣಿಗಳು ಹಿರಾಕುಡ್ ಜಲಾಶಯಕ್ಕೆ ಮಾತ್ರ ಸೀಮಿತವಾಗಿದ್ದು. ನೀರಿನ ಮೊಸಳೆಗಳು, ಗಂಗಾ ಮತ್ತು ಬುಲ್ ಶಾರ್ಕ್ ಗಳು ಆಗಾಗ ಈ ನದಿಯಲ್ಲಿ ವಿವಿಧ ರೀತಿಯ ಮೀನುಗಳು ಕಂಡು ಬರುತ್ತಿದ್ದು ನೂರಾರು ಜನರ ಜೀವನಕ್ಕೆ ಆಧಾರವಾಗಿದೆ.
ಈ ನದಿಯು ಓಡಿಶಾದ ಜೀವನಾಡಿಯಾಗಿದ್ದು.ಈ ನದಿಯು 900 ಕಿಮೀವರೆಗೆ ನಿಧಾನವಾಗಿ ಹರಿಯುತ್ತಾ ಭಾರತದ ಇತರ ನದಿಗಳಿಗಿಂತ ಹೆಚ್ಚು ಪ್ರಮಾಣದ ಹೂಳನ್ನು ಸಂಗ್ರಹಿಸುವುದಲ್ಲದೆ ಅಗಾಧವಾದ ಸಂಪನ್ಮೂಲಗಳನ್ನು ತನ್ನೊಳಗೆ ಸಂರಕ್ಷಿಸುತ ಪ್ರಾಕೃತಿಕ ಪರಿಸರದ ಸಮತೋಲನಕೆ ಸಹಕಾರಿಯಾಗಿದೆ.ಪ್ರಾಚೀನ ಕಾಲದಲ್ಲಿ ಕಟಕ್ ಮತ್ತು ಸಂಬಲ್ಪುರ್ ನಗರಗಳು ಪ್ರಾಚೀನ ವ್ಯಾಪಾರ ಕೇಂದ್ರಗಳಾಗಿದ್ದು ಆಗಿನ ಕಾಲದಲ್ಲಿಯೂ ಕೂಡ ಈ ನದಿಯು ಅನುಕೂಲಕರವಾಗಿತ್ತು ಅಲ್ಲದೆ ಟಾಲೆಮಿಯ್ ಕೃತಿಗಳಲ್ಲಿಯೂ ಈ ನದಿಯ ಉಲ್ಲೇಖವವಿದ್ದು ಈ ನದಿಗೆ ಮನದಾ ಎಂದು ಕರೆಯಲಾಗಿದೆ.ಇಂದೂ ಈ ನದಿಯ ಕಣಿವೆಯು ಅತ್ಯಂತ ಫಲವತ್ತಾದ ಮಣ್ಣು ಮತ್ತು ಕೃಷಿಗೆ ಅತ್ಯಂತ ಹೆಸರುವಾಸಿಯಾಗಿದೆ.
ಈ ನದಿಯ ಜಲಾನಯನ ಪ್ರದೇಶವು ಕೃಷಿಗೆ ಅತ್ಯಂತ ಯೋಗ್ಯವಾಗಿದ್ದು ಒಟ್ಟು 80,000 ಚದರ ಕಿಮೀ ಪ್ರದೇಶವು ಕೃಷಿಗೆ ಯೋಗ್ಯವಾಗಿದ್ದು ಜನರ ಜೀವನಕ್ಕೆ ಅನುಕೂಲಕಾರಿಯಾಗಿದೆ. ಇದು ದೇಶದ ಒಟ್ಟು ಕೃಷಿ ಯೋಗ್ಯ 4% ಆಗಿದೆ ಅಲ್ಲದೆ ಇದು 627 MW ನಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು.ಕೆಲವು ಪ್ರದೇಶಗಳಿಗೆ ಬೆಳಕು ನೀಡುವ ದಾರಿದೀಪವಾಗಿದೆ.ಒಟ್ಟಿನಲ್ಲಿ ಈ ನದಿ ಬಹುಪಕಾರಿಯಾಗಿದ್ದು ವಿವಿಧ ಉದ್ದೇಶಗಳನ್ನು ಹೊಂದಿದೆ.

ಫೋಟೋ ಕೃಪೆ : google
ಈ ನದಿಯು ಎಷ್ಟು ಅನುಕೂಲ ಇದೆಯೋ ಅಷ್ಟೇ ಕೂಡ ಅನಾನುಕಲಕ್ಕೂ ಎಡೆಮಾಡಿದೆ.ಈ ನದಿಯನ್ನು ಒರಿಸ್ಸಾದ ಕಣ್ಣೀರಿನ ನದಿ ಅಥವಾ ದುಃಖದ ನದಿ ಎನ್ನುವರು ಈ ನದಿಯು ಪ್ರವಾಹಕ್ಕೆ ಇಡೀ ಒರಿಸ್ಸಾ ಸಂಕಷ್ಟ ಎದುರಿಸುತ್ತಿದೆ.ಈ ನದಿಯ ಪ್ರವಾಹ ತಪ್ಪಿಸಲು ಅಣೆಕಟ್ಟುಗಳು ಬ್ಯಾರೇಜ್ ಗಳು ಕಾಲುವೆಗಳನ್ನು ನಿರ್ಮಿಸಲಾಗಿದ್ದು ಪ್ರವಾಹ ನಿಯಂತ್ರಣ ಮಾಡಲು ಸಹಕಾರಿಯಾಗಿವೆ. ಇಂದು ಈ ನದಿಯು ಸಾಕಷ್ಟು ಅನುಕೂಲ ಹೊಂದಿ ಒರಿಸ್ಸಾ ಛತ್ತೀಸ್ ಗಡ ರಾಜ್ಯಗಳಿಗೆ ವರದಾನವಾಗಿ ವಿವಿಧ ರಾಜ್ಯಗಳಿಗೆ ಸಹಕಾರಿಯಾಗಿದೆ.
ಒಟ್ಟಿನಲ್ಲಿ ಮಹಾನದಿಯು ದೇಶದ ಕೃಷಿ,ಕೈಗಾರಿಕಾ ವಲಯಕ್ಕೆ ಆಸರಾಗುತ್ತ ದೇಶದ ಆರ್ಥಿಕತೆಗೆ ಬಲವಾಗಿದೆ. ಈ ನದಿಯನ್ನು ಸಂರಕ್ಷಿಸುತ ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಈಗ ಜಲಸಂಪನ್ಮೂಲ ಬರಿದಾಗುತ್ತಿದ್ದು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಈ ನದಿಯನ್ನು ಪರಿಚಯಿಸೋಣ.
ಹಿಂದಿನ ಸಂಚಿಕೆಗಳು :
- ಮಧ್ಯ ಭಾರತದ ಜೀವದಾತೆ : ಗೋದಾವರಿ ನದಿ
- ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು : ಭೀಮಾ ನದಿ
- ದೈವೀಕತೆಗೆ ಹೆಸರು ದೇವತೆಗಳ ಉಸಿರು – ಸರಸ್ವತಿ ನದಿ
- ನಿಸ್ವಾರ್ಥಕ್ಕೆ ಹೆಸರು ಸ್ನೇಹಕ್ಕೆ ಉಸಿರು – ವೇದಾವತಿ ನದಿ
- ಅವಿನಾಶ ಸೆರೆಮನಿ
