‘ನನ್ನ ಜೀವ’ ಕವನ – ಅಪ್ಪಯ್ಯ ಯು ಯಾದವ್

ನಿನಗೆಬೇಕೇ ನನ್ನ ಜೀವ…ಕೊಡುವೆ ನಾನು ನಿನಗೆ ಜೀವ…ಅಪ್ಪಯ್ಯ ಯು ಯಾದವ್ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವನದ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ನಿನ್ನ ಕಂಡೆನಾನೊಂದುದಿನ
ನಗೆಯಬೀರಿದಾ ವದನ l
ಮರೆಯದಾದೆನು ಆ ಸುಧಿನ
ಎಂದೆಂದೂ ನಗುತಿರು ನೀನನುದಿನll

ನನ್ನಮನಕೆನೀ ಲಗ್ಗೆ ಇಟ್ಟೆ
ನನ್ನ ಹೃದಯದಿ ಬೇರು ಬಿಟ್ಟೆ
ನಿನ್ನ ಮರೆತರೆ ನಾನು ಕೆಟ್ಟೆ
ನೀ ನನ್ನ ತೋಟದಿ ಹಾರು ಚಿಟ್ಟೆl

ಓದುಮರೆತು ಪ್ರೇಮ ಬೇಡ
ಮೋಹಜಾಲದಿ ಬೀಳಬೇಡ
ಏನೆಬಂದರು ಹೆದರಬೇಡ
ನನ್ನಮರೆತು ನೀ ಬಾಳ ಬೇಡl

ನಿನಗೆಬೇಕೇ ನನ್ನ ಜೀವ
ಕೊಡುವೆ ನಾನು ನಿನಗೆ ಜೀವ
ಕೊನೆಯವರೆಗೂ ಜತೆಗೆ ಬೆರೆವ
ಎಂದೆಂದಿಗೂ ನೀನೆ ನನ್ನ ಜೀವ


  • ಅಪ್ಪಯ್ಯ ಯು ಯಾದವ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading