‘ನನ್ನ ಮಣ್ಣು ನನ್ನ ದೇಶ’ ಈ ಅಭಿಯಾನವು ನಮ್ಮ ಏಕತೆ ಮತ್ತು ಸಮಗ್ರತೆಯ ಪ್ರಜ್ಞೆಯನ್ನು ಬಲಿಷ್ಠವಾಗಿಸಲು ದೇಶದಾದ್ಯಂತ ಸಂಗ್ರಹಿಸಿದ ಮಣ್ಣಿನಿಂದ ಅಮೃತ ಉದ್ಯಾನವನವನ್ನು ನಿರ್ಮಿಸುವ ಗಟ್ಟಿ ನಿಲುವು ಈ ಅಭಿಯಾನದು. ಅಕ್ಟೋಬರ್ 30 ಮತ್ತು 31, 2023 ರಂದು ದೆಹಲಿಯಲ್ಲಿ ಜರುಗಿತು, ಅದರ ಕುರಿತು ಸಂಕ್ಷಿಪ್ತ ವರದಿ…
ಉದ್ದೇಶ: ಮಣ್ಣಿಗೆ ನಮನ ವೀರರಿಗೆ ವಂದನೆ.
ಭಾರತ ಸರಕಾರದ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ಕಾರ್ಯಕ್ರಮ ಎಂದೆನಿಸಿಕೊಳ್ಳಲು ಬಹು ಪ್ರಮುಖ್ಯತೆಯನ್ನು ಪಡೆದ ಏಕೈಕ ಕಾರ್ಯಕ್ರಮ ಇದಾಗಿದ್ದು,
ಭಾರತ ದೇಶದಲ್ಲಿರುವ ಪ್ರತಿ ಗ್ರಾಮಗಳಿಂದ ತಮ್ಮ ಊರಿನ ಹಾಗೂ ತಮ್ಮ,ತಮ್ಮ ಜಿಲ್ಲಾವಾರುವಾಗಿ ರಾಜ್ಯವಾರುವಾಗಿ ಮಣ್ಣನ್ನು ಕಳಸದಲ್ಲಿ ಸಂಗ್ರಹಿಸಿ ದೇಶದ ರಾಜಧಾನಿಗೆ ಹೋತ್ತೋಯ್ಯುವ ಅಮೃತ ಕಳಸವೆ ಇದು.

‘ನನ್ನ ಮಣ್ಣು ನನ್ನ ದೇಶ’ ಈ ಅಭಿಯಾನವು ನಮ್ಮ ಏಕತೆ ಮತ್ತು ಸಮಗ್ರತೆಯ ಪ್ರಜ್ಞೆಯನ್ನು ಬಲಿಷ್ಠವಾಗಿಸಲು ದೇಶದಾದ್ಯಂತ ಸಂಗ್ರಹಿಸಿದ ಮಣ್ಣಿನಿಂದ ಅಮೃತ ಉದ್ಯಾನವನವನ್ನು ನಿರ್ಮಿಸುವ ಗಟ್ಟಿ ನಿಲುವು ಈ ಅಭಿಯಾನದು.
ಅಕ್ಟೋಬರ್ 30 ಮತ್ತು 31, 2023 ರಂದು ಕರ್ತವ್ಯ ಪಥ, ಇಂಡಿಯಾ ಗೇಟ್, ದೆಹಲಿಯಲ್ಲಿ ಜರುಗಿದ್ದು, ದೇಶದ ಎಲ್ಲಾ ರಾಜ್ಯಗಳಿಂದ ಮಣ್ಣನ್ನು ಸಂಗ್ರಹಿಸಿ ಪ್ರತಿ ರಾಜ್ಯಗಳಿಂದ 18 ರಿಂದ 29 ವಯಸ್ಸಿನ ಯುವಕ-ಯುವತಿಯರನ್ನು ಭಾಗಿದಾರರಾಗಿ, ಸ್ವಯಂ ಸೇವಕರಾಗಿ, ವಯೋ ವೀರ ಸ್ವಯಂ ಸೇವಕರಾಗಿ ಭಾಗವಹಿಸಲು ಕೇಂದ್ರ ಸರ್ಕಾರ ಪರವಾನಿಗಿ ನೀಡಿತು.
ಭಾರತ ಸರಕಾರ ನೆಹರು ಯುವ ಕೇಂದ್ರ, ವಿಜಯಪುರ ಇವರ ಸಹಯೋಗದಲ್ಲಿ ದೇಶದ ರಾಜಧಾನಿಗೆ ನಮ್ಮ ಪಯಣ.
ಈ ನಮ್ಮ ಕರುನಾಡಿನಿಂದ ದಿಲ್ಲಿಕಡೆಗಿನ ಅನುಭವದ ಮಾತು ನಮ್ಮೀ ಬರವಣಿಗೆಯಲ್ಲಿ, ಬೆಂಗಳೂರಿನಿಂದ ದೆಹಲಿಯವರೆಗೆ ಕರ್ನಾಟಕ ರಾಜ್ಯದಿಂದ ಹೊರಡುವ ಭಾಗಿದಾರರಿಗೆ ವಿಶೇಷವಾದ ಪ್ರತ್ಯೇಕ ರೈಲಿನ ವ್ಯವಸ್ಥೆ ಭಾರತ ಸರಕಾರ ಒದಗಿಸಿತ್ತು. ಜೊತೆಗೆ ಸರಿಯಾದ ಅಲ್ಪೋಪಹಾರ ಹಾಗೂ ಉಪಹಾರದ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿಯೇ ಇತ್ತು.. ಸರಿ ಸುಮಾರು 2,500 ಕಿ.ಮೀ ಅಂತರದ ಮೂರೂ ದಿನದ ರೈಲಿನ ಪ್ರಯಾಣ ಕರ್ನಾಟಕ ರಾಜ್ಯದಿಂದ ದೆಹಲಿಗೆ ಆಯ್ಕೆಯಾದ 1,030 ಜನ ಯುವಕ-ಯುವತಿಯರಲ್ಲಿ ನಾನು ಕೂಡ ಒಬ್ಬ ಭಾಗಿದರ ಎಂದು ಹೆಮ್ಮೆಯ ಅನುಭವದ ಮನ ನನ್ನದಾಯಿತು.. ಜೊತೆಗೆ ದೇಶದ ಪ್ರಧಾನ ಮಂತ್ರಿಗಳನ್ನು ನೋಡುವ ಹಂಬಲ ಒಂದಕಡೆ ಮೇಲಾಗಿ ಈ ಕಾರ್ಯಕ್ರಮದ ಮುಖ್ಯ ಉದ್ಘಾಟರು ಮಾನ್ಯ ಪ್ರಧಾನ ಮಂತ್ರಿಗಳೆ ಎಂದು ಕೇಳಿದಾಗ ಅತೀವವಾದ ನೋಡುವ ಹಂಬಲ ಮತ್ತಷ್ಟೇರಿತು.

ಹಳ್ಳಿಯಿಂದ ದಿಲ್ಲಿಯವರೆಗೆ ಬಂದ ನಾವು, ನಮ್ಮ ಹೆಮ್ಮೆಯ “ಕನ್ನಡ ರಾಜ್ಯೋತ್ಸವ”ವೂ ಮಾರನೇ ದಿನ ಇರುವುದರಿಂದ ದೇಶದ ರಾಜಧಾನಿಯಲ್ಲೇ ಎಂದಾಗ ಎಲ್ಲಿಲ್ಲದ ಹುರಪು ನಮ್ಮ ಕನ್ನಡಿಗರದ್ದಾಯಿತು..ವಿಶೇಷ ಏನೆಂದರೆ “ಕನ್ನಡ ರಾಜ್ಯೋತ್ಸವ”ವನ್ನು ದೆಹಲಿಯ ಕರ್ನಾಟಕ ಭವನದಲ್ಲಿ ಎಲ್ಲ ನಮ್ಮ ಕನ್ನಡಿಗರು ಸಂಭ್ರಮ ಸಡಗರದಿ ಆಚರಿಸಿ ಆನಂದಿಸಿದರು. ಜೀವನದಲ್ಲಿ ಒಂದೊಳ್ಳೆ ಅನುಭವ ನೀಡಿದ ನಮ್ಮ ದೆಹಲಿಯ ಪಯಣ ನಿಜಕ್ಕೂ ಹುಮ್ಮಸಿನ ಮಾತು.
- ಪ್ರವೀಣ ಮ ಹೊಸಮನಿ
