ಎಲ್ಲರೂ ಅವರವರ ಗಂಡನ ಬಗ್ಗೆ ಬರೆದುಕೊಂಡಾಗ, ನಮ್ಮ ಕವಿಯತ್ರಿ ವಸಂತ ಗಣೇಶ್ ಅವರು ತಾವೇನು ಕಮ್ಮಿಯಿಲ್ಲ ಅಂತ ನಾಲ್ಕು ಸಾಲುಗಳನ್ನ ತಮ್ಮವನ ಬಗ್ಗೆ ಬರೆದುಕೊಂಡಿದ್ದಾರೆ, ಚಂದದ ಕವನ ತಪ್ಪದೆ ಓದಿ…
ಮಲ್ಲೆ ಹೂವ ಮುಡಿಸದವ
ಸನ್ನೆ ಮಾತ ಅರಿಯದವ
ಕಣ್ಣ ಭಾಷೆ ತಿಳಿಯದವ
ಅವನೇ ಅವನೇ ನನ್ನವ
ಹಿಂದೆ ಮುಂದೆ ಸುತ್ತದವ
ಬೆಣ್ಣೆ ಮಾತ ಆಡದವ
ಸುಳ್ಳು ಮೋಸ ಅರಿಯದವ
ಅವನೇ ಅವನೇ ನನ್ನವ
ಚಲುವ ಚೆನ್ನೆ ಎನ್ನದವ
ಚಿನ್ನದೊಡವೆ ತೊಡಿಸದವ
ನೋವನೆಂದು ನೀಡದವ
ಅವನೇ ಅವನೇ ನನ್ನವ
ಹೆಚ್ಚು ಮಾತು ಅಡದವ
ಹುಚ್ಚು ಪ್ರೀತಿ ತೋರದವ
ಹೆಚ್ಚೇ ಮನವ ತಟ್ಟಿದವ
ಅವನೇ ಅವನೇ ನನ್ನವ
- ವಸಂತ ಗಣೇಶ್ – ಲೇಖಕರು,ಕವಿಯತ್ರಿ
