ವಿವಾಹ ವಾರ್ಷಿಕೋತ್ಸವಕ್ಕೆ ನಲುಮೆಯ ಮಡದಿಗೆ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದ ಈ ಕವಿತೆ.ಮುಂದೆ ಓದಿ…
ನನ್ನೊಳಿಳಿದು ನನ್ನೊಳುಳಿದು
ಹರಿಸಿ ಪ್ರೀತಿ ಧಾರೆಯ
ನನ್ನ ವರಿಸಿ ಒಲವ ಸುರಿಸಿ
ಬಾಳಲಿಳಿದು ಬೆರೆತೆಯ
ಕಂಗಳೊಳಗೆ ಪ್ರೀತಿ ಎರೆದು
ಬಳಿಗೆ ಬಂದು ನಿಂದೆಯ
ತಿಂಗಳಾಡೊ ಹೊತ್ತಿನಲ್ಲಿ
ತಾಪದಲ್ಲಿ ಬೆಂದೆಯ
ನನ್ನೊಳೆನಗೆ ಒಲಿದು ಬಂದು
ಬೆರೆತ ಜೋಡಿ ಚುಕ್ಕಿಯು
ಗಾಳದೊಳಗೆ ಸಿಕ್ಕಿದಂತ
ಬಾಳಲಿಳಿದ ಹಕ್ಕಿಯು
ತಿಂಗಳೊಳಗೆ ಹೊಳೆವ ತಾರೆ
ಮನದೊಳಿಳಿದ ನೀರೆಯು
ಏಳು ಏಳು ಜನ್ಮ ಜೊತೆಗೆ
ಕೂಡಿ ಬಾಳೊ ಮೋರೆಯು
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
