ಅವ್ವ ಅವ್ವಾ ಎಂದೋಡಿದವನು, ನಾ ಓಡುತಲೇ ಇರುವೆ…ಕವಿ ಟಿ ತ್ಯಾಗ ರಾಜು ಅವರ ಲೇಖನಿಯಲ್ಲಿ ಅರಳಿದ ಅವ್ವನ ಮೇಲಿನ ಕವನ, ತಪ್ಪದೆ ಓದಿ…
ನನ್ನವ್ವ
ತಟ್ಟಿದ ರೊಟ್ಟಿಯೊಳಗ
ಸಿಹಿಯ ಹೂರಣವೆ ತುಂಬಿತ್ತು…
ಅವಳೆಂದು
ಕಂದಗೆ ಪ್ರೀತಿ ತುತ್ತನು
ಕೊಡುವಾಗ ಕೈ ಒಂದು ಮುಂದಿತ್ತು…
ಮನೆಮಂದಿಗೆಲ್ಲ
ಬಡಿಸುವಾಗ ಅವ್ವ ದಣಿದಂತೆ
ಎಂದೂ ಕಾಣಲೇ ಇಲ್ಲ ನಂಗೊತ್ತು…
ಆ ಪ್ರೀತಿ ಪ್ರೇಮ
ಮಮತೆ ಮಮಕಾರ ಗುಣಗಳ
ಹೊತ್ತಿರುವ ಅವ್ವಳೇ ನನಗ ಸಂಪತ್ತು….
ನೋಯಿಸದಿರಿ ಆ ಮೊಗವ
ಜೀವ ಇರೋವರೆಗೂ ಮಕ್ಕಳು
ಅವ್ವನ ಸ್ಥಾನ ತುಂಬಲಾರರು ಯಾರು ಇವತ್ತು…
ಅವ್ವ ಅವ್ವಾ ಎಂದೋಡಿದವನು
ನಾ ಓಡುತಲೇ ಇರುವೆ ಅದಕ್ಕೆ ನನಗೆ
ಅವಳ ಆಶೀರ್ವಾದ ಇರುತೈತಿ ಯಾವ ಹೊತ್ತು …
- ಟಿ ತ್ಯಾಗ ರಾಜು, ಮೈಸೂರು
