ನಾನೊಬ್ಬ ಹುಚ್ಚ…! ಕವನ – ಪ್ರೊ. ಸಿದ್ದು ಸಾವಳಸಂಗ

ನಾನು …ನಾನು… ಎನ್ನುವರ ಮುಂದೆ ನೀವೇ ದೊಡ್ಡವರೆಂದು ಕೈ ಮುಗಿದು ಮುಂದೆ ಸಾಗುತ್ತೇನೆ !! ನಾನೊಬ್ಬ ಹುಚ್ಚ …ಪ್ರೊ. ಸಿದ್ದು ಸಾವಳಸಂಗ ಅವರ ಭಾವಪೂರ್ವಕ ಕವನವನ್ನು ತಪ್ಪದೆ ಮುಂದೆ ಓದಿ…

ನಾನೊಬ್ಬ ಮಹಾಹುಚ್ಚ…
ಎದುರಿಗೆ ಬಂದವರ ಕೈಕುಲುಕಿ
ಕುಶಲೋಪರಿ ವಿಚಾರಿಸುತ್ತೇನೆ !
ಅವರ ಸಾಧನೆಗಳನ್ನು ಹೊಗಳುತ್ತೇನೆ !
ಅವರು ದೊಡ್ಡವರೇ ಆಗಲಿ
ಸಣ್ಣವರೇ ಆಗಲಿ
ಎಲ್ಲರೊಂದಿಗೆ ಬೆರೆಯುತ್ತೇನೆ !
ಅವರ ಸ್ನೇಹ ಸಂಪಾದಿಸಲು ಬಯಸುತ್ತೇನೆ !
ಅವರ ಮುಖದ ಮಂದಹಾಸ
ನೋಡಿ ನಗೆ ಬೀರುತ್ತೇನೆ !
ಅವರೊಂದಿಗೆ ಮಕ್ಕಳಿದ್ದರೆ
ಅವರನ್ನು ಹುರುದುಂಬಿಸುತ್ತೇನೆ !
ಅವರು ಚೆನ್ನಾಗಿ ಓದಿ ಮುಂದೆ
ಬರಲೆಂದು ಶುಭ ಹಾರೈಸುತ್ತೇನೆ !
ಪರಿವಾರದೊಂದಿಗೆ ಮನೆಗೆ
ಬರಲು ಆಹ್ವಾನ ನೀಡುತ್ತೇನೆ !
ಒಂದು ವೇಳೆ ಯಾರಾದರೂ
ಮನೆಗೆ ಬಂದರೆ ಪ್ರೀತಿ-ಸ್ನೇಹದಿಂದ
ಅವರಿಗೆ ಉಪಹಾರ ಚಹಾ
ನೀಡಿಯೇ ಕಳಿಸುತ್ತೇನೆ !

ಆದರೂ…..
ಕಾಲ ಕೆಟ್ಟು ಹೋಗಿದೆ !
ಜನ ಮುಂದೊಂದು ಹಿಂದೊಂದು ಮಾತನಾಡುತ್ತಾರೆ !
ನಾನು ತೋರುವ ಪ್ರೀತಿ-ಪ್ರೇಮಕ್ಕೆ
ಅವರ ಪ್ರತಿಕ್ರಿಯೆ ನಕಾರಾತ್ಮಕವಾಗಿರುತ್ತದೆ !
ತಾವೇ ಜಗತ್ತನ್ನು ಗೆದ್ದ
ಅಲೆಕ್ಸಾಂಡರ್ ನಂತೆ ವರ್ತಿಸುತ್ತಾರೆ !
ತಮ್ಮ ಬಗ್ಗೆ ಇಲ್ಲಸಲ್ಲದ
ಜಂಭ ಕೊಚ್ಚಿಕೊಳ್ಳುತ್ತಾರೆ !
ತಮ್ಮ ಸಿರಿವಂತಿಕೆಯನ್ನು
ನನ್ನ ಮುಂದೆ ಪ್ರದರ್ಶಿಸುತ್ತಾರೆ !
ಆದರೆ…
ನಾನು ಎಲ್ಲವನ್ನೂ ನೋಡಿ
ಮೌನಕ್ಕೆ ಶರಣಾಗುತ್ತೇನೆ !
ನೀವೇ ದೊಡ್ಡವರೆಂದು ಕೈ ಮುಗಿದು ಬೇಸರದಿಂದ ಮುಂದೆ ಸಾಗುತ್ತೇನೆ !!


  • ಪ್ರೊ. ಸಿದ್ದು ಸಾವಳಸಂಗ, ವಿಜಯಪುರ ( ಕಾವ್ಯನಾಮ – ಚಿರಂಜೀವಿ )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading