‘ನಾನು ಮತ್ತು ಅವರು’ ಕವನಗಳು

ನಾನು ತೋರಿದ ವಿಶ್ವಾಸ-ನಂಬಿಕೆಗೆ ಅವರು ದ್ರೋಹ ಬಗೆದರು, ಯಾರವರು …ಪ್ರೊ. ಸಿದ್ದು ಸಾವಳಸಂಗ ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ….

ನಾನು ತೋರಿದ
ಕಾಳಜಿಗೆ ಅವರು
ಅವರು ಕಿಲುಬು ತೋರಿದರು !!

ನಾನು ತೋರಿದ
ಪ್ರೀತಿ-ಸ್ನೇಹಕ್ಕೆ
ಅವರು ಮೋಸ ಮಾಡಿದರು !!

ನಾನು ತೋರಿದ
ಸ್ನೇಹಾಭಿಮಾನಕ್ಕೆ
ಅವರು ದುರಭಿಮಾನ ತೋರಿದರು !!

ನಾನು ತೋರಿದ
ಸಹೋದರತ್ವ ಭಾವಕ್ಕೆ
ಅವರು ವಂಚನೆ ಮಾಡಿದರು !!

ನಾನು ತೋರಿದ
ಸತ್ಯ-ನ್ಯಾಯಕ್ಕೆ ಅವರು
ಅನ್ಯಾಯ ಮಾಡಿದರು !!

ನಾನು ತೋರಿದ
ವಿಶ್ವಾಸ-ನಂಬಿಕೆಗೆ
ಅವರು ದ್ರೋಹ ಬಗೆದರು  !!

ನಾನು ತೋರಿದ
ತುಂಬು ಭರವಸೆಗೆ
ಅವರು ತಣ್ಣೀರೆರಚಿದರು !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಕಾವ್ಯನಾಮ – ಚಿರಂಜೀವಿ, ವಿಜಯಪುರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading