ಕವಿ, ಲೇಖಕರು, ವಕೀಲರು ಆಗಿರುವ ನಾರಾಯಣ ಸ್ವಾಮಿ ಅವರಿಗೆ ಆಕೃತಿಕನ್ನಡದಿಂದ ಹುಟ್ಟುಹಬ್ಬಕ್ಕೆ ಶುಭಕೋರುತ್ತಾ, ಅವರ ರಚನೆಯ ಒಂದು ಗಜಲ್ ಓದುಗರ ಮುಂದೆ, ತಪ್ಪದೆ ಮುಂದೆ ಓದಿ…
ನನ್ನೊಳಗೆ ಉಕ್ಕುವ ಆವೇಶವನು ನಾನೇ ಶಪಿಸಿಕೊಳ್ಳುತ್ತೇನೆ
ನನ್ನೆದೆಯೊಳಗಿನ ಹೃದಯವನು ನಾನೇ ದ್ವೇಷಿಸಿಕೊಳ್ಳುತ್ತೇನೆ
ಇಂದು ಲೋಕದ ಜನರ ಕಣ್ಣಿಗೆ ಜಗತ್ತೆ ಬೆತ್ತಲೆಯಾಗಿ ಕಾಣುತಿದೆ
ಮನದಲಿ ಅಂಧಕಾರದ ಕತ್ತಲನು ನಾನೇ ಸೃಷ್ಟಿಸಿಕೊಳ್ಳುತ್ತೇನೆ
ದೇಹ ಚರ್ಮದ ಬಣ್ಣವನು ನೋಡಿ ಜಾತಿ ನಿರ್ಧರಿಸುತ್ತಾರೆ ಇಲ್ಲಿ
ಕಪ್ಪು ಚರ್ಮದೊಳಗಿನ ರಕ್ತವನು ನಾನೇ ಪರೀಕ್ಷಿಸಿಕೊಳ್ಳುತ್ತೇನೆ.
ಹಾದಿ ಬೀದಿಯಲಿ ರಂಗು ರಂಗಿನ ದೀಪಗಳು ಪ್ರಕಾಶಿಸುತಿವೆ
ಗುಡಿಸಲಿನಲಿ ಬೆಳಕಿಗಾಗಿ ದೀಪನು ನಾನೇ ಬೆಳಗಿಸಿಕೊಳ್ಳುತ್ತೇನೆ.
ಯಾವ ಬೀದಿಯಲಿ ಯಾವ ಪಾತ್ರವನು ಮಾಡಲಿ ಈ ನಾನಿ
ಮುಖವಾಡ ಶಾಶ್ವತವಲ್ಲವೆಂದು ನಾನೇ ತೆಗೆಯಿಸಿಕೊಳ್ಳುತ್ತೇನೆ
- ನಾರಾಯಣ ಸ್ವಾಮಿ
