ಪರಿಸರಕ್ಕೆ ಸಲ್ಲಿಸು ಅನುದಿನ ನಮನ

ಅರಿಯದೆ ಮಾಡಿದ ಪಾಪಕ್ಕೆ ಕ್ಷಮೆಯುಂಟು ! ಅರಿತು ಅರಿತು ಮಾಡಿದ ಪಾಪಕ್ಕೆ ಕ್ಷಮೆಯುಂಟೆ !!…ಪ್ರೊ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….

ಬಿಸಿಲ ಬೇಗೆಯನ್ನು ಸಹಿಸಲಾಗದು ಇಂದು !
ಇನ್ನೆಂಥ ಕಾಲ ಬರುವುದು ಗೊತ್ತಿಲ್ಲ ಮುಂದು !!

ಗಿಡ ಮರಗಳ ಕಡಿದು ಪರಿಸರ ನಾಶ ಮಾಡಿದ ಮಾನವ !
ಮಳೆ ಬೆಳೆಯೆಲ್ಲ ಮಾಯವಾಗಿ ಕಾಲವು ಬಂದಿತು ಬಿಸಿ ಗಾಳಿಯ ಸೇವಿಸುವ !!

ದುರಾಸೆಯ ನಮಗೆ ಮುಂದಿನ ಘೋರತೆಯ ಬಗ್ಗೆ ಅರಿವಿಲ್ಲ !
ನಾವು ದುಡ್ಡು ಮಾಡಿಕೊಂಡು ಚೆನ್ನಾಗಿ ಬದುಕಿದರೆ ಸಾಕಲ್ಲ !!

ನೀನು ಬಿಟ್ಟ ನಿಟ್ಟುಸಿರನೇ ನೀನು ಕುಡಿಯಬೇಕು !
ನೀನು ಮಾಡಿದ ಪಾಪದ ಫಲವನ್ನು ನೀನೆ ಅನುಭವಿಸಬೇಕು !!

ಅರಿಯದೆ ಮಾಡಿದ ಪಾಪಕ್ಕೆ ಕ್ಷಮೆಯುಂಟು !
ಅರಿತು ಅರಿತು ಮಾಡಿದ ಪಾಪಕ್ಕೆ ಕ್ಷಮೆಯುಂಟೆ !!

ಮುಂದೊಂದು ದಿನ ಹಣ ಸುರಿದರು ಪ್ರಾಣವಾಯು ಸಿಗಲಿಕ್ಕಿಲ್ಲ !
ಆಗ ನೀನು ನೂರಾರು ದೇವರ ಬೇಡಿಕೊಂಡರು ಉಳಿಯುವುದಿಲ್ಲ !!

ಇರುಳ ಕಂಡ ಬಾವಿಗೆ ಯಾರಾದರೂ ಹಗಲು ಬೀಳುವುದುಂಟೆ !
ಹಗಲೇ ಅಡಗಿಕೊಳ್ಳಲು ನಿನಗೆ ಈಗ ಎಲ್ಲಿಯಾದರೂ ತಾಣವುಂಟೆ !!

ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ !
ಎಲ್ಲ ಕೆಲಸವ ಬದಿಗೊತ್ತಿ ಸಸಿಯ ನೆಟ್ಟು ಪೂಷಿಸದಿದ್ದರೆ ನಿನ್ನ ಸಂತತಿ ಬದುಕುವುಳಿಯುದಿಲ್ಲ !!

ಮಕ್ಕಳಂತೆ ನಿನ್ನ ಪೋಷಿಸುವ ಪರಿಸರ ತಾಯಿ ಸಮಾನ !
ಸಲ್ಲಿಸು ಅನುದಿನ ಅದಕ್ಕೆ ತುಂಬು ಹೃದಯದ ನಮ ನ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW